Viral: ಅಮೇಝಾನ್​; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್​​ ಮಹಿಳೆಯನ್ನು ತಲುಪಿದಾಗ

|

Updated on: Jul 31, 2023 | 6:10 PM

Online Scam : ಏನೊಂದೂ ಸುಳಿವಿಲ್ಲದೆ ಇಷ್ಟೊಂದು ಪಾರ್ಸೆಲ್​​ಗಳು ವರ್ಜೀನಿಯಾದ ಈ ಮಹಿಳೆಯನ್ನು ತಲುಪಿದ್ದಾದರೂ ಹೇಗೆ? ಇದೇನು ಮಾರಾಟಗಾರರ ಹೊಸ ಸಂಚೆ? ಬಾಕ್ಸ್​​ಗಳಲ್ಲಿ ಏನಿದ್ದವು, ನಂತರ ಆಕೆ ಅವೆಲ್ಲವನ್ನೂ ಏನು ಮಾಡಿದಳು? ಓದಿ.

Viral: ಅಮೇಝಾನ್​; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್​​ ಮಹಿಳೆಯನ್ನು ತಲುಪಿದಾಗ
ವರ್ಜಿನೀಯಾದ ಸಿಂಡಿ ಅಮೇಝಾನ್​ ಬಾಕ್ಸ್​​ಗಳೊಂದಿಗೆ
Follow us on

Amazon : ಆನ್​ಲೈನ್​ ಶಾಪಿಂಗ್​ನ ತಕರಾರುಗಳು ಅವಾಂತರಗಳು ಒಂದೆರಡಲ್ಲ. ನಿತ್ಯವೂ ನೂರಾರು ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಆದರೂ ಜನರಿಗೆ ಆನ್​ಲೈನ್​ ಶಾಪಿಂಗ್​ನಿಂದ (Online Shopping) ತಪ್ಪಿಸಿಕೊಳ್ಳಲಾಗುತ್ತಿಲ್ಲ. ಇದೀಗ ಬೆಳಕಿಗೆ ಬಂದಿರುವ ಪ್ರಕರಣ ನಿಜಕ್ಕೂ ಹೌಹಾರುವಂತಿದೆ. ಒಂದಲ್ಲ ಎರಡಲ್ಲ 100ಕ್ಕೂ ಹೆಚ್ಚು ಪಾರ್ಸೆಲ್​ಗಳು ಅಮೇಝಾನ್​ನಿಂದ ವರ್ಜೀನಿಯಾದ ಪ್ರಿನ್ಸ್ ವಿಲಿಯಂ ಕೌಂಟಿಯ ಸಿಂಡಿ ಸ್ಮಿತ್ ಎನ್ನುವವರಿಗೆ ತಲುಪಿವೆ. ಆಕೆ ಒಂದೇ ಒಂದು ಸಾಮಾನು ಆರ್ಡರ್ ಮಾಡದೆಯೂ ಅಷ್ಟೊಂದು ಸಾಮಾನುಗಳು ಆಕೆಯನ್ನು ತಲುಪಿದ್ದಾದರೂ ಹೇಗೆ?

ಇದನ್ನೂ ಓದಿ : Viral Video: ಹಿಮಾಚಲ ಪ್ರದೇಶ: ಅಪರೂಪದ ಬಿಳಿ ಹಾವು ಪತ್ತೆ, ವಿಡಿಯೋ ವೈರಲ್

ಇದೊಂದು ಮಾರಾಟಗಾರರ ವಂಚನೆಯ ಹೊಸ ಸ್ವರೂಪ. ಅಮೇಝಾನ್​ನ ಬಾಕ್ಸ್​​ಗಳು ಸಿಂಡಿ ಮನೆಯ ಅಂಗಳವನ್ನು ತುಂಬತೊಡಗಿದ್ದಂತೆ ಆಕೆ ನಿಜಕ್ಕೂ ದಿಗ್ಭ್ರಮೆಗೆ ಒಳಗಾದಳು. ಫೆಡ್​ಎಕ್ಸ್​, ಅಮೇಝಾನ್​ ಮುಂತಾದ ಕಂಪೆನಿಗಳಿಂದ ಬಂದ ಬಾಕ್ಸ್​​​ಗಳು ಆಕೆಯ ಮನೆ, ನೆಲಮಾಳಿಗೆಯ ಜಾಗವೆಲ್ಲಾ ಆವರಿಸಿದಾಗ ಡ್ರೈವರ್​​ಗಳು ಉಳಿದ ಬಾಕ್ಸ್​​ಗಳನ್ನು ಬಾಗಿಲಮುಂದೆಯೇ ಇಟ್ಟು ಹೋದರು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಿಂಡಿ ಮನೆಯೊಳಗೆ ಜಾಗ ಸಾಲದೆ ಬಾಗಿಲ ಮುಂದೆಯೂ ಬಾಕ್ಸ್​​ಗಳನ್ನು ಇಳಿಸಿ ಹೋಗಿರುವುದು. 

‘1,000 ಹೆಡ್‌ಲ್ಯಾಂಪ್‌ಗಳು, 800 ಬೈನಾಕ್ಯುಲರ್‌ಗಳು, ಮಕ್ಕಳ ಆಟಿಕೆಗಳನ್ನು ಈ ಬಾಕ್ಸ್​​​ಗಳು ಒಳಗೊಂಡಿವೆ. ಇವುಗಳನ್ನು ಹೇಗೆ ಮರಳಿಸುವುದು ಎಂದು ತಿಳಿಯದೆ ನೆರೆಹೊರೆಯವರಿಗೆ ಮತ್ತು ಅವಶ್ಯಕತೆ ಇದ್ದವರಿಗೆಲ್ಲ ಕೊಟ್ಟೆ.  ಕಾರಿನಲ್ಲಿ ಹೇರಿಕೊಂಡು ಹಂಚಿಬಂದೆ. ಹೆಡ್​ಲ್ಯಾಂಪ್​ಗಳನ್ನು ಪಶುಚಿಕಿತ್ಸಾಲಯಗಳಿಗೆ ಕೊಟ್ಟುಬಂದೆ. ‘ಎಂದಿದ್ದಾರೆ ಸಿಂಡಿ.

ಇದನ್ನೂ ಓದಿ : Viral Video:ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ; 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ

‘ಆನ್​ಲೈನ್​ ಮಾರಾಟಗಾರರು ಬೇರೆ ಬೇರೆ ವಿಧಾನಗಳಲ್ಲಿ ಜನರ ಹೆಸರು, ಫೋನ್​ ನಂಬರ್,​​ ವಿಳಾಸವನ್ನು ಸಂಗ್ರಹಿಸುತ್ತಾರೆ. ನಂತರ ತಮ್ಮ ವೆಬ್​ಸೈಟ್​ನಲ್ಲಿ ನಕಲಿ ರಿವ್ಯೂ ಬರೆದು ರೇಟಿಂಗ್ಸ್​ ಹೆಚ್ಚಿಸಿಕೊಳ್ಳುತ್ತಾರೆ. ಇಂಥ ಬ್ರಷಿಂಗ್​ ಸ್ಕ್ಯಾಮ್​ಗೆ ನಾನು ಈಡಾಗಿರುವ ಸಾಧ್ಯತೆ ಇದೆ ಎಂದು ಆರಂಭದಲ್ಲಿ ಅಂದುಕೊಂಡೆ” ಎಂದು ಮನಿಕಂಟ್ರೋಲ್​ಗೆ ಸಿಂಡಿ ತಿಳಿಸಿದ್ದಾರೆ.

ಇದನ್ನೂ ಓದಿ : Viral Video:ಮೊದಲ ಸಲ ಉದ್ಯಾನಕ್ಕೆ ಬಂದ ಟೋಕೋ; ನಾಯಿಯಾಗಲು ರೂ 12 ಲಕ್ಷ ವ್ಯಯಿಸಿದ ಜಪಾನಿಗ

ಆದರೂ ನಿಖರವಾಗಿ ಇದು ಎಂಥ ಮಾರಾಟ ಹಗರಣ ಇದರ ಸೂತ್ರದಾರರು ಯಾರು ಎನ್ನುವುದು ತಿಳಿದುಬಂದಿಲ್ಲ. ಇನ್ನು ಅಮೇಝಾನ್ ಸಪ್ಲೈ ಸೆಂಟರ್​ನಿಂದ​ ಮಾರಾಟವಾದ ವಸ್ತುಗಳನ್ನು ಖಾಲಿಮಾಡಲು ಹೀಗೆ ಸಾಗಿಸುವ ಪ್ರಯತ್ನ ಮಾಡುತ್ತದೆ ಎನ್ನುವುದೂ ಕೇಳಿಬಂದಿದೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:05 pm, Mon, 31 July 23