ಚಲಿಸುತ್ತಿದ್ದ ಟ್ರಕ್ಕೊಂದರಿಂದ ನೇತಾಡುತ್ತಿದ್ದ ಹಗ್ಗ ಬೈಕ್ ಸವಾರನ ಕುತ್ತಿಗೆಗೆ ಸುತ್ತಿಕೊಂಡು ನೆಲಕ್ಕೆ ಬೀಳಿಸಿದರೂ ಸವಾರ ಅಪಾಯದಿಂದ ಪಾರು!
ಮುತ್ತು ನೆಲಕ್ಕೆ ಬಿದ್ದಿದ್ದನ್ನು ಗಮನಿಸಿದ ಸುತ್ತಮುತ್ತಲಿನ ಜನ ಅವನ ನೆರವಿಗೆ ಧಾವಿಸಿದ್ದಾರೆ. ಏನು ನಡೆಯಿತು ಅಂತ ಅರ್ಥಮಾಡಿಕೊಳ್ಳಲು ಮುತ್ತುಗೆ ಒಂದೆರಡು ನಿಮಿಷ ಬೇಕಾಗಿದೆ.
ವೇಗವಾಗಿ ಚಲಿಸುತ್ತಿದ್ದ ಟ್ರಕ್ಕೊಂದರಿಂದ ನೇತಾಡುತ್ತಿದ್ದ ಹಗ್ಗ (rope) ದ್ವಿಚಕ್ರ ವಾಹನ ಸವಾರನ ಕುತ್ತಿಗೆಗೆ ಸುತ್ತಿ ಅವನನ್ನು ದೊಪ್ಪನೆ ಹಿಂಬದಿಗೆ ಬೀಳಿಸಿದ ಒಂದು ಆಕಸ್ಮಿಕ ಅಪಘಾತ ತಮಿಳುನಾಡು ರಾಜ್ಯದ ತೂತ್ತುಕುಡಿಯಲ್ಲಿ (Thoothukudi) ಸಂಭವಿಸಿದೆ. ಅಪಘಾತದ ಪೂರ್ತಿ ಸನ್ನಿವೇಶ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರ ಪವಾಡಸದೃಶ (miraculously) ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ತೂತ್ತುಕುಡಿ ಜಿಲ್ಲೆಯ ಸಿವೈಕುಂಟಂ ಪಟ್ಟಣದ ಮುತ್ತು ಎಂದು ಗುರುತಿಸಲಾಗಿರುವ ಮುತ್ತು ದಿನನಿತ್ಯದಂತೆ ಕೆಲಸಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಎರಳ್ ಪ್ರದೇಶವನ್ನು ದಾಟಿತ್ತಿದ್ದಾಗ ಹಗ್ಗ ಅವನ ಕುತ್ತಿಗೆಗೆ ಬಿದ್ದಿದೆ.
ಮುತ್ತು ನೆಲಕ್ಕೆ ಬಿದ್ದಿದ್ದನ್ನು ಗಮನಿಸಿದ ಸುತ್ತಮುತ್ತಲಿನ ಜನ ಅವನ ನೆರವಿಗೆ ಧಾವಿಸಿದ್ದಾರೆ. ಏನು ನಡೆಯಿತು ಅಂತ ಅರ್ಥಮಾಡಿಕೊಳ್ಳಲು ಮುತ್ತುಗೆ ಒಂದೆರಡು ನಿಮಿಷ ಬೇಕಾಗಿದೆ.
ಅಸಲಿಗೆ ಸಿಸಿಟಿವಿ ಫುಟೇಜ್ ನೋಡಿದ ನಂತರವೇ ಏನು ಸಂಭವಿಸಿತು ಅನ್ನೋದು ಗೊತ್ತಾಗಿದೆ. ಮುತ್ತು ಎರಳ್ ಪ್ರದೇಶವನ್ನು ದಾಟುವಾಗ ಅವನ ಎದುರಿನಿಂದ ರಸಗೊಬ್ಬರ ಲೋಡ್ ಆಗಿದ್ದ ಟ್ರಕ್ ಬಂದಿದೆ. ಮೂಟೆಗಳನ್ನು ಲೋಡ್ ಮಾಡಲು ಬಳಸುವ ಹಗ್ಗವೊಂದು ಕಿತ್ತುಕೊಂಡು ಲಾರಿಯ ಬಲಭಾಗದಲ್ಲಿ ನೇತಾಡುತ್ತಿದೆ. ಗಾಳಿಯಲ್ಲಿ ತೂರಾಡುತ್ತಿದ್ದ ಅದು ಲಾರಿಯ ಸಮೀಪದಿಂದ ಪಾಸ್ ಆಗುತ್ತಿದ್ದ ಮುತ್ತುನ ಕುತ್ತಿಗೆಯನ್ನು ಸುತ್ತಿಕೊಂಡು ಅವನು ಸಾಗುತ್ತಿದ್ದ ವಿರುದ್ಧ ದಿಕ್ಕಿಗೆ ಎಳೆದಿದೆ. ಅವನು ಬೈಕ್ ಮೇಲಿಂದ ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದಿದ್ದಾನೆ.
ಜನ ಮುತ್ತುನ ಸಹಾಯಕ್ಕೆ ಓಡಿ ಅವನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡಿರದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಅವನು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಎರಳ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ