Shocking News: ಅಜ್ಜಿ ಪಕ್ಕ ಮಲಗಿದ್ದ ಮಗುವನ್ನು ಎತ್ತಿಕೊಂಡು ನೀರಿನ ಟ್ಯಾಂಕ್​ನಲ್ಲಿ ಹಾಕಿದ ಕೋತಿಗಳು!

Viral News: 2 ತಿಂಗಳ ಮಗು ಮನೆಯ ಟೆರೇಸ್‌ನಲ್ಲಿರುವ ಕೋಣೆಯಲ್ಲಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿತ್ತು. ಆಗ ರೂಮಿನೊಳಗೆ ನುಗ್ಗಿದ ಕೋತಿಗಳು ಹಸುಗೂಸನ್ನು ಎತ್ತಿಕೊಂಡು ಟೆರೇಸ್​ನಲ್ಲಿದ್ದ ನೀರಿನ ಟ್ಯಾಂಕ್​ನೊಳಗೆ ಎಸೆದಿರುವ ಘಟನೆ ನಡೆದಿದೆ.

Shocking News: ಅಜ್ಜಿ ಪಕ್ಕ ಮಲಗಿದ್ದ ಮಗುವನ್ನು ಎತ್ತಿಕೊಂಡು ನೀರಿನ ಟ್ಯಾಂಕ್​ನಲ್ಲಿ ಹಾಕಿದ ಕೋತಿಗಳು!
ಕೋತಿ
Updated By: ಸುಷ್ಮಾ ಚಕ್ರೆ

Updated on: Jan 10, 2022 | 7:07 PM

ನವದೆಹಲಿ: ಯಾರಾದರೂ ತೀರಾ ತಲೆಹರಟೆ, ಕಿತಾಪತಿ ಮಾಡುತ್ತಿದ್ದರೆ ಕಪಿ ಚೇಷ್ಟೆ ಮಾಡುತ್ತೀಯಲ್ಲ ಎಂದು ಗದರುವುದುಂಟು. ಮಂಗಗಳು ಒಂದೇ ಕಡೆ ನಿಂತಲ್ಲಿ ನಿಲ್ಲುವುದಿಲ್ಲ. ಸದಾ ಏನಾದರೂ ಕಿತಾಪತಿಗಳನ್ನು ಮಾಡುತ್ತಲೇ ಇರುತ್ತವೆ. ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಬಾಗ್‌ಪತ್‌ನಲ್ಲಿ ಕೋತಿಗಳ ಗುಂಪೊಂದು 2 ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕ್​ನಲ್ಲಿ ಹಾಕಿವೆ. ಆ ಮಗುವಿನ ಮನೆಯ ಟೆರೇಸ್‌ನಲ್ಲಿದ್ದ ರೂಮಿನಲ್ಲಿ ಅಜ್ಜಿಯ ಜೊತೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕ್‌ಗೆ ಎಸೆದಿವೆ!

ಹೌದು, ಈ ಆಘಾತಕಾರಿ ಘಟನೆ ಭಾನುವಾರ ಬಾಗ್​ಪತ್​ನಲ್ಲಿ ನಡೆದಿದ್ದು, ನೀರಿನಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. 2 ತಿಂಗಳ ಮಗು ಮನೆಯ ಟೆರೇಸ್‌ನಲ್ಲಿರುವ ಕೋಣೆಯಲ್ಲಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿತ್ತು. ಗಾಳಿ ಬರಲೆಂದು ಅಜ್ಜಿ ಬಾಗಿಲು ತೆರೆದು, ಮೊಮ್ಮಗುವಿನೊಂದಿಗೆ ರೂಮಿನಲ್ಲಿ ಮಲಗಿದ್ದರು. ಆಗ ರೂಮಿನೊಳಗೆ ಬಂದ ಕೋತಿಗಳು ಹಸುಗೂಸನ್ನು ಎತ್ತಿಕೊಂಡು ಟೆರೇಸ್​ನ ಹೊರಭಾಗದಲ್ಲಿದ್ದ ನೀರಿನ ಟ್ಯಾಂಕ್​ನೊಳಗೆ ಹಾಕಿರುವ ಘಟನೆ ನಡೆದಿದೆ.

ಕೋತಿಗಳು ಕೋಣೆಗೆ ನುಗ್ಗಿ ಮಗುವನ್ನು ಎಳೆದುಕೊಂಡು ಹೋದವು. ನಿದ್ರೆಗೆ ಜಾರಿದ್ದ ಅಜ್ಜಿ ನಿದ್ರೆಯಿಂದ ಎದ್ದಾಗ ಮೊಮ್ಮಗು ಕಾಣೆಯಾಗಿರುವುದನ್ನು ಕಂಡು ಅಜ್ಜಿ ಜೋರಾಗಿ ಕೂಗಿದರು. ಮೇಲೆ ಓಡಿ ಬಂದ ಮನೆಯವರು ಆ ಮಗು ಕಾಣದಿರುವುದನ್ನು ನೋಡಿ ಆತಂಕದಿಂದ ಸುತ್ತಲೂ ಹುಡುಕಾಡತೊಡಗಿದರು. 2 ತಿಂಗಳ ಮಗುವಾಗಿದ್ದರಿಂದ ಬೇರೆಲ್ಲೂ ಓಡಿಹೋಗಲು ಸಾಧ್ಯವಿಲ್ಲ ಎಂಬುದಂತೂ ಖಚಿತವಾಗಿತ್ತು. ಎಲ್ಲ ಕಡೆ ಹುಡುಕಾಡಿದ ನಂತರ ಟೆರೇಸ್​ನ ನೀರಿನ ತೊಟ್ಟಿಯಲ್ಲಿ ಮಗು ತೇಲುತ್ತಿರುವುದು ಪತ್ತೆಯಾಗಿದೆ.

ಆ ಏರಿಯಾದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೂ ಮೊದಲು ಕೂಡ ಸಾಕಷ್ಟು ಬಾರಿ ಕೋತಿಗಳು ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿದ್ದವು. ಮನೆಯೊಳಗಿನ ವಸ್ತುಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಬಿಸಾಡುತ್ತಿದ್ದವು. ಹಾಗೇ, ಹಿಂದೊಮ್ಮೆ ಮಗುವನ್ನು ತೆಗೆದುಕೊಂಡು ಹೋಗಲು ಕೂಡ ಪ್ರಯತ್ನಿಸಿದ್ದವು. ಆಗ ಎಚ್ಚೆತ್ತ ಪೋಷಕರು ಮಗುವನ್ನು ಕಾಪಾಡಿಕೊಂಡಿದ್ದರು. ಆದರೆ, ಈ ಬಾರಿ ಅಜ್ಜಿ ನಿದ್ರೆ ಮಾಡುತ್ತಿದ್ದಾಗ ಕೋತಿಗಳು ಮಗುವನ್ನು ಎತ್ತಿಕೊಂಡು ಹೋಗಿವೆ.

ಇದನ್ನೂ ಓದಿ: Shocking News: ವಿಮಾನದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕಸದ ಬುಟ್ಟಿಯಲ್ಲಿ ಬಿಸಾಡಿದ ಮಹಿಳೆ!

Shocking News: ಧಾರಾವಾಹಿ ತಂದ ಅವಾಂತರ; ಮಹಿಳೆಯರು ಟಿವಿ ನೋಡುತ್ತಿದ್ದಾಗ ಹಣ, ಒಡವೆ ದೋಚಿದ ಕಳ್ಳರು!