
ನವದೆಹಲಿ: ಕೆಳಗಿನ ಫ್ಲೋರ್ನಲ್ಲಿ ಬಿದ್ದಿದ್ದ ಬಟ್ಟೆಯನ್ನು ಮೇಲೆತ್ತಿಕೊಂಡು ಬರಲು ತನ್ನ ಮಗನ ಕಾಲಿಗೆ ಸೀರೆಯನ್ನು ಕಟ್ಟಿ ಕೆಳಗೆ ಇಳಿಬಿಟ್ಟ ವಿಡಿಯೋ ಭಾರೀ ವೈರಲ್ (Viral Video) ಆಗಿದೆ. ದೆಹಲಿಯ ಎನ್ಸಿಆರ್ನ ಫರಿದಾಬಾದ್ನಲ್ಲಿ ಮಹಿಳೆಯೊಬ್ಬರು 10ನೇ ಮಹಡಿಯಿಂದ ತನ್ನ ಮಗುವನ್ನು ಕೆಳಗೆ ನೇತಾಡಿಸಿರುವ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು ಆ ಅಪಾರ್ಟ್ಮೆಂಟ್ನ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವರದಿಯ ಪ್ರಕಾರ, 9ನೇ ಮಹಡಿಯಲ್ಲಿರುವ ಮನೆಗೆ ಬೀಗ ಹಾಕಲಾಗಿತ್ತು. ಆ ಮನೆಯ ಬಾಲ್ಕನಿಯಲ್ಲಿ 10ನೇ ಮಹಡಿಯಲ್ಲಿದ್ದವರ ಬೆಡ್ಶೀಟ್ ಹಾರಿ ಬಿದ್ದಿತ್ತು. ಆ ಬಟ್ಟೆಯನ್ನು ತೆಗೆಯಲು ತಾಯಿ ತನ್ನ ಮಗನನ್ನು ಸೀರೆಯಲ್ಲಿ ಕಟ್ಟಿ ತನ್ನ ಮನೆಯ 10ನೇ ಮಹಡಿಯ ಬಾಲ್ಕನಿಯಿಂದ ಕೆಳಗಿನ ಮಹಡಿಯ ಬಾಲ್ಕನಿಗೆ ನೇತಾಡಿಸಿದ್ದಾಳೆ. ತಲೆ ಕೆಳಗಾಗಿ ಇಳಿದ ಆತ ಅಲ್ಲಿ ಬಿದ್ದಿದ್ದ ಬೆಡ್ಶೀಟ್ ತೆಗೆದುಕೊಂಡ ನಂತರ ಮಗನನ್ನು ಸೀರೆಯಿಂದ ಮೇಲೆಳೆದುಕೊಂಡಿದ್ದಾಳೆ.
ಕಳೆದ ವಾರ ಸೆಕ್ಟರ್ 82ರಲ್ಲಿ ಫರಿದಾಬಾದ್ನ ಫ್ಲೋರಿಡಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಈ ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದೆ. ನೆರೆಹೊರೆಯವರು ತಮ್ಮ ಮೊಬೈಲ್ನಿಂದ ಈ ಸಂಪೂರ್ಣ ಘಟನೆಯ ವೀಡಿಯೋ ಮಾಡಿ ಹರಿಬಿಡುತ್ತಿದ್ದಂತೆ ಆ ಮಹಿಳೆ ತನ್ನ ತಪ್ಪು ಒಪ್ಪಿಕೊಂಡಿದ್ದು, ವಿಷಾದ ವ್ಯಕತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಗೆಳತಿಯನ್ನು ಸೂಟ್ಕೇಸ್ನಲ್ಲಿಟ್ಟು ಹಾಸ್ಟೆಲ್ನೊಳಗೆ ಕರೆದೊಯ್ದ ವಿದ್ಯಾರ್ಥಿ; ಮಣಿಪಾಲ್ ಗರ್ಲ್ ವಿಡಿಯೋ ವೈರಲ್
Published On - 8:43 pm, Sat, 12 February 22