Viral Video: ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಬರಿಗೈಯಲ್ಲಿ ಹಿಡಿದ ವ್ಯಕ್ತಿ!

ವ್ಯಕ್ತಿಯೊಬ್ಬ ತನ್ನಕಿಂತ ದೊಡ್ಡದಾದ ನಾಗರ ಹಾವನ್ನು ಬರಿಗೈಯಲ್ಲಿ ಹಿಡಿಯುವ ವೀಡಿಯೋ ಒಂದು ವೈರೆಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ಧೈರ್ಯವನ್ನು ಪ್ರಶಂಸಿದ್ದಾರೆ. ಇಲ್ಲಿದೆ ಆ ವಿಡಿಯೋ.

Viral Video: ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಬರಿಗೈಯಲ್ಲಿ ಹಿಡಿದ ವ್ಯಕ್ತಿ!
ವೈರಲ್​​ ವೀಡಿಯೊ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:May 27, 2023 | 6:11 PM

‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತನ್ನು ನೀವು ಕೇಳಿರಬಹುದು. ಧೈರ್ಯವಿದ್ದಲ್ಲಿ ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಹುದು. ಇದಕ್ಕೆ ಪೂರಕವೆಂಬ ಹಾಗೇ ವ್ಯಕ್ತಿಯೊಬ್ಬ ಬರಿಗೈಯಲ್ಲಿ ಕಾಳಿಂಗ ಸರ್ಪವನ್ನು ನಿರ್ಭೀತಿಯಿಂದ ಹಿಡಿಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ಆ ವ್ಯಕ್ತಿಯ ಸರೀಸೃಪವನ್ನು ಪಳಗಿಸಿ, ಅಂತಿಮವಾಗಿ ಅದರ ತಲೆಯ ಭಾಗದಿಂದ ಹೇಗೆ ಹಿಡಿಯುತ್ತಾನೆ ಎಂಬುದನ್ನು ವೀಡಿಯೊ ತೋರಿಸುತ್ತದೆ. ರೆಡ್ಡಿಟ್​​ನಲ್ಲಿ ಈ ವಿಡಿಯೋವನ್ನು ಮರು-ಹಂಚಿಕೊಳ್ಳಲಾಗುತ್ತಿದ್ದು ಇದೀಗ ಮತ್ತೆ ಜನರ ಗಮನ ಸೆಳೆದಿದೆ.

ಕೆಲವರಿಗೆ ಹಾವುಗಳೆಂದರೆ ಭಯವೇ ಇಲ್ಲ. ವಿಷಕಾರಿ ಹಾವುಗಳಾಗಿದ್ದರೂ ಅದನ್ನು ಬರಿಗೈಯಲ್ಲಿ ಹಿಡಿದು ರಕ್ಷಣೆ ಮಾಡುವ ಸಾಕಷ್ಟು ಉರಗಪ್ರೇಮಿಗಳಿದ್ದಾರೆ. ಇಂತಹ ಉರಗಪ್ರೇಮಿಗಳನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುವುದು ಸಹಜವೇ. ಅದೇ ರೀತಿ ಈ ವ್ಯಕ್ತಿಯೂ ಕೂಡ ತನ್ನ ಸೊಂಟದ ಎತ್ತರಕ್ಕೆ ನಿಂತಿದ್ದ ಹಾವನ್ನು ದಿಟ್ಟಿಸುತ್ತಾ, ಅದನ್ನು ಪಳಗಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಅದರ ತಲೆ ಭಾಗದಲ್ಲಿ ಕೈ ಇಟ್ಟು ಅದನ್ನು ನೆಲಕ್ಕೆ ತಳ್ಳಿ ಹಾವನ್ನು ಹಿಡಿಯುವ ಪರಿಯೇ ಅದ್ಭುತವಾಗಿದೆ. ವಿಡಿಯೋ ನೋಡುವಾಗ ಮೈ ಜುಮ್ ಎನ್ನುವುದರ ಜೊತೆಗೆ ಭಯವೂ ಆಗುವುದು ಸಹಜವೇ. ಆದರೆ ಅದೆಲ್ಲವನ್ನೂ ಮೀರಿ ಧೈರ್ಯ ಮಾಡಿ ಹಾವು ಹಿಡಿಯುವುದು ಏನೂ ಸಾಮಾನ್ಯ ವಿಷಯವಲ್ಲ. ಹಾಗಾಗಿ ಈ ವ್ಯಕ್ತಿಯನ್ನು ಅಭಿನಂದಿಸಲೇ ಬೇಕು. ಎಲ್ಲೋ ಕುಳಿತಿರುವ ನಮಗೆ ಆ ವಿಡಿಯೋ ನೋಡುವಾಗ ಭಯವಾಗುತ್ತದೆ. ಹಾಗಾದರೆ ಆ ವ್ಯಕ್ತಿಯ ಗುಂಡಿಗೆ ಹೇಗಿರಬಹುದು! ಅಲ್ಲವೇ.

Thai Marine catching King Cobra by u/JQuest7575 in interestingasfuck

ಇದನ್ನೂ ಓದಿ:Viral Video: ಬೋಟ್ ಏರಿ ಬಂದ ಮೀನು ಮಾಡಿದ್ದೇನು ನೋಡಿ? ಇಲ್ಲಿದೆ ವೀಡಿಯೊ

ಈ ವಿಡಿಯೋವನ್ನು ಐದು ಗಂಟೆಗಳ ಹಿಂದೆ ಶೇರ್ ಮಾಡಲಾಗಿದ್ದು ಪೋಸ್ಟ್ ಮಾಡಿದಾಗಿನಿಂದ, ಈ ವೀಡಿಯೊ ಸುಮಾರು 9,300 ಲೈಕ್ ಪಡೆದುಕೊಂಡಿದೆ. ಇದರ ಜತೆಗೆ ಅನೇಕರು ಕಮೆಂಟ್​​ ಮಾಡಿದ್ದಾರೆ. ಹಲವಾರು ಜನ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಒಬ್ಬರು “ಹಾವು ತಪ್ಪಿಸಿಕೊಳ್ಳದಿರುವುದು ಉತ್ತಮ” ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬರು “ತುಂಬಾ ಆಸಕ್ತಿದಾಯಕವಾಗಿದೆ ಈ ವಿಡಿಯೋ” ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮತ್ತೊಬ್ಬರು “ತುಂಬಾ ಭಯಾನಕವಾಗಿದೆ,” ಎಂದು ಹೇಳಿದ್ದಾರೆ. ಇನ್ನೊಬ್ಬರು “ಹೆಚ್ಚಿನ ಜನರು ಹೆದರಿ ತಕ್ಷಣ ಆಸ್ಪತ್ರೆಗೆ ಹೋಗುತ್ತಾರೆ. ನೀವು ನಿಜವಾದ ಪ್ರೊ, ಬ್ರೋ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:06 pm, Sat, 27 May 23