ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಪರಿಶೀಲಿಸಿದ ಬಳಿಕ ಮೊಬೈಲ್ ಫೋನ್ ಹೊಟ್ಟೆಯಲ್ಲಿ ಸಿಲುಕಿಕೊಂಡಿರುವ ದೃಶ್ಯ ನೋಡಿ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ಈಜಿಪ್ಟ್ ವ್ಯಕ್ತಿಯೊಬ್ಬ 6 ತಿಂಗಳ ಹಿಂದೆ ಫೋನ್ ನುಂಗಿದ್ದ, ದೇಹದ ಮೂಲಕ ನೈಸರ್ಗಿಕವಾಗಿ ಹೊರಬರಲಿ ಎಂದು ಕಾದು ಕುಳಿತಿದ್ದ. ಆದಾಗ್ಯೂ ಫೋನ್ ಹೊರಬಂದಿಲ್ಲ. ಆದರೆ ದೇಹದಿಂದ ತ್ಯಾಜ್ಯಗಳು ಹೊರಬರದಂತೆ ನಿರ್ಬಂಧಿಸಿತ್ತು. ಇದರಿಂದ ಹೊಟ್ಟೆ ನೋವಿನ ಸಮಸ್ಯೆ ಎದುರಾಗಿದೆ. ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ದಿನ ಕಳೆಯುತ್ತಿದ್ದಂತೆಯೇ ವ್ಯಕ್ತಿಗೆ ಹೊಟ್ಟೆ ನೋವು ಹೆಚ್ಚಾಗಿದೆ. ಸಹಿಸಿಕೊಳ್ಳಲಾಗದಷ್ಟು ವಿಪರೀತಕ್ಕೆ ಹೋದಂತೆ ವೈದ್ಯರ ಬಳಿ ಚಿಕಿತ್ಸೆಗೆ ಹೋಗಿದ್ದಾರೆ. ಎಕ್ಸ್-ರೇ ಸ್ಕ್ಯಾನ್ ಬಳಿಕ ಸಂಪೂರ್ಣ ಫೋನ್ ಆತನ ಹೊಟ್ಟೆಯೊಳಗೆ ಸಿಲುಕಿಕೊಂಡಿರುವುದನ್ನು ನೋಡಿ ವೈದ್ಯರು ಆಶ್ಚರ್ಯಗೊಂಡಿದ್ದಾರೆ.
ಈ ಘಟನೆಯ ಬಳಿಕ ವ್ಯಕ್ತಿಯ ಕರುಳು, ಕಿಬ್ಬೊಟ್ಟೆಯ ಮೇಲಿನ ಹೊಡೆತದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈಜಿಪ್ಟ್ನ ಅಸ್ವಾನ್ ಯೂನಿವರ್ಸಿಟಿ ಆಸಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು. ವರದಿಗಳ ಪ್ರಕಾರ, ಸಂಪೂರ್ಣ ಫೋನ್ಅನ್ನು ನುಂಗಿದ ವ್ಯಕ್ತಿಯನ್ನು ನೋಡಿದ್ದು ಇದೇ ಮೊದಲು ಎಂದು ಅಸ್ವಾನ್ ಯುನಿವರ್ಸಿಟಿ ಆಸ್ಪತ್ರೆ ಅಧ್ಯಕ್ಷ ಮೊಹಮ್ಮದ್ ಎಲ್ ದಶೌರಿ ಹೇಳಿದ್ದಾರೆ.
ಮನುಷ್ಯನ ಸ್ಥಿತಿ ಇದೀಗ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅದಾಗ್ಯೂ ಆತ ಮೊಬೈಲ್ ನುಂಗಲು ಕಾರಣವೇನೂ ಎಂಬುದೂ ಸ್ಪಷ್ಟವಾಗಿಲ್ಲ. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:
Shocking News: ಮೊಬೈಲ್ ಕೊಡಲಿಲ್ಲ ಎಂದು ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ!
Shocking Video: ದೈತ್ಯ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುದ್ದಾಡಿದ ವ್ಯಕ್ತಿ; ವಿಡಿಯೋ ನೋಡಿ
Published On - 9:54 am, Wed, 20 October 21