ಒಂದಾನೊಂದು ಊರಲ್ಲಿ ಸುಡು ಬೇಸಿಗೆಯ ಸಮಯದಲ್ಲಿ ಕಾಗೆಯೊಂದು ತನ್ನ ಬಾಯಾರಿಕೆಯನ್ನು ನೀಗಿಸಲು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬರುವಾಗ ಎಲ್ಲೂ ನೀರು ಸಿಗದೆ ಕೊನೆಗೆ ಸುಸ್ತಾಗಿ ಮರವೊಂದರ ಕೊಂಬೆಯ ಮೇಲೆ ಕುಳಿತು ಬಿಡುತ್ತದೆ. ಹೀಗೆ ಕುಳಿತಿರುವಾಗ ಕಾಗೆಗೆ ಸ್ವಲ್ಪ ದೂರದಲ್ಲಿ ನೀರಿನ ಕೊಡವೊಂದು ಕಾಣಿಸುತ್ತದೆ. ಥಟ್ಟನೆ ಆ ಕಾಗೆ ಕೊಡದ ಬಳಿ ಹಾರಿ ಹೋಗುತ್ತದೆ, ಆದರೆ ನೀರು ತಳ ಭಾಗದಲ್ಲಿದ್ದ ಕಾರಣ, ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಕಾಗೆ ತನ್ನ ಬುದ್ಧಿವಂತಿಕೆಯಿಂದ ಅಲ್ಲಿದ್ದ ಕಲ್ಲುಗಳನ್ನೆಲ್ಲಾ ಆ ಕೊಡದೊಳಗೆ ತುಂಬಿಸುತ್ತದೆ, ಆಗ ನೀರು ಮೇಲೆ ಬರಲಾರಂಭಿಸುತ್ತದೆ. ನಂತರ ಆ ನೀರು ಕುಡಿದು ಕಾಗೆ ಅಲ್ಲಿಂದ ಹಾರಿ ಹೋಗುತ್ತದೆ. ಕಾಗೆಯ ಬುದ್ಧಿವಂತಿಕೆಗೆ ಸಂಬಂಧಿಸಿದ ಈ ನೀತಿ ಕಥೆಯನ್ನು ಬಹುತೇಕ ನಾವೆಲ್ಲರೂ ಶಾಲಾದಿನಗಳಲ್ಲಿ ಓದಿರುತ್ತೇವೆ. ಇದನ್ನೆಲ್ಲಾ ಕಥೆಗಳಲ್ಲಿ ಕೇಳಲು ಚೆನ್ನಾಗಿರುತ್ತದೆ, ಆದರೆ ನಿಜಜೀವನದಲ್ಲಿ ಕಾಗೆಗಳು ಇಷ್ಟೆಲ್ಲಾ ಬುದ್ಧಿವಂತಿಕೆಯನ್ನು ಉಪಯೋಗಿಸಲು ಸಾಧ್ಯನಾ… ಎಂದು ಹಲವರು ಯೋಚಿಸಬಹುದು. ನೀವು ಕೂಡಾ ಅದೇ ರೀತಿ ಭಾವಿಸಿದ್ದೀರಾ? ಹಾಗಾದರೆ ಅದು ನಿಮ್ಮ ತಪ್ಪು ಕಲ್ಪನೆ, ಏಕೆಂದರೆ ಇಲ್ಲೊಂದು ಕಾಗೆ ಈ ಕಥೆಯನ್ನು ನಿಜವೆಂದು ಸಾಬೀತು ಪಡಿಸಿದೆ ಆ ಕುರಿತ ವಿಡಿಯೋ ಇಲ್ಲಿದೆ ನೋಡಿ.
@byari_rockers_ ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಸ್ಕೂಲ್ ಪಾಠದಲ್ಲಿದ್ದ ಕಾಗೆ ಸಿಕ್ತುʼ ಎಂಬ ಶೀರ್ಷಿಕೆಯನ್ನು ಕೂಡಾ ಬರೆಯಲಾಗಿದೆ. ವಿಡಿಯೋದಲ್ಲಿ ಬಾಯಾರಿದ ಕಾಗೆಯೊಂದು ಬಾಟಲಿಯೊಳಗೆ ಕಲ್ಲುಗಳನ್ನು ಹಾಕುತ್ತಾ, ಆ ನೀರು ಮೇಲೆ ಬಂದಾಗ ಕಾಗೆ ನೀರನ್ನು ಕುಡಿಯುವ ದೃಶ್ಯವನ್ನು ಕಾಣಬಹುದು.
ವಿಡಿಯೋದಲ್ಲಿ ಕಾಗೆಯೊಂದು ಬಾಯಾರಿರುತ್ತೆ. ಅಲ್ಲೇ ಒಂದು ಬಾಟಲಿಯಲ್ಲಿ ನೀರು ಸಹ ಇರುತ್ತೆ. ಆದರೆ ಕಾಗೆಗೆ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ನೀರು ತಳಭಾಗದಲ್ಲಿತ್ತು. ಆಗ ಕಾಗೆ ಹೀಗೆ ಕುಳಿತರೆ ನಾವು ಬಾಯಾರಿಕೆಯಿಂದಲೇ ಸಾಯಬೇಕಾಗುತ್ತದೆ ಎಂದು ತನ್ನ ಬುದ್ಧಿವಂತಿಕೆಯಿಂದ ಅಲ್ಲೇ ಹತ್ತಿರದಲ್ಲಿದ್ದ, ಸಣ್ಣ ಸಣ್ಣ ಕಲ್ಲುಗಳನ್ನು ಬಾಯಲ್ಲಿ ಹೆಕ್ಕಿ ತಂದು ಬಾಟಲಿಯೊಳಗೆ ಹಾಕುತ್ತದೆ. ಹೀಗೆ ಒಂದೊಂದೆ ಕಲ್ಲುಗಳನ್ನು ಬಾಟಲಿಯೊಳಗೆ ಹಾಕಿದಾಗ ತಳಭಾಗದಲ್ಲಿದ್ದ ನೀರು ಮೇಲೆ ಬರಲಾರಂಭಿಸುತ್ತದೆ, ಆಗ ಕಾಗೆ ತೃಪ್ತಿಯಿಂದ ನೀರನ್ನು ಕುಡಿಯುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: Viral Video: ಅಯ್ಯೋ ಇದು ಯಾರು? ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಹೌಹಾರಿದ ಕರಡಿ
ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿರುವ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 59.5K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ವಿಡಿಯೋ ಬಗ್ಗೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಇಷ್ಟು ದಿನ ಈ ಕಾಗೆ ಎಲ್ಲಿಗೆ ಹೋಗಿತ್ತುʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸ್ಕೂಲ್ ಪಾಠದಲ್ಲಿ ಓದಿದ್ದ ಕಾಗೆಯನ್ನು ಕೊನೆಗೂ ನಿಜ ಜೀವನದಲ್ಲಿ ತೋರಿಸಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾವು ಪಾಠದಲ್ಲಿ ಓದಿದ್ದ ಆ ಕಾಗೆ ಇನ್ನೂ ಬದುಕಿದ್ಯಾʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ