ಕಿವಿಯೊಳಗೆ ಏನಾದರೂ ಸಿಕ್ಕಿಕೊಂಡರೆ ಕಿರಿಕಿರಿ ಅನಿಸುವುದು ನಿಜ. ಅತ್ಯಂತ ಸೂಕ್ಷ್ಮ ಕಿವಿಯನ್ನು ಜೋಪಾನವಾಗಿ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಕಿವಿ ನೋವು, ಸೆಳೆತ ತಡೆಯಲಾರದಷ್ಟು ಸಂಕಟವನ್ನುಂಟು ಮಾಡುತ್ತದೆ. ಕಿವಿಯೊಳಗೆ ಅಡಚಣೆಯಾಗುತ್ತಿದೆ ಎಂದು ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ. ಮಹಿಳೆಯನ್ನು ಪರೀಕ್ಷಿಸಿದ ವೈದ್ಯರಿಗೆ, ಮಹಿಳೆಯ ಕಿವಿಯೊಳಗೆ ಜೇಡರ ಹುಳು ಇರುವುದು ಪತ್ತೆಯಾಗಿದೆ. ಕಳೆದ ಒಂದು ದಿನದಿಂದಲೂ ಜೇಡರ ಹುಳು ಕಿವಿಯೊಳಗೆ ವಾಸವಾಗಿತ್ತು ಎಂಬ ವಿಷಯ ವೈದ್ಯರಿಗೇ ಬೆರಗಾಗುವಂತೆ ಮಾಡಿದೆ.
ಚೀನಾದ ಮಹಿಳೆ ಹೆಸರು ಯೀ. ಇವರಿಗೆ ಕಿವಿಯೊಳಗೆ ಏನೋ ಅಡಗಿರುವಂತೆ ಅನಿಸುತ್ತಿತ್ತು. ಇತರರು ಮಾತನಾಡುವಾಗ ಕೇಳಿಸಿಕೊಳ್ಳಲು ಅಡಚಣೆಯಾಗುತ್ತಿತ್ತು. ಕಳೆದ ಒಂದು ದಿನದಿಂದ ಈ ಥರಹದ ಸಮಸ್ಯೆ ಕಾಡುತ್ತಿತ್ತು. ಬಳಿಕ ಅವರು ಆಸ್ಪತ್ರೆಗೆ ಪರೀಕ್ಷೆಗೆಂದು ಹೋಗಿದ್ದಾರೆ. ಅಲ್ಲಿ ವಿಷಯ ಬಯಲಾಗಿದೆ. ಕಿವಿಯೊಳಕ್ಕೆ ಜೇಡರ ಹುಳು ಒಂದು ದಿನದ ಹಿಂದಿನಿಂದ ವಾಸವಿತ್ತು ಎಂಬ ವಿಷಯ ಮಹಿಳೆಗೆ ಆಘಾತವನ್ನುಂಟು ಮಾಡಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಚಿಕ್ಕದಾದ ವೈದ್ಯಕೀಯ ಕ್ಯಾಮರಾ ಬಳಸಿ ವೈದ್ಯರು ಮಹಿಳೆಯ ಕಿವಿಯನ್ನು ಪರೀಕ್ಷಿಸಿದ್ದಾರೆ. ಆ ವೇಳೆ ಜೇಡರ ಹುಳು ಕಿವಿಯೊಳಗೆ ಇರುವುದು ಪತ್ತೆಯಾಗಿದೆ. ಕಿವಿಯೊಳಕ್ಕೆ ಕ್ಯಾಮರಾ ಹೋಗುತ್ತಿದ್ದಂತೆಯೇ ಹತ್ತಿರಕ್ಕೆ ಬಂದಿದೆ. ಆ ಬಳಿಕ ವೈದ್ಯರು ಜೇಡರ ಹುಳುವನ್ನು ಹೊರ ತೆಗೆದಿದ್ದಾರೆ. ಜೇಡರ ಹುಳು ತುಂಬಾ ದೊಡ್ಡದಾಗಿತ್ತು ಜತೆಗೆ ಒಂದು ದಿನ ರಾತ್ರಿ ಪೂರ್ತಿ ಮಹಿಳೆಯ ಕಿವಿಯೊಳಗೆ ವಾಸವಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಎಲೆಕ್ಟ್ರಿಕ್ ಒಟೊಸ್ಕೋಪ್ ಬಳಸಿ ವೈದ್ಯರು ಹುಳುವನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ:
Viral News: ಗಾಂಜಾ ಎಣ್ಣೆ ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಲು ಸಹಾಯಕವೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
Shocking News: ಮೊಬೈಲ್ ನುಂಗಿದ ಮಹರಾಯ; 6 ತಿಂಗಳ ಬಳಿಕ ಆಪರೇಷನ್ ಮೂಲಕ ಹೊರತೆಗೆದ ವೈದ್ಯರು