Viral Video: ಪುಟ್ಟ ಹುಡುಗಿ ಕಲಿಸಿದ ಪಾಠ, ಈ ವಿಡಿಯೊ ನೋಡಿ ನಿಮ್ಮಗೂ ಕಣ್ಣೀರು ಬರಬಹುದು

ಜೀವನದಲ್ಲಿ ಒಂದು ಭದ್ರತೆಯನ್ನು ಸೃಷ್ಟಿ ಮಾಡುವವರು ಹೆತ್ತವರು, ಪ್ರತಿ ಹಂತದಲ್ಲೂ ಶಕ್ತಿಯನ್ನು ತುಂಬಾ ಕೆಲಸವನ್ನು ಅವರು ಮಾಡುತ್ತಾರೆ. ಜೀವನದಲ್ಲಿ ತಂದೆ - ತಾಯಿ ಎಷ್ಟು ಮುಖ್ಯ ಎಂಬುದನ್ನು ಈ ಪುಟ್ಟ ಹುಡುಗಿ ತಿಳಿಸಿದ್ದಾಳೆ.

Viral Video: ಪುಟ್ಟ ಹುಡುಗಿ ಕಲಿಸಿದ ಪಾಠ, ಈ ವಿಡಿಯೊ ನೋಡಿ ನಿಮ್ಮಗೂ ಕಣ್ಣೀರು ಬರಬಹುದು
Viral Video A lesson taught by a little girl, watching this video may bring tears to your eyes
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 14, 2022 | 4:59 PM

ಜೀವನದಲ್ಲಿ ಒಂದು ಭದ್ರತೆಯನ್ನು ಸೃಷ್ಟಿ ಮಾಡುವವರು ಹೆತ್ತವರು, ಪ್ರತಿ ಹಂತದಲ್ಲೂ ಶಕ್ತಿಯನ್ನು ತುಂಬಾ ಕೆಲಸವನ್ನು ಅವರು ಮಾಡುತ್ತಾರೆ. ಅದೇ ಪೋಷಕರಿಗೆ ವಯಸ್ಸದಾಗ ಮಕ್ಕಳು ನೋಡಿಕೊಳ್ಳುವುದು ಅನಿವಾರ್ಯವಲ್ಲ, ಅದು ಕರ್ತವ್ಯವಾಗಿರುತ್ತದೆ. ಅವರ ಸಾರ್ಥಕ ಜೀವನದಲ್ಲಿ ಅವರನ್ನು ಸಂತೋಷವಾಗಿ ನೋಡಿಕೊಳ್ಳುವುದು ಮಕ್ಕಳ ಪರಮ ಕರ್ತವ್ಯ. ಅದಕ್ಕೆ ಸತ್ಯಾಂಶ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ, ಈ ವಿಡಿಯೋ ನಿಮ್ಮನ್ನು ಒಂದು ಬಾರಿ ಕಣ್ಣೀರು ತರಿಸುವುದು, ಪುಟ್ಟ ಹುಡುಗಿಯೊಬ್ಬಳು ತನ್ನ ದೃಷ್ಟಿಹೀನ ಪೋಷಕರ ಸೇವೆಯನ್ನು ಮಾಡುವ ವೀಡಿಯೊ ವೈರಲ್ ಆಗಿದೆ.

ಈ ವಿಡಿಯೊವನ್ನು ಕಂಟೆಂಟ್ ಕ್ರಿಯೇಟರ್ ಮಿತ್ ಇಂದುಲ್ಕರ್ ಅವರು ಹಂಚಿಕೊಂಡಿದ್ದಾರೆ ಮತ್ತು ಈ ವಿಡಿಯೊ 3.5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಮುಂಬೈನ ಮೀರಾ ರೋಡ್‌ನಲ್ಲಿ ನಡೆದಿದರುವ ಘಟನೆಯಾಗಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಶಾಲಾ ಸಮವಸ್ತ್ರವನ್ನು ಧರಿಸಿರುವ ಪುಟ್ಟ ಬಾಲಕಿ ತನ್ನ ದೃಷ್ಟಿಹೀನ ಪೋಷಕರೊಂದಿಗೆ ಕುಳಿತಿರುವುದನ್ನು ನೀವು ನೋಡಬಹುದು. ಅವರು ರಸ್ತೆ ಬದಿಯ ಅಂಗಡಿಯೊಂದರಲ್ಲಿ ಹೊರಗೆ ಕುಳಿತು ಕೆಲವು ತಿಂಡಿಗಳನ್ನು ಆನಂದಿಸುತ್ತ ತಿನ್ನುತ್ತಿರುವುದುನ್ನು ಕಾಣಬಹುದು. ತಿಂಡಿ ಮಾಡಿದ ನಂತರ ತನ್ನ ಪೋಷಕರಿಗೆ ಆ ಪುಟ್ಟ ಹುಡುಗಿ ಸ್ವಚ್ಛಗೊಳಿಸಲು ಸಹಾಯ ಮಾಡುವುದಲ್ಲದೆ, ಅವರಿಗೆ ದಾರಿ ತೋರಿಸುವುದನ್ನು ನೀವು ಈ ವಿಡಿಯೊದಲ್ಲಿ ಕಾಣಬಹುದು.

ಇದನ್ನು ಓದಿ:ಹೇಳಿ ಕೇಳಿ ಗೂಳಿ, ಆಮಂತ್ರಣ ಬೇಕೇ ಮದುವೆಗೆ? ವೈರಲ್ ಆದ ವಿಡಿಯೋ ನೋಡಿ

ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನಾನು ತುಂಬಾ ಭಾವುಕನಾದೆ. ಅವರು ಈ ಅಂಗಡಿಗೆ ಬರುವುದನ್ನು ನಾನು ಪ್ರತಿದಿನ ನೋಡುತ್ತಿದ್ದೆ (ಮೌಳಿ ವಡೆ – ಝಂಗಿಡ್, ಮೀರಾ ರಸ್ತೆ) ಪೋಷಕರು ಕುರುಡರು ಆದರೆ ಅವರಿಗೆ ಆ ಪುಟ್ಟು ಹುಡುಗಿಯ ಕಣ್ಣುಗಳ ಮೂಲಕ ಜಗತ್ತನ್ನು ನೋಡುತ್ತಿದ್ದಾರೆ. ಈ ಪುಟ್ಟ ಹುಡುಗಿ ನಮಗೆ ಅನೇಕ ವಿಷಯಗಳನ್ನು ಕಲಿಸಿದ್ದಾಳೆ. ನೀವು ಕೂಡ ಅಷ್ಟೇ ನಿಮ್ಮ ತಂದೆ-ತಾಯಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಅವರನ್ನು ಸುಖದಿಂದ ನೋಡಿಕೊಳ್ಳಿ, ಎಂದು ಇಂದುಲ್ಕರ್ ಬರೆದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಹೆಚ್ಚಿನ ಹದಿಹರೆಯದವರು ಮತ್ತು ವಯಸ್ಕರು ತಮ್ಮ ಜೀವನದಲ್ಲಿ ಯಾರು ಮುಖ್ಯ ಮತ್ತು ಈ ಜೀವಮದಲ್ಲಿ ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ, ಆದರೆ ಈ ಹುಡುಗಿ ಒಂದು ಪಾಠವನ್ನು ಕಲಿಸಿದ್ದಾಳೆ. ಇಷ್ಟು ಇಳಿವಯಸ್ಸಿನಲ್ಲಿ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ ಎಂದು ಬಳಕೆದಾರರು ಬರೆದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ