Viral Video: ನಾಯಿಯನ್ನು ರಕ್ಷಿಸಲು ಹಿಮಸರೋವರಕ್ಕೆ ಧುಮುಕಿದ ವ್ಯಕ್ತಿ

Dog Rescue : ಬಾತುಕೋಳಿಗಳನ್ನು ಅಟ್ಟಿಸಿಕೊಂಡು ಹೋದ ಈ ನಾಯಿ ಹಿಮಸರೋವರದಲ್ಲಿ ಸಿಲುಕಿಕೊಂಡುಬಿಟ್ಟಿದೆ. ಸಾವುಬದುಕಿನ ಮಧ್ಯೆ ಒದ್ದಾಡತೊಡಗಿದೆ. ಮುಂದೇನಾಯಿತೆಂದು ವಿಡಿಯೋ ನೋಡಿ.

Viral Video: ನಾಯಿಯನ್ನು ರಕ್ಷಿಸಲು ಹಿಮಸರೋವರಕ್ಕೆ ಧುಮುಕಿದ ವ್ಯಕ್ತಿ
ಹಿಮಸರೋವರದಲ್ಲಿ ಸಿಕ್ಕಿಹಾಕಿಕೊಂಡಿರುವ ನಾಯಿಯನ್ನು ರಕ್ಷಿಸುತ್ತಿರುವ ವ್ಯಕ್ತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 27, 2023 | 4:22 PM

Viral Video: ನಿನ್ನೆ ನಾನು ಸ್ನೇಹಿತನೊಂದಿಗೆ ಸರೋವರದ ಬಳಿ ವಾಕಿಂಗ್ ಹೋಗಿದ್ದೆವು. ಇದ್ದಕ್ಕಿದ್ದಂತೆ ನಮ್ಮೆದುರೇ ಹೋದ ನಾಯಿಯೊಂದು ಬಾತುಕೋಳಿಗಳನ್ನು ವೇಗದಲ್ಲಿ ಅಟ್ಟಿಸಿಕೊಂಡು ಹಿಮಗಟ್ಟಿದ ಸರೋವರಕ್ಕೆ (Icy Lake) ನುಗ್ಗಿಯೇ ಬಿಟ್ಟಿತು. ಗಾಬರಿಯಿಂದ ನೋಡನೋಡುತ್ತಿದ್ದಂತೆ ಮಂಜುಗಡ್ಡೆಯೊಳಗೇ ರಭಸದಿಂದ ಓಡಿ ಸಿಕ್ಕಿಹಾಕಿಕೊಂಡಿತು. ಸಿಕ್ಕಿಹಾಕಿಕೊಂಡ ಮಂಜುಗಡ್ಡೆಯಿಂದ ಹೊರಬರಲು ಹೆಣಗಾಡತೊಡಗಿತು. ಅಸಹಾಯಕತೆಯಿಂದ ನಾವು ಗಾಬರಿಗೆ ಒಳಗಾದೆವು. ಹೇಗಾದರೂ ಮಂಜುಗಡ್ಡೆ ಸೀಳಿ ನಾಯಿ (Dog) ಹೊರಕ್ಕೆ ಬಂದರೆ ಸಾಕೆಂದು ಪ್ರಾರ್ಥಿಸಿದೆವು. ಆನಂತರ…

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Jason Skidgel (@jasski786)

ಅದು ಸಾವುಬದುಕಿನ ಮಧ್ಯೆ ಹೋರಾಡುವುದನ್ನು ನೋಡಿ 911 ಗೆ ಕರೆ ಮಾಡಿದೆವು. ಅಗ್ನಿಶಾಮಕದಳವು ಸ್ಥಳಕ್ಕೆ ಧಾವಿಸಿತು. ಯಂತ್ರದ ಸಹಾಯದಿಂದ ನಾಯಿಯನ್ನು ರಕ್ಷಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ನೋಡನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ತನ್ನ ಬಟ್ಟೆಗಳನ್ನು ಕಳಚಿ ಹಿಮಗಟ್ಟಿದ ಸರೋವರಕ್ಕೆ ಧುಮುಕಿಯೇ ಬಿಟ್ಟ. ನಂತರ ನಾಯಿಯೊಂದಿಗೆ ವಾಪಾಸು ದಡಕ್ಕೆ ಬಂದ.

ಇದನ್ನೂ ಓದಿ : Viral Video: ಸೆರಗನ್ನು ಮೇಲೇರಿಸಿಕೊಳ್ಳಿ’ ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಜೇಸನ್​ ಸ್ಕಿಡ್ಜೆಲ್​ ಎಂಬ ವ್ಯಕ್ತಿ ತಾನು ಈ ಘಟನೆಗೆ ಸಾಕ್ಷಿಯಾದುದರ ಕುರಿತು ಬರೆದು ವಿಡಿಯೋ ಅನ್ನು ಇನ್​ಸ್ಟಾಗ್ರಾಮಿನಲ್ಲಿ ಅಪ್​ಲೋಡ್ ಮಾಡಿದ್ದಾನೆ. ಈ ವಿಡಿಯೋ ಅನ್ನು ಈತನಕ ಎಂಟು ಲಕ್ಷ ಜನರು ವೀಕ್ಷಿಸಿದ್ದಾರೆ. 37,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಈ ಸಾಹಸಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಕ್ಯಾನ್ಸರ್​ನಿಂದ ಬಳಲುತ್ತಿರುವ ಸ್ನೇಹಿತೆಗೆ ತಲೆ ಬೋಳಿಸಿಕೊಂಡು ಸಾಥ್ ನೀಡಿದ ಸ್ನೇಹಿತರು

ನಾಯಿಯನ್ನು ರಕ್ಷಿಸಿದ ವ್ಯಕ್ತಿ ನಿಜಕ್ಕೂ ಮಾನವೀಯತೆ ಗುಣವುಳ್ಳವರು, ತಮ್ಮ ಜೀವದ ಹಂಗನ್ನು ತೊರೆದು ನಾಯಿಯನ್ನು ರಕ್ಷಿಸಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ. ಈ ವಿಷಯವನ್ನು ವಿಡಿಯೋ ಸಮೇತ ತಲುಪಿಸಿದ ನಿಮಗೆ ಕೆಲವರು ಜೇಸನ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನಾಯಿ ಆತನನ್ನು ಸೇರುವ ತನಕ ನಾನು ಉದ್ವೇಗಗೊಂಡಿದ್ದೆ, ಅಂತೂ ಅದು ಬದುಕಿತಲ್ಲ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:20 pm, Sat, 27 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ