Viral: ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಕಣ್ಣಂಚಲಿ ನೀರು ತರಿಸುತ್ತವೆ, ಮುಖದಲ್ಲಿ ನಗು ತರಿಸುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು, ಮೂವರು ಹುಡುಗರು ತನ್ನ ಕಂದಮ್ಮನಿಗೆ ಹಾಲು ಕೊಡಲು ನಿರಾಕರಿಸಿದ ತಾಯಿ ಶ್ವಾನದ ಕೈಕಾಲನ್ನು ಗಟ್ಟಿಯಾಗಿ ಹಿಡಿದು ಹಸಿವಿನಿಂದ ಅಳುತ್ತಿದ್ದ ನಾಯಿ ಮರಿಗಳಿಗೆ ತಾಯಿ ಎದೆ ಹಾಲು ಉಣಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

Viral: ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು; ಹೃದಯಸ್ಪರ್ಶಿ ದೃಶ್ಯ ವೈರಲ್‌
ವೈರಲ್‌ ವಿಡಿಯೋ
Image Credit source: Social Media

Updated on: May 10, 2025 | 10:41 AM

ಮನುಷ್ಯರಂತೆ ನಾಯಿ (Dogs), ಬೆಕ್ಕು, ಹಸು ಸೇರಿದಂತೆ ಎಲ್ಲಾ ಪ್ರಾಣಿಗಳು (Animals) ಕೂಡಾ ತಮ್ಮ ಮರಿಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಹೀಗಿದ್ದರೂ ಕೆಲವೊಂದು ಬಾರಿ ಈ ಪ್ರಾಣಿಗಳು ತಮ್ಮ ಕಂದಮ್ಮಗಳಿಗೆ ಎದೆ ಹಾಲು ಉಣಿಸಲು ನಿರಾಕರಿಸುತ್ತವೆ. ಹಾಲು ಕಡಿಯಲು ಬಂದ ಮರಿಗಳ ಮೇಲೆ ಸುಖಾಸುಮ್ಮನೆ ಕೋಪ ಮಾಡಿಕೊಳ್ಳುತ್ತವೆ. ಇಂತಹ ದೃಶ್ಯಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ತಾಯಿ ಶ್ವಾನವೊಂದು ತನ್ನ ಮರಿಗಳಿಗೆ ಹಾಲುಣಿಸಲು ನಿರಾಕರಿಸಿದೆ. ಈ ದೃಶ್ಯವನ್ನು ಕಂಡು ಮೂವರು ಬಾಲಕರು ತಾಯಿ ಶ್ವಾನದ ಕೈಕಾಲನ್ನು ಗಟ್ಟಿಯಾಗಿ ಹಿಡಿದು ತಾಯಿ ಮರಿಗೆ ತಾಯಿಯ ಎದೆ ಹಾಲು ಕುಡಿಸಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ (Viral) ಆಗುತ್ತಿದ್ದು, ಮಕ್ಕಳ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು:

ನಾಯಿ ಆಗಿರ್ಬೇದು ಅಥವಾ ಬೆಕ್ಕು, ಹಸು ಕೆಲವೊಂದು ಬಾರಿ ಮರಿಗಳಿಗೆ ಹಾಲುಣಿಸಲು ನಿರಾಕರಿಸುತ್ತವೆ. ಅದೇ ರೀತಿ ಇಲ್ಲೊಂದು ತಾಯಿ ಶ್ವಾನ ತನ್ನ ಕಂದಮ್ಮಗಳಿಗೆ ಹಾಲುಣಿಸಲು ನಿರಾಕರಿಸಿದ್ದು, ಈ ದೃಶ್ಯವನ್ನು ಕಂಡ ಮೂವರು ಬಾಲಕರು ಮರಿಗಳಿಗೆ ಹಾಲು ಕೊಟ್ರೆ ಸರಿ, ಇಲ್ಲದಿದ್ರೆ ಏನು ಮಾಡ್ತಿವೀ ನೋಡು ಎನ್ನುತ್ತಾ, ತಾಯಿ ಶ್ವಾನದ ಕೈಕಾಲನ್ನು ಗಟ್ಟಿಯಾಗಿ ಹಿಡಿದು, ಮರಿಗಳಿಗೆ ಎದೆ ಹಾಲು ಕುಡಿಸಿದ್ದಾರೆ.

ಇದನ್ನೂ ಓದಿ
ಬಲುಬುದ್ಧಿವಂತ ಪಾಕ್ ರಕ್ಷಣಾ ಸಚಿವ, ಅಸಲಿ ವಿಚಾರ ಇಲ್ಲಿದೆ
ಹಾಡು ಹಾಡಿ ದಾಂಪತ್ಯ ಉಳಿಸಿಕೊಂಡ ಪತಿ, ಲಾಯರ್ ಶಾಕ್ ದಂಪತಿ ರಾಕ್
ಹೆಚ್ಚುವರಿ ದರ ವಸೂಲಿ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ
ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂಧೂರ, ಕಲಾವಿದರ ಮೈರೋಮಾಂಚನಕಾರಿ ಮಾತುಗಳು

ಇದನ್ನೂ ಓದಿ: ಜೋಕರಾದ ಪಾಕ್ ರಕ್ಷಣಾ ಸಚಿವ: ಭಾರತಕ್ಕೆ ನಾವಿರುವ ಸ್ಥಳ ಗೊತ್ತಾಗುತ್ತದೆ, ಅದಕ್ಕೆ ಅವರ ಡ್ರೋನ್​​ಗಳನ್ನು ತಡೆಯುತ್ತಿಲ್ಲ

ವೈರಲ್‌ ವಿಡಿಯೋ ನೋಡಿ:

ಈ ಹೃದಯಸ್ಪರ್ಶಿ ದೃಶ್ಯವನ್ನು haraappan ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಪ್ರಪಂಚವು ಪ್ರೀತಿಯ ಮೇಲೆ ನಿಂತಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮೂವರು ಹುಡುಗರು ತಾಯಿ ಶ್ವಾನದ ಕೈಕಾಲನ್ನು ಗಟ್ಟಿಯಾಗಿ ಹಿಡಿದು ನಾಯಿ ಮರಿಗಳಿಗೆ ಹಾಲು ಕುಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ತಾಯಿ ಶ್ವಾನ ಮರಿಗಳಿಗೆ ಹಾಲು ಕೊಡಲು ನಿರಾಕರಿಸಿದ್ದಕ್ಕೆ, ಮೂವರು ಹುಡುಗರು ತಾಯಿ ಶ್ವಾನದ ಕೈಕಾಲು ಹಿಡಿದು ಮಲಗಿಸಿ, ಮರಿಗಳಿಗೆ ಅದರ ಎದೆಹಾಲು ಕುಡಿಸಿದ್ದಾರೆ.

ಮೇ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯವಂತೂ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಮಾಡಿದ್ರೆ ನಾಯಿ ಕಚ್ಚುವ ಸಾಧ್ಯತೆʼ ಇರುತ್ತದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಹೃದಯಸದಪರ್ಶಿ ದೃಶ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ