ಕೆಲವೊಮ್ಮೆ ಎಷ್ಟೇ ಗಮನದಲ್ಲಿದ್ದರೂ ಅಚಾನಕ್ ಆಗಿ ಭಯಂಕರ ಸನ್ನಿವೇಶವೊಂದು ನಡೆದುಹೋಗುತ್ತದೆ. ಅಂತಹುದೇ ಒಂದು ಘಟನೆ ಮುಂಬೈ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಆದರೆ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಅಲ್ಲೇ ಇದ್ದ ಆರ್ಪಿಎಫ್ ಕಾನ್ಸ್ಟೇಬಲ್ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಹಳಿಯ ಮೇಲೆ ನಿಧಾನವಾಗಿ ಸಾಗುತ್ತಲೇ ಇರುವ ರೈಲನ್ನು ಹತ್ತುವಾಗ ವ್ಯಕ್ತಿಯೊಬ್ಬ ಜಾರಿ ಬಿದ್ದ ಘಟನೆ ನಡೆದಿದೆ. ಸಮಯಕ್ಕೆ ಸರಿಯಾಗಿ ಆರ್ಪಿಎಫ್ ಕಾನ್ಸ್ಟೇಬಲ್ ಆತನನ್ನು ರಕ್ಷಿಸಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲವು ಬಾರಿ ರೈಲು ಹತ್ತುವ ಆತುರದಲ್ಲಿ ಗಡಿಬಿಡಿ ಮಾಡುತ್ತೇವೆ. ಅದೇ ಕೆಲವು ಬಾರಿ ಅಚಾತುರ್ಯಕ್ಕೆ ಕಾರಣವಾಗಬಹುದು. ಹೀಗಿರುವಾಗ ವಾಹನಗಳನ್ನು ಹತ್ತುವಾಗ ಅಥವಾ ಇಳಿಯುವಾಗ ಎಷ್ಟು ಎಚ್ಚರವಾಗಿದ್ದರೂ ಸಾಲದು. ರೈಲು ಹತ್ತುವಾಗ ವ್ಯಕ್ತಿಯೋರ್ವ ಜಾರಿ ಬಿದ್ದ ಘಟನೆ ನಡೆದಿದೆ. ತಕ್ಷಣವೇ ಆರ್ಪಿಎಫ್ ಕಾನ್ಸ್ಟೇಬಲ್ ಆನನ್ನು ರಕ್ಷಿಸಿದ ವಿಡಿಯೋವನ್ನು ಸೆಂಟ್ರಲ್ ರೈಲ್ವೇ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಾನ್ಸ್ಟೇಬಲ್ರನ್ನು ಶ್ಲಾಘಿಸಿದ್ದಾರೆ.
दि. 07.06.2021 को एलटीटी रेलवे स्टेशन से गोरखपुर एक्स के रवाना होते समय एक यात्री चलती ट्रेन में चढ़ते समय अपना संतुलन खो बैठा व गाडी की चपेट में आने वाला था तभी RPF आरक्षक मिलिंद पठारे ने तुरंत यात्री को खींच कर बचा लिया । कृपया, यात्री चलती ट्रेन न पकड़े। pic.twitter.com/n3XqAgCzCE
— Central Railway (@Central_Railway) June 7, 2021
ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ರೈಲು ಹತ್ತಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಅಚಾನಕ್ ಆಗಿ ಹಿಡಿತ ತಪ್ಪಿ ಜಾರಿ ಬೀಳುತ್ತಾನೆ. ರೈಲು ಮತ್ತು ನಿಂತಿರುವ ಜಾಗದ ಮಧ್ಯದಲ್ಲಿರುವ ಅಂತರದಲ್ಲಿ ಸಿಲುಕಿಕೊಳ್ಳುತ್ತಾನೆ. ಅಲ್ಲಿದ್ದ ಆರ್ಪಿಎಫ್ ಕಾನ್ಸ್ಟೇಬಲ್ ಅದನ್ನು ಗಮನಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆರ್ಪಿಎಫ್ಗೆ ಸಲಾಂ… ಆ ಸಮಯದಲ್ಲಿ ತಡಮಾಡದೇ ವ್ಯಕ್ತಿಯನ್ನು ಕಾಪಾಡಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ