ಆರ್​ಪಿಎಫ್​​ ಪೊಲೀಸರ ಸಮಯಪ್ರಜ್ಞೆಯಿಂದ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ

| Updated By: ವಿವೇಕ ಬಿರಾದಾರ

Updated on: Sep 24, 2022 | 9:30 PM

ಶುಕ್ರವಾರ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ಆರ್​ಪಿಎಫ್​​ ಪೊಲೀಸರು ವ್ಯಕ್ತಿಯೋರ್ವನ ಜೀವವನ್ನು ಕಾಪಾಡಿದ್ದಾರೆ.

ಆರ್​ಪಿಎಫ್​​ ಪೊಲೀಸರ ಸಮಯಪ್ರಜ್ಞೆಯಿಂದ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ
ವ್ಯಕ್ತಿಯ ಜೀವ ಕಾಪಾಡಿದ ಆರ್​ಪಿಎಫ್​​ ಸಿಬ್ಬಂದಿ
Follow us on

ಶುಕ್ರವಾರ (ಸೆ.23) ರಂದು ರೈಲ್ವೆ ರಕ್ಷಣಾ ಪಡೆ (RPF) ಪೊಲೀಸರ ಕಾರ್ಯ ಕಂಡು ಎಲ್ಲಡೆಯಿಂದ ಶ್ಲಾಘನೆಯ ಸುರಿಮಳೆ ಸುರಿಯುತ್ತಿದೆ. ಹೌದು ಶುಕ್ರವಾರ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ಆರ್​ಪಿಎಫ್​​ ಪೊಲೀಸರು ವ್ಯಕ್ತಿಯೋರ್ವನ ಜೀವವನ್ನು ಕಾಪಾಡಿದ್ದಾರೆ. ಕೊಯಮತ್ತೂರು ರೈಲು ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಪ್ಲಾಟ್‌ಫಾರ್ಮ್ ಮತ್ತು ಚಲಿಸುತ್ತಿದ್ದ ರೈಲಿನ ನಡುವಿನ ಅಂತರದಲ್ಲಿ ಸಿಲುಕಿಕೊಂಡಿದ್ದನು.

ಈ ವೇಳೆ ಅಲ್ಲೇ ಇದ್ದ ಆರ್‌ಪಿಎಫ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಅರುಣ್‌ಜಿತ್ ಮತ್ತು ಮಹಿಳಾ ಹೆಡ್ ಕಾನ್ಸ್‌ಟೇಬಲ್ ಪಿಪಿ ಮಿನಿ ಕೂಡಲೆ ದೌಡಾಯಿಸಿ ವ್ಯಕ್ತಿಯನ್ನು ಪ್ಲಾಟ್‌ಫಾರ್ಮ್ ಮತ್ತು ಚಲಿಸುತ್ತಿದ್ದ ರೈಲಿನ ನಡುವಿನ ಅಂತರದಿಂದ ವ್ಯಕ್ತಿಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಸ್ವಲ್ಪದರಲ್ಲೇ ಜೀವ ಉಳಿದಿದೆ.

ಆರ್‌ಪಿಎಫ್ ಸಿಬ್ಬಂದಿಯ ಸಾಹಸದ ದೃಶ್ಯ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರ್‌ಪಿಎಫ್ ಇಲಾಖೆ ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೋ ಸಾಕಷ್ಟು ಶೇರ್​ ಆಗುತ್ತಿದ್ದು, ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ಶೌರ್ಯ ಮತ್ತು ಧೈರ್ಯದ ಮತ್ತೊಂದು ಕಥೆ! ಆರ್‌ಪಿಎಫ್ ಎಎಸ್‌ಐ ಅರುಣ್‌ಜಿತ್ ಮತ್ತು ಲೇಡಿ ಎಚ್‌ಸಿ ಪಿಪಿ ಮಿನಿ ತಮ್ಮ ಪ್ರಾಣದ ಹಂಗನ್ನು ತೊರೆದು ವ್ಯಕ್ತಿಯ ಜೀವವನ್ನು ಕಾಪಾಡಿದ್ದಾರೆ. ವೀಡಿಯೊ 5,000 ವೀಕ್ಷಣೆಗಳನ್ನು ಮತ್ತು ನೂರಾರು ಲೈಕ್​ಗಳನ್ನು ಪಡೆದುಕೊಂಡಿದೆ. ವ್ಯಕ್ತಿಯ ಜೀವವನ್ನು ಉಳಿಸಿದ ಆರ್‌ಪಿಎಫ್ ಅಧಿಕಾರಿಗಳಿಗೆ ಜನರು ಕಾಮೇಂಟ್​ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ. ವಿಡಿಯೋವನ್ನು 900ಕ್ಕೂ ಹೆಚ್ಚು ಜನರು ಮರುಹಂಚಿಕೊಂಡಿದ್ದಾರೆ.