ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಈ ವಿಡಿಯೋ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಕಾಡಿನ ರಾಜ ಸಿಂಹವನ್ನೇ ಕಾಡುಕೋಣಗಳ ಹಿಂಡು ಕೊಂಬಿನಿಂದ ತಿವಿದು ಬಿಸಾಕಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ. ಕಾಡಿನ ರಾಜ ಏಳಲು ಸಾಧ್ಯವಾದಂತೆ ನಾಲ್ಕು ದಿಕ್ಕಿನಿಂದ ಕಾಡು ಕೋಣಗಳು ದಾಳಿ ಮಾಡುತ್ತಿರುವ ಭಯಾನಕ ದೃಶ್ಯ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಕಾಡುಕೋಣಗಳು ಒಂಟಿಯಾಗಿ ಸಿಕ್ಕಿದಾಗ ಕಾದುಕುಳಿತು ಸಿಂಹಗಳು ದಾಳಿ ಮಾಡುತ್ತವೆ. ಆದರೆ ಕಾಡುಕೋಣಗಳು ಗುಂಪಿನಲ್ಲಿದ್ದರೆ ಅವುಗಳನ್ನು ಭೇಟೆಯಾಡುವುದು ಅಷ್ಟು ಸುಲಭವಲ್ಲ. ಇದೀಗಾ ಅಂತದ್ದೇ ಸನ್ನಿವೇಶ ಸೃಷ್ಟಿಯಾಗಿದ್ದು, ಕಾಡುಕೋಣಗಳ ಹಿಂಡು ಸಿಂಹದ ಮೇಲೆ ದಾಳಿ ಮಾಡಿದೆ. ಇದಲ್ಲದೇ ತನ್ನ ಕೊಂಬುಗಳಿಂದ ಸಿಂಹವನ್ನು ಎತ್ತಿ ಬಿಸಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಿಂಗ್ ಪ್ರಾಣಾಪಾಯದಿಂದ ಪಾರಾಗಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
— NATURE IS BRUTAL (@TheBrutalNature) January 28, 2024
ಇದನ್ನೂ ಓದಿ: ದೈತ್ಯ ಹೆಬ್ಬಾವಿನ ಮೇಲೆ ಸಮರ ಸಾರಿದ ಮುಂಗುಸಿ ಸೈನ್ಯ, ಇಲ್ಲಿದೆ ಭೀಕರ ಕಾಳಗದ ದೃಶ್ಯ
ಈ ವೀಡಿಯೊವನ್ನು @TheBrutalNature ಎಂಬ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನವರಿ 28ರಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕೇವಲ 11 ಸೆಕೆಂಡುಗಳ ವೀಡಿಯೊವನ್ನು 1 ಲಕ್ಷ 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಜೊತೆಗೆ ವೀಡಿಯೊವನ್ನು ಮೂರು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ