ಟ್ವಿಟರ್​​ನಲ್ಲಿ ವೈರಲ್​​ ಆಗುತ್ತಿದೆ ಅತ್ಯಂತ ಚಿಕ್ಕ ರಾಜಿನಾಮೆ ಪತ್ರ; ಇಲ್ಲಿದೆ ನೋಡಿ

| Updated By: ವಿವೇಕ ಬಿರಾದಾರ

Updated on: Jun 14, 2022 | 9:14 PM

ಒಬ್ಬ ಕೆಲಸಗಾರ ತಮ್ಮ ಕಂಪನಿಯ ಮಾಲಿಕರಿಗೆ ಮೂರು ಶಬ್ದಗಳಲ್ಲಿ ರಾಜಿನಾಮೆ ಪತ್ರ ನೀಡಿದ್ದಾರೆ. ಆಶ್ಚರ್ಯವಾದರು ಇದು ಸತ್ಯ 

ಟ್ವಿಟರ್​​ನಲ್ಲಿ ವೈರಲ್​​ ಆಗುತ್ತಿದೆ ಅತ್ಯಂತ ಚಿಕ್ಕ ರಾಜಿನಾಮೆ ಪತ್ರ; ಇಲ್ಲಿದೆ ನೋಡಿ
ರಾಜಿನಾಮೆ ಪತ್ರ
Follow us on

ಒಂದು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಕೆಲಸಗಾಗರರು ಆ ಕಂಪನಿಗೆ ರಾಜಿನಾಮೆ ನೀಡುವಾಗ ಉದ್ದ ಉದ್ದ ಸಾಲುಗಳನ್ನು ಬರೆದು ರಾಜಿನಾಮೆ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಒಬ್ಬ ಕೆಲಸಗಾರ ತಮ್ಮ ಕಂಪನಿಯ ಮಾಲಿಕರಿಗೆ ಮೂರು ಶಬ್ದಗಳಲ್ಲಿ ರಾಜಿನಾಮೆ ನೀಡಿದ್ದಾರೆ. ಆಶ್ಚರ್ಯವಾದರು ಇದು ಸತ್ಯ

ಈ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾಗೇ ನೆಟ್ಟಿಗರ ಗಮನ ಸೆಳೆದಿದೆ. ಈ ರಾಜೀನಾಮೆ ಪತ್ರದ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿನೋದಮಯವಾಗಿ ಸಾಕಷ್ಟು  ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಹಜವಾಗಿಯೇ ರಾಜೀನಾಮೆ ಪತ್ರದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಈ ಚಿತ್ರವನ್ನು ಕಾವೇರಿ ಎಂಬುವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಚಿಕ್ಕ ಮತ್ತು ಸಿಹಿ,” ಪೋಸ್ಟ್​ಗೆ  ಶೀರ್ಷಿಕೆ ನೀಡಿದ್ದಾರೆ.

ಇದನ್ನು ಓದಿ: ಮುಸ್ಲಿಂ ಯುವಕನ ಎದೆಯ ಮೇಲೆ ಸಿಎಂ ಯೋಗಿ ಟ್ಯಾಟೂ! ಯೋಗಿ ಬಗ್ಗೆ ಯುವಕ ಹೇಳಿದ್ದೇನು ಗೊತ್ತಾ?

ಆ ಪತ್ರದಲ್ಲಿ ಏನು ಬರೆದಿದೆ ಎಂದು ಆಶ್ಚರ್ಯಪಡುತ್ತೀರಾ? ಇಲ್ಲಿ ಇದೆ ಒಮ್ಮೆ ನೋಡಿ

ಪತ್ರದಲ್ಲಿ ಮಾನ್ಯರೇ ​

ಮಾನ್ಯರೇ​​ : ರಾಜಿನಾಮೆ​​ ಪತ್ರ

ಬೈ ಬೈ ಸರ್​​

ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು ವಾಟ್ಸಾಪ್​​ ಸಂದೇಶದ ಮೂಲಕ ರಾಜಿನಾಮೆ ನೀಡಿದ್ದನ್ನು ಟ್ವೀಟ್​ ಮಾಡಿದ್ದಾರೆ.

Published On - 9:14 pm, Tue, 14 June 22