ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ನಂತರ ಪಟ್ಟಗೆರೆ ಶೆಡ್ ಹೆಸರು ಎಲ್ಲೆಡೆ ಭಾರೀ ವೈರಲ್ ಆಗಿದೆ. ಗೂಗಲ್‌ನಲ್ಲೂ ಸಹ ಪಟ್ಟಣಗೆರೆ ಶೆಡ್ ಬಗ್ಗೆ ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಲ್ಲದೇ ಸಿನಿಮಾವೊಂದರಲ್ಲಿ ‘ಶೆಡ್ಡಿಗೆ ಹೋಗಣ ಬಾ..’ ಎಂದು ಹಾಡನ್ನೇ ಮಾಡಲಾಗಿದೆ. ಇದೀಗ ಟೀ ಸ್ಟಾಲ್ ಒಂದನ್ನು ಓಪನ್ ಆಗಿದ್ದು, ಇದಕ್ಕೆ ಸಂಬಂಧಿಸಿದ ಪೋಸ್ಟ್ ಒಂದು ಎಲ್ಲೆಡೆ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ಪೋಸ್ಟ್ ಪ್ರಕಾರ ತರೀಕೆರೆಯ ಎಂಜಿ ರಸ್ತೆಯಲ್ಲಿ ಟೀ ಸ್ಟಾಲ್ ಒಂದು ಆರಂಭವಾಗಿದ್ದು, ಈ ಟೀ ಅಂಗಡಿಗೆ ‘ಶೆಡ್ ಟೀ ಸ್ಟಾಲ್’ ಎಂದು ಹೆಸರಿಡಲಾಗಿದೆ. ನಮ್ಮಲಿ ಬೀಡಾ, ಕಾಫಿ, ಟೀ, ಬೂಸ್ಟ್ ಮತ್ತು ಹಾಲು ಲಭ್ಯವಿದೆ ಎಂದು ಬರೆಯಲಾಗಿದೆ. ಇದಲ್ಲದೇ ‘ಬಾ ಗುರು ಶೆಡ್ಗೆ ಟೀ ಕುಡಿ’ ಎಂದು ಬರೆಯಲಾಗಿದೆ. ಸದ್ಯ ಪೋಸ್ಟ್ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಹೆತ್ತ ಕಂದಮ್ಮನನ್ನೇ ಕೊಂದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದ ಪಾಪಿ ತಾಯಿ
ಇದೀಗ ನಟ ದರ್ಶನ್ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಯಶಸ್ವಿಯಾಗಿ ಶಿಫ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆಯಾದ ದಿನದಿಂದ ದರ್ಶನ್ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ತಮ್ಮ ಟೀ ಸ್ಟಾಲ್ ಬಿಸಿನೆಸ್ ಹೆಚ್ಚಿನ ಲಾಭ ಪಡೆಯಲು ಯುನೀಕ್ ಆಗಿ ಶೆಡ್ನ ಹೆಸರನ್ನು ಬಳಸಿಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ