ಕೆಲವೊಂದಿಷ್ಟು ಕ್ರಿಯೇಟಿವ್ ಐಡಿಯಾ ಎಂದೆನಿಸಿದರೂ ಕೂಡ ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅಂತದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಜೈಪುರದ ರೆಸ್ಟೋರೆಂಟ್ ಒಂದರ ಬಾತ್ ರೂಮ್ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಜನರನ್ನು ಗೊಂದಲಕ್ಕೀಡು ಮಾಡಿದೆ. ಇದೀಗಾ ವ್ಯಕ್ತಿಯೊಬ್ಬರೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ. ಬಾತ್ ರೂಮ್ನ ಬಾಗಿಲಿನ ಗೊಂದಲಕ್ಕೀಡು ಮಾಡುವ ಲಿಂಗ ಚಿಹ್ನೆಯ ಬಗ್ಗೆ ಹಂಚಿಕೊಂಡಿರುವ ಫೋಟೋ ಇಲ್ಲಿದೆ ನೋಡಿ.
Request to all restaurants – please start using English to indicate bathrooms.
Stop relying on our fashion sense. pic.twitter.com/Ms0bCQUf1A
— Ravi Handa (@ravihanda) March 3, 2023
ಇಲ್ಲಿ ಕ್ರಿಯೇಟಿವ್ ಆಗಿ ಭಾರತೀಯ ಶೈಲಿಯ ಸೀರೆ ಹಾಗೂ ಪಂಚೆಯನ್ನು ಬಿಂಬಿಸಲಾಗಿದೆ. ಆದರೆ ಇದು ಸಾಕಷ್ಟು ಗೊಂದಲಕ್ಕೀಡು ಮಾಡಿದೆ. ಓರೆಯಾದ ಕೆಂಪು ರೇಖೆಯನ್ನು ಹೊಂದಿರುವ ಚಿಹ್ನೆಯು ಸೀರೆಯುಟ್ಟ ಮಹಿಳೆಯನ್ನು ಸೂಚಿಸುತ್ತದೆ ಮತ್ತು ಸೊಂಟದ ಸಮತಲವಾಗಿರುವ ರೇಖೆಯು ಪಂಚೆಯಟ್ಟ ಪುರುಷನನ್ನು ಸೂಚಿಸುತ್ತದೆ. ಈ ಚಿತ್ರವನ್ನು ಪಾಡ್‌ಕಾಸ್ಟರ್ ರವಿ ಹಂಡಾ ಹಂಚಿಕೊಂಡಿದ್ದಾರೆ . ಜೊತೆಗೆ ದಯವಿಟ್ಟು ಬಾತ್ ರೂಮ್ಗಳಲ್ಲಿ ಪುರುಷರಿಗೆ , ಮಹಿಳೆಯರಿಗೆ ಎಂದು ಇಂಗ್ಲಿಷ್ ಬಳಸಲು ಪ್ರಾರಂಭಿಸಿ. ಬದಲಾಗಿ ನಿಮ್ಮ ಕ್ರಿಯೇಟಿವ್ ಜನರನ್ನು ಗೊಂದಲಕ್ಕೀಡು ಮಾಡುತ್ತದೆ ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ.
ಇದನ್ನೂ ಓದಿ: ಏಕಾಏಕಿ ಅಂಗಡಿಯೊಳಗೆ ನುಗ್ಗಿದ ಟ್ರಾಕ್ಟರ್, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ
ಇವರ ಈ ಪೋಸ್ಟ್ಗೆ ಅನೇಕ ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವರ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಪಬ್‌ನಲ್ಲಿ ಮಂಗಳ ಮತ್ತು ಶುಕ್ರ ಚಿಹ್ನೆಯನ್ನು ಒಮ್ಮೆ ನೋಡಿದ್ದು ತುಂಬಾ ಗೊಂದಲಮಯವಾಗಿತ್ತು ಎಂದು ಒಬ್ಬರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: