ಬಿಡೆನು ನಿನ್ನ ಪಾದಾ; ಶಾಲಾಬಾಲಕಿಯ ಕಾಲು ಮುಟ್ಟಿ ಒಲಿಸಿಕೊಳ್ಳುತ್ತಿರುವ ಶಾಲಾಬಾಲಕ

| Updated By: ಶ್ರೀದೇವಿ ಕಳಸದ

Updated on: Nov 12, 2022 | 10:45 AM

Surrender : ನಿನಗೆ ಆತ್ಮಗೌರವ, ಸ್ವಾಭಿಮಾನ ಇಲ್ಲವಾ ಎಂದು ಒಬ್ಬರು. ಇಂಥ ನಿಜಪ್ರೀತಿ ಜೀವನದಲ್ಲಿ ಒಮ್ಮೆ ಮಾತ್ರ ಆಗುತ್ತದೆ, ನಿನ್ನ ನೋವು ನನಗರ್ಥವಾಗುತ್ತಿದೆ ಎಂದು ಇನ್ನೊಬ್ಬರು. ವಿಡಿಯೋ ನೋಡಿದ ಮೇಲೆ ನಿಮಗೇನು ಅನ್ನಿಸುತ್ತದೆ?

ಬಿಡೆನು ನಿನ್ನ ಪಾದಾ; ಶಾಲಾಬಾಲಕಿಯ ಕಾಲು ಮುಟ್ಟಿ ಒಲಿಸಿಕೊಳ್ಳುತ್ತಿರುವ ಶಾಲಾಬಾಲಕ
School Girl Breaks Up With Boy He Begs To Take Him Back By Touching Her Feet
Follow us on

Viral Video : ಪ್ರೀತಿ ಎಂದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಶರಣಾಗುವ ಅನನ್ಯ ಭಾವಸ್ಥಿತಿ. ತಾನು ಪ್ರೀತಿಸಿದವರಿಗಾಗಿ ಏನನ್ನೂ ತೊರೆಯುವಂಥ ಮನಸ್ಥಿತಿ. ಇನ್ನು ಈಗಿಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಶಾಲಾಬಾಲಕಿಯೊಬ್ಬಳ ಪಾದಗಳನ್ನು ಮುಟ್ಟಿ ಆಕೆಯನ್ನು ಮತ್ತೆ ಒಲಿಸಿಕೊಳ್ಳಲು ನೋಡುತ್ತಿದ್ದಾನೆ ಈ ಶಾಲಾಬಾಲಕ. 75,000 ಕ್ಕಿಂತಲೂ ಹೆಚ್ಚು ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 10,000ಕ್ಕಿಂತಲೂ ಹೆಚ್ಚು ಜನ ಇದನ್ನು ಮೆಚ್ಚಿದ್ದಾರೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮುಚ್ಚಿದ ಅಂಗಡಿಯ ಮುಂದೆ ಆಕೆ ಹಾದು ಹೋಗುವಾಗ ಈತ ನೆಲಕ್ಕೆ ಕುಳಿತು ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಗಾಗಿ ಬೇಡಿಕೊಳ್ಳುತ್ತಿದ್ದಾನೆ. ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸುತ್ತಿದ್ದಾಳೆ. ಆದರೆ ನಿಜವಾದ ಪ್ರೀತಿ ಖಾಸಗಿಯಾಗಿರುತ್ತದೆ. ಹೀಗೆ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಏನು ಮಾಡುವುದು ಸಿನೆಮಾದಂಥ ಭ್ರಾಮಕ ಜಗತ್ತಿನ ಪ್ರಭಾವ, ಸಾಮಾಜಿಕ ಜಾಲತಾಣಗಳ ಆಕರ್ಷಣೆ. ಎಲ್ಲವನ್ನೂ ತೆರೆದಿಟ್ಟು ಹಗೂರಾಗುವ ಇಂದಿನ ರೀತಿನೀತಿ…

ಈ ವಿಡಿಯೋ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಜೊತೆಗೆ ಕೆಲವರು ಬುದ್ಧಿ ಹೇಳುತ್ತಿದ್ದಾರೆ. ಛೆ ನಾಚಿಕೆಯಾಗಬೇಕು ನಿನಗೆ. ನಿನ್ನ ಅಪ್ಪ ಅಮ್ಮನ ಮೇಲೆ ಕೋಪ ಬಂದಾಗಲಾದರೂ ಹೀಗೆ ವರ್ತಿಸಿದ್ದೆಯಾ? ನಿನಗೆ ಸ್ವಾಭಿಮಾನ, ಆತ್ಮಗೌರವ ಇಲ್ಲವಾ? ಇದು ಬಲಹೀನ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದಿದ್ದಾರೆ ಒಬ್ಬರು. ಲಗೇ ರಹೋ ಮುನ್ನಾ ಭಾಯ್​ ಎಂದಿದ್ದಾರೆ ಇನ್ನೊಬ್ಬರು.

ನಗಬೇಡಿ. ಈತ ಈಕೆಯಿಂದ ದೂರ ಓಡಿಹೋಗುತ್ತಿಲ್ಲ. ಈಕೆಯ ಪಾದಗಳನ್ನು ಮುಟ್ಟಿ ಕೇಳಿಕೊಳ್ಳುತ್ತಿದ್ಧಾನೆ. ಯಾರಾದರೊಂದಿಗೆ ಆಳವಾಗಿ ನಿಜವಾದ ಪ್ರೀತಿಯಲ್ಲಿದ್ದಾಗ ಜೀವನದಲ್ಲಿ ಒಮ್ಮೆ ಮಾತ್ರ ಇದು ಘಟಿಸುತ್ತದೆ. ನನಗಿವನ ನೋವು ಅರ್ಥವಾಗುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Sat, 12 November 22