ಕ್ಲಾಸ್ ರೂಮ್ನಲ್ಲಿ ಹುಡುಗನೊಬ್ಬ ಹುಡುಗಿಗೆ ಪ್ರಪೋಸ್ ಮಾಡಿದ್ದು, ಅವಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ವೈರಲ್ ವಿಡಿಯೋ. ಇತ್ತೀಚಿನ ದಿನಗಳಲ್ಲಿ ಕಾಲೇಜು ಯುವಕರಿಗಿಂತ ಹೆಚ್ಚಾಗಿ ಶಾಲೆಗಳಲ್ಲಿಯೇ ಹೆಚ್ಚಿನ ಪ್ರೇಮ ಪ್ರಣಯ ಹುಟ್ಟುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಎನ್ನುವಂತೆ ಇಲ್ಲೊಂದು ಪ್ರಪೋಸ್ಸ್ ವಿಡಿಯೋ ಭಾರೀ ವೈರಲ್ ಆಗಿದೆ.
ಈ ಪೋಸ್ಟ್ನಲ್ಲಿ ವಿಡಿಯೋವನ್ನು ಸಾಕಷ್ಟು ಹಾಸ್ಯಸ್ಪದವಾಗಿ ಎಡಿಟ್ ಮಾಡಲಾಗಿದ್ದು, ರೀಲ್ಸ್ ಪರಿವಾರ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿನ್ನೆಯಷ್ಟೇ ಹಂಚಿಕೊಳ್ಳಲಾಗಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.
ಇದನ್ನೂ ಓದಿ: ಮದುವೆಯಾಗ್ತಿದ್ದಂತೆ ವಧು ತನ್ನ ಪತಿಗೆ ಕೋಲಿನಿಂದ ಹೊಡೆಯೋದಂತೆ, ಇದೆಂಥಾ ಸಂಪ್ರದಾಯ ಮಾರಾಯ್ರೆ
ಈ ವಿಡಿಯೋದಲ್ಲಿ ಹುಡುಗ ಕೈಯಲ್ಲೊಂದು ಹೂವನ್ನು ಹಿಡಿದುಕೊಂಡು ಬರುವುದನ್ನು ಕಾಣಬಹುದು. ಜೊತೆಗೆ ಸಹಪಾಠಿಗಳು ಬೆಂಚಿನಲ್ಲಿ ಕೂತು ಅವರಿಬ್ಬರನ್ನು ನೋಡುತ್ತಿದ್ದಾರೆ. ಹುಡುಗ ಹೂವಿನೊಂದಿಗೆ ಬಂದು ಮೊಣಕಾಲೂರಿ, ಹೂವನ್ನು ನೀಡಿ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾನೆ. ಆದರೆ ಹುಡುಗಿ ಆತನ ಕಪಾಳಮೋಕ್ಷವನ್ನು ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋಗೆ ಹಿಂದಿ ಚಲನಚಿತ್ರದ ಕೆಲವು ಹಾಸ್ಯಸ್ಪದ ಕ್ಲಿಪ್ಗಳನ್ನು ಸೇರಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:09 pm, Wed, 15 March 23