- Kannada News Photo gallery Viral: Diwali celebration in the cemetery, why do you know this strange celebration? kannada viral news akp
Viral: ಸ್ಮಶಾನದಲ್ಲಿ ದೀಪಾವಳಿ ಹಬ್ಬ ಆಚರಣೆ, ಈ ವಿಚಿತ್ರ ಆಚರಣೆ ಯಾಕೆ ಗೊತ್ತಾ?
ಕರೀಂನಗರದಲ್ಲಿ, ಸ್ಮಶಾನದಲ್ಲಿ ದೀಪಾವಳಿಯನ್ನು ಆಚರಿಸುವ ಸಂಪ್ರದಾಯವು ಆರು ದಶಕಗಳಿಂದ ನಡೆದುಕೊಂಡು ಬಂದ ಪದ್ಧತಿ. ಪೂರ್ವಜರನ್ನು ಸ್ಮರಿಸುತ್ತಾ ಕುಟುಂಬದ ಸದಸ್ಯರನ್ನು ಸಮಾಧಿಯಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಣೆಯನ್ನು ನಡೆಸಲಾಗುತ್ತದೆ.
Updated on:Oct 24, 2022 | 1:14 PM

Diwali festival at the cemetery

Diwali festival at the cemetery

ತೆಲಂಗಾಣದ ಕರೀಂನಗರದಲ್ಲಿ ಆರು ದಶಕಗಳಿಂದ ಸ್ಮಶಾನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯ ಇದೆ. ಪೂರ್ವಜರನ್ನು ಸ್ಮರಿಸುತ್ತಾ ಕುಟುಂಬದ ಸದಸ್ಯರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಣೆಯನ್ನು ನಡೆಸಲಾಗುತ್ತದೆ.

ಈ ಆಚರಣೆ ತೆಲಂಗಾಣದ ಕರೀಂನಗರ ಸಂಪ್ರದಾಯವಾಗಿದೆ. ಕರೀಂನಗರದ ಕರ್ಜನ ಗಡ್ಡಾದಲ್ಲಿರುವ ಹಿಂದೂ ಸ್ಮಶಾನದಲ್ಲಿ ಪ್ರತಿ ವರ್ಷ ದಲಿತ ಕುಟುಂಬಗಳು ಸ್ಮಶಾನದಲ್ಲಿರುವ ತಮ್ಮ ಸಂಬಂಧಿಕರ ಸಮಾಧಿಯಲ್ಲಿ ದೀಪಾವಳಿ ಆಚರಿಸುತ್ತಾರೆ.

ಹಬ್ಬಕ್ಕೆ ಒಂದು ವಾರ ಮೊದಲು ಸ್ಮಶಾನವನ್ನು ಸ್ವಚ್ಛಗೊಳಿಸಿ ಸಮಾಧಿಗಳಿಗೆ ಬಣ್ಣ ಬಳಿಯುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಸಮಾಧಿಯ ಬಳಿಗೆ ಹೋಗಿ, ಸಮಾಧಿಗಳನ್ನು ಹೂವಿನಿಂದ ಅಲಂಕರಿಸುತ್ತಾರೆ.

ಹಬ್ಬದ ದಿನದಂದು, ಕುಟುಂಬದ ಸದಸ್ಯರೆಲ್ಲರೂ ಸಂಜೆ ಅಲ್ಲಿಯೇ ಕಳೆಯುತ್ತಾರೆ. ಅಲ್ಲಿಯೇ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ.

ತಮ್ಮ ಹಿರಿಯರಿಗೆ ನೈವೇದ್ಯ ಸಲ್ಲಿಸುವ ಮೂಲಕ ಅವರನ್ನು ಸ್ಮರಿಸುತ್ತಾರೆ. ಇದು ಸ್ವಲ್ಪ ವಿಚಿತ್ರ ಎನಿಸಿದರೂ ಸತ್ತವರ ನೆನಪುಗಳನ್ನು ನೆನೆದು ಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ.
Published On - 1:14 pm, Mon, 24 October 22




