
ಇತ್ತೀಚೆಗಿನ ದಿನಗಳಲ್ಲಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವುದೇ ಕೆಲ ಮಕ್ಕಳಿಗೆ ಹೊರೆಯಾಗುತ್ತದೆ. ವೃದ್ಧರ (old man) ಬಗ್ಗೆ ಕಾಳಜಿ ವಹಿಸುವುದು ಹಾಗೂ ಅವರ ಆರೈಕೆ ಮಾಡುವುದೆಂದರೆ ಹೆಚ್ಚುವರಿ ಜವಾಬ್ದಾರಿ ಎನ್ನುವಂತಾಗಿದೆ. ಹೀಗಿರುವಾಗ ಹಿರಿಯರನ್ನು ಗೌರವದಿಂದ ಕಾಣುವ, ಅವರನ್ನು ಕಾಳಜಿ ವಹಿಸುವ ವ್ಯಕ್ತಿಯನ್ನು ಕಂಡಾಗ ಇವತ್ತಿಗೂ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎಂದೆನಿಸುತ್ತದೆ. ಇದಕ್ಕೆ ಸಾಕ್ಷಿ ಎನಿಸುವಂತಿದೆ ಈ ದೃಶ್ಯ. ಸೌದಿಯಾ ಏರ್‌ಲೈನ್ಸ್ ನಲ್ಲಿ (Saudi Airlines) ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ. ಕ್ಯಾಬಿನ್ ಸಿಬ್ಬಂದಿಯೊಬ್ಬರು ಹಿರಿಯ ಪ್ರಯಾಣಿಕರಿಗೆ ಊಟ ಮಾಡಿಸಿದ್ದಾರೆ. ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.
@saudia_aviation ಹೆಸರಿನ ಎಕ್ಸ್ ಖಾತೆಯಲ್ಲಿ ಸೌದಿಯಾ ಏರ್‌ಲೈನ್ಸ್‌ನ ಕ್ಯಾಬಿನ್ ಸಿಬ್ಬಂದಿಯೊಬ್ಬರು ಹಿರಿಯ ಪ್ರಯಾಣಿಕರಿಗೆ ತಮ್ಮ ಕೈಯಾರೆ ಊಟ ಮಾಡಿಸುತ್ತಿರುವುದನ್ನು ಕಾಣಬಹುದು. ಫ್ಲೈಟ್ ಅಟೆಂಡೆಂಟ್ ವೃದ್ಧ ವ್ಯಕ್ತಿಗೆ ಚಮಚದಲ್ಲಿ ಆಹಾರ ತಿನ್ನುತ್ತಿಸುತ್ತಾ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ಯಾಬಿನ್ ಸಿಬ್ಬಂದಿಯ ಶಾಂತ ಮುಖಭಾವ ಹಾಗೂ ಹಿರಿಯ ವ್ಯಕ್ತಿಗೆ ಊಟ ಮಾಡಿಸುವ ರೀತಿ ನೆಟ್ಟಿಗರ ಹೃದಯಕ್ಕೆ ಹತ್ತಿರವಾಗಿದೆ.
لذلك موظيفين
#الخطوط_السعودية في المركز 🥇عالميًامشهد يجسد القيم السعودية الأصيلة 🇸🇦
مضيف جوي يطعم راكبًا مسنًّا طوال الرحلة باهتمام يليق بالضيافة السعودية 💚✈️ https://t.co/i3Fln8qSNh pic.twitter.com/KTzcWZqIhy— الطيران السعودي (@saudia_aviation) October 29, 2025
ಇದನ್ನೂ ಓದಿ:ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಹೆಗಲು ನೀಡಿದ ಪೊಲೀಸ್ : ಹೃದಯ ಸ್ಪರ್ಶಿ ವಿಡಿಯೋ
ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಜವಾದ ಮಾನವೀಯತೆ ಹಾಗೂ ಸೇವಾ ಮನೋಭಾವ ಎಂದಿದ್ದಾರೆ. ಇನ್ನೊಬ್ಬರು, ಮಾನವೀಯತೆಗೆ ಸಾಕ್ಷಿ ಈ ದೃಶ್ಯ. ಇದು ನನ್ನ ಮನಸ್ಸನ್ನು ಮುಟ್ಟಿತು. ನನ್ನ ಕಣ್ಣನ್ನು ಒದ್ದೆಯಾಗಿಸಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಇಂದಿಗೂ ಇದ್ದಾರೆ. ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ