Diwali 2022: ಪುರಿಯ ಕಡಲ ಕಿನಾರೆಯಲ್ಲಿ 4045 ಪ್ರಣತೆಗಳೊಂದಿಗೆ ಸಾಲಂಕೃತಗೊಂಡ ಕಾಳೀ

| Updated By: ಶ್ರೀದೇವಿ ಕಳಸದ

Updated on: Oct 25, 2022 | 10:29 AM

Sand Art : ಮರಳ ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ ತಮ್ಮ ಕಲಾ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ 5 ಗಂಟೆಗಳೊಳಗೆ 6 ಟನ್​ ಮರಳು ಮತ್ತು 4045 ಪ್ರಣತೆಗಳುಳ್ಳ 5 ಅಡಿ ಎತ್ತರದ ಕಾಳೀ ಮರಳಶಿಲ್ಪವನ್ನು ವಿನ್ಯಾಸ ಮಾಡಿದ್ದಾರೆ.

Diwali 2022: ಪುರಿಯ ಕಡಲ ಕಿನಾರೆಯಲ್ಲಿ 4045 ಪ್ರಣತೆಗಳೊಂದಿಗೆ ಸಾಲಂಕೃತಗೊಂಡ ಕಾಳೀ
Sand Sculpture of Goddess Kali with 4045 Diyas
Follow us on

Viral : ಮರಳ ಶಿಲ್ಪ ಕಲಾವಿದ ಸುದರ್ಶನ ವಿಶೇಷ ದಿನಗಳಲ್ಲಿ ಗಮನ ಸೆಳೆಯುವಂಥ ಮರಳ ಶಿಲ್ಪವನ್ನು ನಿರ್ಮಿಸುತ್ತಲೇ ಇರುತ್ತಾರೆ. ಈ ಸಲ ದೀಪಾವಳಿಗೆ ಇವರ ಕೈಚಳಕದಲ್ಲಿ ಒಡಿಶಾದ ಪುರಿಯ ಕಡಲತೀರದಲ್ಲಿ ಈ ಕಾಳಿ ಅವತರಿಸಿದ್ದಾಳೆ. ಸುದರ್ಶನ ತಮ್ಮ ಕಲಾ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ 5 ಗಂಟೆಗಳೊಳಗೆ 6 ಟನ್​ ಮರಳು ಮತ್ತು 4045 ಪ್ರಣತೆಗಳುಳ್ಳ 5 ಅಡಿ ಎತ್ತರದ ಮರಳಶಿಲ್ಪವನ್ನು ವಿನ್ಯಾಸ ಮಾಡಿದ್ದಾರೆ. ಎಲ್ಲ ನಕಾರಾತ್ಮಕತೆಯನ್ನು ಅಳಿಸೋಣ ಎಂಬ ಸಂದೇಶ ಇದರೊಂದಿಗಿದೆ.

ಪದ್ಮಶ್ರೀ ಪುರಸ್ಕೃತ ಕಲಾವಿದ ಸುದರ್ಶನ ಪಟ್ನಾಯಕ್ ಈ ದೀಪಾವಳಿ ಪ್ರಯುಕ್ತ ಈ ಕಲಾಕೃತಿಯನ್ನು ಟ್ವೀಟ್ ಮಾಡಿದ್ದಾರೆ. ‘ಈ ದೀಪಾವಳಿಯನ್ನು ಮಾಲಿನ್ಯಮುಕ್ತವಾಗಿ ಆಚರಿಸಲು ಜನರಲ್ಲಿ ವಿನಂತಿ ಮಾಡಿಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ. ಸುದರ್ಶನ್ ಈತನಕ ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಅನೇಕ ಪ್ರಶಸ್ತಿ, ಬಹುಮಾನಗಳನ್ನು ಗೆದ್ದಿದ್ದಾರೆ. ಅಲ್ಲದೆ, ವಿಶೇಷ ದಿನಗಳಲ್ಲಿ ಮರಳು ಶಿಲ್ಪದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ಇವರದಾಗಿರುತ್ತದೆ.

ಈ ಪೋಸ್ಟ್​ ಅನ್ನು 6,000ಕ್ಕಿಂತ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. ಮುನ್ನೂರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ ಮಾತೆ ಕಾಳಿ ನಿಮ್ಮನ್ನು ಪೊರೆಯಲಿ ಎಂದಿದ್ದಾರೆ ಒಬ್ಬರು. ಪ್ರಣತೆಗಳಿಗೆ ಹಚ್ಚಿದ ದೀಪದ ಬಣ್ಣ ಆಕರ್ಷಕವಾಗಿದೆ ಎಂದಿದ್ದಾರೆ ಹಲವರು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ