Video Viral: ರೆಸ್ಟೋರೆಂಟ್‌ನ ಸಾಂಬಾರ್ ನಲ್ಲಿ ಸತ್ತ ಇಲಿ ಪತ್ತೆ
ಇತ್ತೀಚಿಗಷ್ಟೇ ಹರ್ಷಿಸ್ ಚಾಕೊಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಅಹಮದಾಬಾದ್‌ನ ರೆಸ್ಟೋರೆಂಟ್ವೊಂದರ ಸಾಂಬಾರ್ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಜೂನ್ 20 ರಂದು ಗುರುವಾರ, ಈ ಘಟನೆ ಬೆಳಕಿಗೆ ಬಂದಿದೆ.
ಅಹಮದಾಬಾದ್: ಅಹಮದಾಬಾದ್‌ನ ನಿಕೋಲ್‌ನಲ್ಲಿರುವ ದೇವಿ ದೋಸೆ ರೆಸ್ಟೋರೆಂಟ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೆಸ್ಟೋರೆಂಟ್‌ನ ಸಾಂಬಾರ್ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಜೂನ್ 20 ರಂದು ಗುರುವಾರ, ಈ ಘಟನೆ ಬೆಳಕಿಗೆ ಬಂದಿದೆ. ಟೈಮ್ಸ್ ನೌ ವರದಿಯ ಪ್ರಕಾರ, ಸಾಂಬಾರ್ನಲ್ಲಿ ಸತ್ತ ಇಲಿ ಬಿದ್ದಿರುವುದನ್ನು ಕಂಡು ಗ್ರಾಹಕರು ರೆಸ್ಟೋರೆಂಟ್ ಮಾಲೀಕ ಅಲ್ಪೇಶ್ ಕೆವಾಡಿಯಾ ಅವರಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಗ್ರಾಹಕರು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಯ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.
AMC ಯ ಆರೋಗ್ಯ ಇಲಾಖೆ ಮಾಲೀಕ ಕೆವಾಡಿಯಾಗೆ ನೋಟಿಸ್ ನೀಡಿ, ನಂತರ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದೆ. @4th_pillarnews ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ ನೋಡಿ:
“Dead rat found in sambar at Devi Dhamasa Center, Nikol, Ahmedabad”#Nikol #Ahmedabad #Gujarat #Rat #Sambar #Dosa #FSSAI #Foodsefty #Devidosa #Restaurant #AMC #Health #Watch #Thefourthpillar #News #Tranding #Viral #Newsupdate #Latestnews #Viralvideo pic.twitter.com/8CeCBYfg20
— thefourth pillar (@4th_pillarnews) June 21, 2024
ಇದನ್ನೂ ಓದಿ: Hershey’s ಚಾಕೊಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ
ಇತ್ತೀಚಿಗಷ್ಟೇ ಹರ್ಷಿಸ್ ಚಾಕೊಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದಲ್ಲದೇ ಮುಂಬೈನ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ತುಂಡರಿಸಿದ ಮಾನವನ ಬೆರಳು ಪತ್ತೆಯಾಗಿದ್ದು,ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ವಿಷಾದದ ಸಂಗಂತಿ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ