Shocking News: ಧಾರಾವಾಹಿ ತಂದ ಅವಾಂತರ; ಮಹಿಳೆಯರು ಟಿವಿ ನೋಡುತ್ತಿದ್ದಾಗ ಹಣ, ಒಡವೆ ದೋಚಿದ ಕಳ್ಳರು!

Crime News: ಮೇಘನಾಥನ್ ಅವರ ಹೆಂಡತಿ ತನ್ನ ಸಂಬಂಧಿಕರೊಂದಿಗೆ ಗುರುವಾರ ಸೀರಿಯಲ್ ನೋಡುತ್ತಿದ್ದರು. ಈ ವೇಳೆ ಅವರು ಮನೆ ಬಾಗಿಲನ್ನು ಹಾಕುವುದನ್ನು ಮರೆತಿದ್ದರು. ಜೋರಾಗಿ ವಾಲ್ಯೂಮ್ ಇಟ್ಟುಕೊಂಡು ಆ ಮಹಿಳೆಯರಿಬ್ಬರೂ ಧಾರಾವಾಹಿ ನೋಡುತ್ತಿದ್ದರು.

Shocking News: ಧಾರಾವಾಹಿ ತಂದ ಅವಾಂತರ; ಮಹಿಳೆಯರು ಟಿವಿ ನೋಡುತ್ತಿದ್ದಾಗ ಹಣ, ಒಡವೆ ದೋಚಿದ ಕಳ್ಳರು!
ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Dec 27, 2021 | 7:28 PM

ಚೆನ್ನೈ: ಮಹಿಳೆಯರು ಧಾರಾವಾಹಿ ನೋಡುತ್ತಾ ಕೂತರೆ ಜಗತ್ತೇ ತಲೆಕೆಳಗಾದರೂ ಗೊತ್ತಾಗುವುದಿಲ್ಲ ಎಂಬುದು ಹಲವು ಪುರುಷರ ಆರೋಪ. ತಮಿಳುನಾಡಿನಲ್ಲಿ ನಡೆದಿರುವ ಘಟನೆಯೊಂದನ್ನು ಕೇಳಿದರೆ ನಿಮಗೂ ಇದು ಸತ್ಯ ಎನಿಸುವುದು ಗ್ಯಾರಂಟಿ. ಧಾರಾವಾಹಿ ನೋಡುತ್ತಾ ಕುಳಿತಿದ್ದ ಮಹಿಳೆಯರಿಬ್ಬರು ಜಗತ್ತಿನ ಅರಿವೇ ಇಲ್ಲದಂತೆ ಕುಳಿತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ನಾಲ್ವರು ಕಳ್ಳರು ಮನೆಯೊಳಗೆ ನುಗ್ಗಿ 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯೊಳಗೆ ಕಳ್ಳರು ಬಂದು ದರೋಡೆ ಮಾಡಿದರೂ ಆ ಇಬ್ಬರು ಮಹಿಳೆಯರಿಗೆ ಗೊತ್ತಾಗಲೇ ಇಲ್ಲ.

ತಮಿಳುನಾಡಿನ ಕಾಂಚಿಪುರಂನಲ್ಲಿ ಗುರುವಾರ ರಾತ್ರಿ ಈ ವಿಚಿತ್ರವಾದ ಘಟನೆ ನಡೆದಿದೆ. ಆಡಿಟರ್ ಆಗಿರುವ ಮನೆ ಮಾಲೀಕ ಮೇಘನಾಥನ್ ಮನೆಯಲ್ಲಿರಲಿಲ್ಲ. ಆಗ ಮೇಘನಾಥನ್ ಅವರ ಹೆಂಡತಿ ತನ್ನ ಸಂಬಂಧಿಕರೊಂದಿಗೆ ಗುರುವಾರ ಸೀರಿಯಲ್ ನೋಡುತ್ತಿದ್ದರು. ಈ ವೇಳೆ ಅವರು ಮನೆ ಬಾಗಿಲನ್ನು ಹಾಕುವುದನ್ನು ಮರೆತಿದ್ದರು. ಜೋರಾಗಿ ವಾಲ್ಯೂಮ್ ಇಟ್ಟುಕೊಂಡು ಆ ಮಹಿಳೆಯರಿಬ್ಬರೂ ಧಾರಾವಾಹಿ ನೋಡುತ್ತಿದ್ದರು.

ಆಗ ಮನೆಯೊಳಗೆ ನುಗ್ಗಿದ ಮುಸುಕುಧಾರಿ ದರೋಡೆಕೋರರಿಬ್ಬರು ತೆರೆದ ಬಾಗಿಲಿನಿಂದ ಸೈಲೆಂಟಾಗಿ ಒಳಗೆ ಹೋಗಿ ನೋಡಿದ್ದಾರೆ. ಆಗ ಹಾಲ್​ನಲ್ಲಿ ಟಿವಿ ನೋಡುತ್ತಾ ಇಬ್ಬರು ಮಹಿಳೆಯರು ಮೈಮರೆತಿರುವುದನ್ನು ನೋಡಿದರು. ಹಾಗೇ, ರೂಮಿನೊಳಗೆ ಹೋಗಿ ಅಲ್ಲಿದ್ದ ಹಣವನ್ನೆಲ್ಲ ದೋಚಿಕೊಂಡರು. ಆದರೆ, ವಾರ್ಡ್​ರೋಬ್​ನ ಕೀ ಎಲ್ಲಿದೆ ಎಂದು ಗೊತ್ತಾಗಲಿಲ್ಲ. ಹೀಗಾಗಿ, ಹಾಲ್​ಗೆ ಬಂದು ಟಿವಿ ನೋಡುತ್ತಿದ್ದ ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ, ಕೀ ಕೇಳಿದರು.

ಆಗಲೇ ತಮ್ಮ ಮನೆಯೊಳಗೆ ದರೋಡೆಕೋರರು ಬಂದಿದ್ದಾರೆ ಎಂಬ ವಿಷಯ ಆ ಇಬ್ಬರು ಮಹಿಳೆಯರಿಗೆ ಗೊತ್ತಾಗಿದ್ದು!. ಅವರಿಬ್ಬರನ್ನೂ ಕಟ್ಟಿ ಹಾಕಿ ವಾರ್ಡ್​ರೋಬ್​ನಲ್ಲಿದ್ದ ಒಡವೆ, ಹಣವನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ. ಚಾಕು ತೋರಿಸಿ, ಹೆದರಿಸಿ ಮನೆಯೊಳಗಿನ 19 ಲಕ್ಷ ರೂ. ಮೌಲ್ಯದ ಒಡವೆ, ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಾಲ್ವರು ಬೈಕ್ ಗಳಲ್ಲಿ ಬಂದು, ಅವರಲ್ಲಿ ಇಬ್ಬರು ಗೇಟ್ ಬಳಿ ಕಾವಲು ಕಾಯುತ್ತಿದ್ದರು ಮತ್ತು ಇಬ್ಬರು ಮನೆಯೊಳಗೆ ನುಗ್ಗಿ ದರೋಡೆ ಮಾಡಿರುವುದು ಕಂಡು ಬಂದಿದೆ.

ಇದನ್ನೂ ಓದಿ: Shocking News: ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!

Shocking News: ಪಕ್ಕದಲ್ಲಿ ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!