‘ತುಳಸಿ! ನನ್ನ ಕಾರಿನಲ್ಲಿ ಈ ಬಾಟಲಿ ನೋಡಿ ನಾಚಿ ನೀರಾದೆ’; ಸ್ಮೃತಿ ಇರಾನಿ

| Updated By: ಶ್ರೀದೇವಿ ಕಳಸದ

Updated on: Oct 22, 2022 | 11:18 AM

Smriti Irani : ಆ ‘ತುಳಸಿ’ಯು ಈ ‘ತುಳಸಿ’ ನೀರನ್ನು ಕುಡಿದಾಗ! ಸ್ಮೃತಿ ಇರಾನಿ ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಹಾಕಿದ್ದಾರೆ. ನಟ ರೋನಿತ್ ರಾಯ್​ Lol! How Cool! ಎಂದಿದ್ದಾರೆ.

‘ತುಳಸಿ! ನನ್ನ ಕಾರಿನಲ್ಲಿ ಈ ಬಾಟಲಿ ನೋಡಿ ನಾಚಿ ನೀರಾದೆ’; ಸ್ಮೃತಿ ಇರಾನಿ
Smriti Irani shares why blue paani left her red faced in hilarious Instagram post
Follow us on

Viral : ಸ್ಮೃತಿ ಇರಾನಿ ತಮ್ಮ ಇನ್​ಸ್ಟಾಗ್ರಾಂನ ಖಾತೆಯಲ್ಲಿ ಆಗಾಗ ಇಂಥ ಪೋಸ್ಟ್​ಗಳನ್ನು ಹಂಚಿಕೊಂಡು ನೆಟ್ಟಿಗರನ್ನು ನಗಿಸುತ್ತಿರುತ್ತಾರೆ. ಕೆಲವರು ಇವರ ಪೋಸ್ಟ್​ಗಳನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ನಕ್ಕು ಸುಮ್ಮನಾಗಿಬಿಡುತ್ತಾರೆ. ಈ ಸಲ ತುಳಸಿ ಬ್ರ್ಯಾಂಡ್​ನ ಮಿನರಲ್ ವಾಟರ್ ಹಿಡಿದುಕೊಂಡು ಪೋಸ್​ ನೀಡಿದ್ದಾರೆ. ‘ಕ್ಯೂಂಕೀ ಸಾಸ್​ ಭೀ ಕಭೀ ಬಹೂ ಥೀ’ಯ ತುಳಸಿಯ ಕೈಯಲ್ಲಿ ಈ ತುಳಸಿ ಬಂದಾಗ ನಗೆಯುಕ್ಕದೆ ಇದ್ದೀತೇ? ಈ ಧಾರಾವಾಹಿಯಲ್ಲಿ ನಟಿಸಿದ್ದ ಅವರ ಸಹನಟ ರೋನಿತ್ ರಾಯ್ ಕೂಡ ಇವರ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್​ ಅನ್ನು 42,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ಧಾರಾವಾಹಿಯ ನಟನಟಿಯರೆಲ್ಲರೂ ಅಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ತುಳಸಿಯ ಗಂಡನ ಪಾತ್ರಧಾರಿ ರೋನಿತ್, ‘Lol! How Cool’ ಎಂದಿದ್ದಾರೆ. ಅದಕ್ಕೆ ಸ್ಮೃತಿ, ಹಣೆ ಚಚ್ಚಿಕೊಳ್ಳುವ ಎಮೊಟಿಕಾನ್​ ಹಾಕಿದ್ದಾರೆ. ‘ನೀವು ಬಹಳ ಕೂಲ್​ ಆಗಿರುವಿರಿ’ ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಗ್ರೇಟ್​!’ ಎಂದು ಮತ್ತೂ ಒಬ್ಬರು ಹೇಳಿದ್ದಾರೆ.

ಅಂತೂ ತುಳಸಿಯು ತುಳಸಿನೀರನ್ನು ಕುಡಿದಳು!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:17 am, Sat, 22 October 22