ನೇಪಾಳದ ಈ ಮದುವೆ ಸಂಪ್ರದಾಯದಲ್ಲಿ ವಧು-ವರರು ಸತಿಪತಿಗಳಾಗುವ ಮೊದಲು ಮಂಟಪದಲ್ಲಿ ಹೊಡೆದಾಡುವ ವಿಡಿಯೋ ವೈರಲ್
ವಧು ಮತ್ತು ವರ ಸಾಂಪ್ರದಾಯಿಕ ವಿವಾಹ ಉಡುಗೊರೆಯಲ್ಲಿ ಮದುವೆ ಮಂಟಪದಲ್ಲಿ ಕುಳಿತಿರುವುದನ್ನು ತೋರಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಸ್ವಲ್ಪ ಸಮಯದ ನಂತರ ವರ ಮತ್ತು ವಧು ಪರಸ್ಪರ ಒಂದು ಭಕ್ಷ್ಯವನ್ನು ತಿನ್ನಿಸುತ್ತಾರೆ. ಅದಾದ ಮೇಲೆ ಫೈಟ್ ಶುರುವಾಗುತ್ತದೆ

ಮದುವೆ ಸಂಪ್ರದಾಯಗಳು (wedding rituals) ನೂರೆಂಟು ಮಾರಾಯ್ರೇ, ಒಂದೊಂದು ಭಾಗದಲ್ಲಿ ಒಂದೊಂದು ರೀತಿ, ಎಲ್ಲವೂ ಕುತೂಹಲಕಾರಿ ಮತ್ತು ಮನರಂಜನಾತ್ಮಕ. ನೆರೆರಾಷ್ಟ್ರ ನೇಪಾಳದಲ್ಲಿ (Nepal) ನಡೆದ ಮದುವೆಯ ವಿಚಿತ್ರ ಸಂಪ್ರದಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋನಲ್ಲಿ ವಧು ಮತ್ತು ವರ (bridegroom) ತೀವ್ರಸ್ವರೂಪದ ಹೊಡೆದಾಟಕ್ಕಿಳಿಯುತ್ತಾರೆ. ಆದರೆ ಅದು ನಿಜವಾದ ಹೊಡೆದಾಟವಲ್ಲ ಅವರ ಮದುವೆ ಸಂಪ್ರದಾಯದ ಒಂದು ಭಾಗ ಎಂದು ನಮಗೆ ನಂತರ ಗೊತ್ತಾಗುತ್ತದೆ.
ವಧು ಮತ್ತು ವರ ಸಾಂಪ್ರದಾಯಿಕ ವಿವಾಹ ಉಡುಗೊರೆಯಲ್ಲಿ ಮದುವೆ ಮಂಟಪದಲ್ಲಿ ಕುಳಿತಿರುವುದನ್ನು ತೋರಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಸ್ವಲ್ಪ ಸಮಯದ ನಂತರ ವರ ಮತ್ತು ವಧು ಪರಸ್ಪರ ಒಂದು ಭಕ್ಷ್ಯವನ್ನು ತಿನ್ನಿಸುತ್ತಾರೆ. ಅದಾದ ಮೇಲೆ ಫೈಟ್ ಶುರುವಾಗುತ್ತದೆ ಮತ್ತು ಒಬ್ಬರನ್ನೊಬ್ಬರು ನೂಕಾಡುತ್ತಾರೆ, ತಳ್ಳಾಡುತ್ತಾರೆ.
View this post on Instagram
ಕ್ಲಿಪ್ ಕೊನೆಭಾಗದಲ್ಲಿ ಮದುಮಗ ಮಗುಳ್ನಗುವುದು ಮತ್ತು ಮದುಮಗಳು ಬಲವಂತದಿಂದ ಅವನಿಗೆ ತಿನ್ನಿಸುವುದು ಕಾಣಿಸುತ್ತದೆ. ಅವರ ಸುತ್ತಮುತ್ತಲ ಜನ ಅವರ ನಡುವಿನ ಹೊಡೆದಾಟ ನಿಲ್ಲಿಸುವುದನ್ನು ಸಹ ವಿಡಿಯೋನಲ್ಲಿ ಕಾಣಬಹುದು. ಸೋಶಿಯಲ್ ಮಿಡಿಯಾನಲ್ಲಿ ಈ ವಿಡಿಯೋಗೆ ಈಗಾಗಲೇ 70,000 ಕ್ಕಿಂತ ಹೆಚ್ಚು ಲೈಕ್ ಲಭ್ಯವಾಗಿವೆ ಮತ್ತು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಒಬ್ಬ ನೆಟ್ಟಿಗ, ‘ ಏನಾಗುತ್ತದೆ ಇಲ್ಲಿ?’ ಅಂತ ಕೇಳಿದರೆ ಮತ್ತೊಬ್ಬ ಅದಕ್ಕೆ ವಿವರಣೆ ನೀಡಿದ್ದಾರೆ. ‘ಇದೊಂದು ಸಂಪ್ರದಾಯ. ಇದನ್ನು ವರ ಮತ್ತು ವಧುವಿನ ನಡೆಯುವ ಸ್ಪರ್ಧೆ ಅಂತಲೂ ಹೇಳಬಹುದು. ಸ್ಪರ್ಧೆಯಲ್ಲಿ ವಧು ಮತ್ತು ವರ ಪರಸ್ಪರ ಯಾರು ಮೊದಲಿಗೆ ಮತ್ತು ಕ್ಷಿಪ್ರವಾಗಿ ತಿನ್ನಿಸುತ್ತಾರೆ ಅನ್ನೋದನ್ನು ಪರಿಗಣಿಸಲಾಗುತ್ತದೆ. ಆದರೆ ಇವರಿಬ್ಬರು ಮಾತ್ರ ಅದನ್ನು ಅತಿಯಾಗಿ ಮಾಡಿದರು.’
ಮತ್ತೊಬ್ಬರು, ‘ಅವರು ಎಲ್ಲರೆದುರೇ ಒಬ್ಬರ ಮೋಲೊಬ್ಬರು ಬಿದ್ದು ಹೊರಳಾಡುವುದಕ್ಕಿಂತ ಹೋಟೆಲ್ ಗೆ ಹೋಗುವವರೆಗೆ ಕಾಯಬೇಕಿತ್ತು ಅಂತ ಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ನಾಲ್ಕನೇಯವರು ‘ಜೀವನದ ಅಂತ್ಯದವರೆಗೆ ಜೊತೆಯಾಗಿ ಬದುಕಲು ಮಾಡಿಕೊಳ್ಳುವ ಮೊದಲ ಕಮಿಟ್ಮೆಂಟ್ ಇದು,’ ಎಂದು ಹೇಳಿದ್ದಾರೆ.
Published On - 12:05 pm, Wed, 10 August 22