ವೈರಲ್ ವಿಡಿಯೋ: ವಿಶಿಷ್ಟವಾದ ಬಸವನ ಹುಳುವಿನ ವೇಗ ಗಂಟೆಗೆ 0.048 ಕಿ.ಮೀ! ಅದಕ್ಕಿಂತ ಕಡಿಮೆ ವೇಗದಲ್ಲಿ ಯಾರಾದರೂ ನಡೆಯಲು ಸಾಧ್ಯವೇ ಎಂಬುದು ಆಶ್ಚರ್ಯ, ಅನುಮಾನ ತರುವಂತಹ ಸಂಗತಿ!? ಇವು ಪ್ರಾಥಮಿಕವಾಗಿ ಸಮುದ್ರ ಜೀವಿಗಳಾಗಿದ್ದರೂ ಭೂಮಿಯಲ್ಲಿ ಮತ್ತು ತಾಜಾ ನೀರಿನಲ್ಲಿ ಕಂಡುಬರುವ ಬಸವನ ಹುಳುಗಳು ಇವು. ಬಸವನ ಹುಳುವಿನ ಮೊನಚಾದ ಕಣ್ಣುಗಳು, ಅಗಲವಾದ, ಸ್ನಾಯುವಿನ ಪಾದಗಳು ಮತ್ತು ಸುತ್ತಿನ ಶೆಲ್ ಹೊಂದಿರುತ್ತದೆ. ನಾನಾ ರೀತಿಯ ಬಸವನಗಳಿವೆ. ಬಸವನವು ತೇವಾಂಶವುಳ್ಳ ಪರಿಸರಕ್ಕೆ ಸಹ ಆದ್ಯತೆ ನೀಡುತ್ತದೆ. ಇವು ಬಸವನ ಗುಣಲಕ್ಷಣಗಳಾಗಿವೆ. ಈಗ ವಿಷಯಕ್ಕೆ ಬರೋಣ ( snail in pen bottle).
ಇಲ್ಲಿನ ಅಸಲಿ ವಿಷಯ ಏನೆಂದರೆ.. ಸಣ್ಣ ಪೆನ್ ಟ್ಯೂಬ್ ನಲ್ಲಿ ಬಸವನ ಹುಳು ನುಗ್ಗಬಹುದೇ? ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಸವನ ಹುಳು ತೆಳು ಪೆಂನ್ ಟೂಬ್ ಗೆ ನುಗ್ಗುತ್ತಿರುವುದು ಗೋಚರವಾಗುತ್ತದೆ. ಕೆಲವರಿಗೆ ಇದನ್ನು ವೀಕ್ಷಿಸಲು ಇಬ್ಬಂದಿಯಾಗಿದ್ದರೂ, ಇತರರು ಇಂಟರ್ನೆಟ್‌ನಲ್ಲಿ ವೀಡಿಯೊವನ್ನು ವೀಕ್ಷಿಸುತ್ತಿದ್ದಾರೆ. ಬಸವನ ಹುಳು ಪೆನ್ ಟ್ಯೂಬ್‌ನಲ್ಲಿ ಎಷ್ಟು ಸುಲಭವಾಗಿ ತೆವಳುತ್ತದೆ ಎಂಬುದು ಇಲ್ಲಿನ ವೈರಲ್ ವೀಡಿಯೊದಲ್ಲಿ ಸ್ಪಷ್ಟವಾಗಿ ನೊಡಬಹುದು. ಈ ವಿಡಿಯೋವನ್ನು ಸೈನ್ಸ್ ಗರ್ಲ್ (Science girl) ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ.
1.24 ಸೆಕೆಂಡುಗಳ ವೀಡಿಯೊದಲ್ಲಿ ಬಸವನ ಹುಳು ಪೆನ್ ಟ್ಯೂಬ್‌ನಲ್ಲಿ ತೆವಳಲು ಹೆಣಗಾಡುತ್ತಿರುವುದನ್ನು ತೋರಿಸಲಾಗಿದೆ. 3175 ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಹಲವರು ಅದನ್ನು ರೀಟ್ವೀಟ್ ಕೂಡ ಮಾಡಿದ್ದಾರೆ. ಈ ವೀಡಿಯೊ 93.2K ವೀಕ್ಷಣೆಗಳನ್ನು ಕಂಡುಕೊಂಡಿದೆ. ಈ ಬಗ್ಗೆ ಅನೇಕ ನೆಟಿಜನ್‌ಗಳು ತಮ್ಮ ವಿಭಿನ್ನ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
Slugs don’t have an exoskeleton, a shell or any bones at all which means they get through tight crevices much smaller than the diameter of their bodies
watch how this one journeys through a pen tube
?Steve Downerpic.twitter.com/sgFyf3XpuN
— Science girl (@gunsnrosesgirl3) August 5, 2022
To read more in Telugu click here