Viral Post: ಇದು ಸಪ್ತ ಶೆಡ್ಡಿನಾಚೆ ಎಲ್ಲೋ ಸೈಡ್‌-D ಕಥೆ, ಮತ್ತೆ ಟ್ರೋಲ್‌ ಆದ್ರು ದರ್ಶನ್‌-ಪವಿತ್ರ 

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 21, 2024 | 5:59 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೋರ್ಟ್‌ ಮೂರನೇ ಬಾರಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರೆ, ಪವಿತ್ರ ಗೌಡ ಮತ್ತು ಇತರೆ  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಒಂದು ಸಂದರ್ಭಕ್ಕೆ  ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸನ್ನಿವೇಶವೊಂದನ್ನು ಲಿಂಕ್‌ ಮಾಡಿ ಇದು “ಸಪ್ತ ಶೆಡ್ಡಿನಾಚೆ ಎಲ್ಲೋ ಸೈಡ್‌-D” ಕಥೆ ಎಂದು ಇದೀಗ ದರ್ಶನ್‌ ಮತ್ತು ಪವಿತ್ರ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral Post: ಇದು ಸಪ್ತ ಶೆಡ್ಡಿನಾಚೆ ಎಲ್ಲೋ ಸೈಡ್‌-D ಕಥೆ, ಮತ್ತೆ ಟ್ರೋಲ್‌ ಆದ್ರು ದರ್ಶನ್‌-ಪವಿತ್ರ 
ವೈರಲ್​ ಪೋಸ್ಟ್​​
Follow us on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿ 11 ಜನರನ್ನು ಬಂಧಿಸಲಾಗಿತ್ತು. ಅಂದಿನಿಂದ ನಿನ್ನೆ (ಜೂನ್‌ 20) ವರೆಗೂ ಅವರೆಲ್ಲರೂ ಪೋಲಿಸ್‌ ಕಸ್ಟಡಿಯಲ್ಲಿದ್ದು,  ನಿನ್ನೆ ಆರೋಪಿಗಳೆಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆಯ ಬಳಿಕ ಎ-2 ಆರೋಪಿ ದರ್ಶನ್‌ ಸೇರಿ ನಾಲ್ವರು ಆರೋಪಿಗಳನ್ನು ಕೋರ್ಟ್‌  ಮೂರನೇ ಬಾರಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಇನ್ನೂ ಎ-1 ಆರೋಪಿ ಪವಿತ್ರ ಗೌಡ ಸೇರಿದಂತೆ ಇತರೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಈ ಸಂದರ್ಭಕ್ಕೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಸನ್ನಿವೇಶವೊಂದನ್ನು ಲಿಂಕ್‌ ಮಾಡಿ ಇದು “ಸಪ್ತ ಶೆಡ್ಡಿನಾಚೆ ಎಲ್ಲೋ ಸೈಡ್‌ D” ಕಥೆ ಎಂದು ಟ್ರೋಲಿಗರು ದರ್ಶನ್‌ ಮತ್ತು ಪವಿತ್ರ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ ನಟನೆಯ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎʼ ಮತ್ತು ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಸಿನಿಮಾ ಹಿಟ್‌ ಆಗಿತ್ತು. ಈ ಸಿನಿಮಾದಲ್ಲಿ  ಜೈಲಿನಲ್ಲಿದ್ದ ನಾಯಕ ಮತ್ತು ನಾಯಕಿ ದೂರವಾಗುವ ಒಂದು ಸನ್ನಿವೇಶವಿದೆ. ಈ ಸನ್ನಿವೇಶವನ್ನು ಇಟ್ಟುಕೊಂಡು ಇದೀಗ  ದರ್ಶನ್‌ ಮತ್ತು ಪವಿತ್ರ ಅವರನ್ನು ಟ್ರೋಲಿಗರು ಟ್ರೋಲ್‌ ಮಾಡುತ್ತಿದ್ದಾರೆ.


ಈ ಕುರಿತ ಪೋಸ್ಟ್‌ ಒಂದನ್ನು @SidNeregal ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸಪ್ತ ಸಾಗರದಾಚೆ ಎಲ್ಲೋ ಪವಿತ್ರ ಅಕ್ಕ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವ ಯೋಗ ದಿನದಂದು ಲಡಾಖ್‌ ಹಿಮ ಶಿಖರದಲ್ಲಿ ಭಾರತೀಯ ಯೋಧರ ಯೋಗಾಸನ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದು  “ಸಪ್ತ ಶೆಡ್ಡಿನಾಚೆ ಎಲ್ಲೋ ಸೈಡ್‌ D” ಕಥೆ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ