Watch Video: ಅರ್ಜೆಂಟು ಅಂತಾ ಟಾಯ್ಲೆಟ್​ಗೆ ಹೋದ ಯುವತಿ! ಅಬ್ಬೋ ಅಲ್ಲಿ ಕಂಡುಬಂದ ದೃಶ್ಯ ಎಂಥದು? ಒಮ್ಮೆ ವಿಡಿಯೋ ನೋಡಿ

ಇತ್ತೀಚೆಗಂತೂ ಹಾವುಗಳು ಮನೆಯೊಳಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಸ್ವಲ್ಪವೇ ಯಾಮಾರಿದರೂ ಯಾವುದೇ ಕ್ಷಣದಲ್ಲಿ ಹಾವು ಕಚ್ಚುವ ಭಾಗ್ಯ ಗ್ಯಾರಂಟಿ!

Watch Video: ಅರ್ಜೆಂಟು ಅಂತಾ ಟಾಯ್ಲೆಟ್​ಗೆ ಹೋದ ಯುವತಿ! ಅಬ್ಬೋ ಅಲ್ಲಿ ಕಂಡುಬಂದ ದೃಶ್ಯ ಎಂಥದು? ಒಮ್ಮೆ ವಿಡಿಯೋ ನೋಡಿ
ಟಾಯ್ಲೆಟ್ ನಲ್ಲಿ ಕಂಡುಬಂದ ದೃಶ್ಯ ಎಂಥದು?
Follow us
ಸಾಧು ಶ್ರೀನಾಥ್​
|

Updated on: May 27, 2023 | 4:07 PM

ಇತ್ತೀಚೆಗಂತೂ ಹಾವುಗಳು ಮನೆಯೊಳಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಅವನ್ನು ಹಿಡಿಸಿ, ಹೊರಹಾಕಲು ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಸ್ವಲ್ಪವೇ ಯಾಮಾರಿದರೂ ಯಾವುದೇ ಕ್ಷಣದಲ್ಲಿ ಹಾವು ಕಚ್ಚುವ ಭಾಗ್ಯ ಗ್ಯಾರಂಟಿ! ಕೆಲವರು ಹಾವನ್ನು ಕಂಡರೆ ಭಯದಿಂದ ನಿಂತಲ್ಲೇ ನಡುಗುತ್ತಾರೆ. ಅದಕ್ಕಾಗಿಯೇ ಅನೇಕರು ವಿಶೇಷವಾಗಿ ಹಾವು ಹಿಡಿಯುವ ತಜ್ಞರನ್ನು ತಕ್ಷಣವೇ ಕರೆದು ಬಿಡುತ್ತಾರೆ. ಸದ್ಯ ಹಾವುಗಳ ವಿಡಿಯೋಗಳು (Snake Video) ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ವ್ಯಾಪಕವಾಗಿ ಕಾಣಿಸುತ್ತವೆ.

ಇತ್ತೀಚೆಗೆ ಮನೆಯೊಂದರಲ್ಲಿ ಬಾತ್ ರೂಂ ಕಮೋಡ್ (Bathroom Commode Seat) ನೊಳಕ್ಕೆ ಹಾವು ಬಂದಿರುವ ವಿಡಿಯೋ ವೈರಲ್ ಆಗಿದೆ. ಬಾತ್​​ ರೂಮ್​​ಗೆ ಹೋದ ಮೊದಲ ವ್ಯಕ್ತಿ ಹಾವನ್ನು ಕಂಡು ಭಯದಿಂದ ನಡುಗಿ ಹೋಗಿದ್ದಾರೆ. ಕೂಡಲೇ ಹೊರ ಬಂದು ಮನೆ ಮಂದಿಗೆಲ್ಲಾ ಕೇಳಿಸುವಂತೆ ಕಿರುಚಿಕೊಂಡು, ಭುಸುಗುಡುತ್ತಾ ಹಾವೂ ಹಾವೂ ಎಂದು ವಿಷಯ ತಿಳಿಸಿದ್ದಾರೆ. ಮನೆಯ ಸದಸ್ಯರು ಸ್ಥಳಿಯವಾಗಿ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಅವರು ತಕ್ಷಣ ದೌಡಾಯಿಸಿ, ಚಾಕಚಕ್ಯತೆಯಿಂದ ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ.

View this post on Instagram

A post shared by Naveen snake (@snake_naveen)

ಅದನ್ನೆಲ್ಲಾ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಹಾವು ಬಾತ್ ರೂಂ ಕಮೋಡ್ ನೊಳಗೆ ತಲೆ ಮರೆಸಿಕೊಂಡಿರುವುದು ಕಂಡುಬರುತ್ತದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ