ಹಾವುಗಳೆಂದರೆ ಬಹುತೇಕ ಎಲ್ಲರಿಗೂ ಭಯ. ಸಾಮಾನ್ಯವಾಗಿ ಹಾವುಗಳು ಮನೆ ಸುತ್ತಮುತ್ತ ಆಹಾರವನ್ನರಸುತ್ತಾ ಬರುತ್ತವೆ. ಹೀಗೆ ಬಂತಂತಹ ಹಾವುಗಳನ್ನು ಕಂಡು, ಅವುಗಳನ್ನು ಹಿಡಿದು ಕಾಡಿಗೆ ಬಿಡುವವರು ಒಂದು ಕಡೆಯಿದ್ದರೆ, ಇನ್ನೂ ಕೆಲವರು ಈ ಹಾವುಗಳನ್ನು ಕಂಡು ಭಯಪಟ್ಟು ಓಡಿ ಹೋಗುತ್ತಾರೆ. ಅದೇ ರೀತಿ ಇಲ್ಲೊಂದು ಮನೆಯ ಬಳಿ ಆಹಾರವನ್ನರಸುತ್ತಾ ಹಾವೊಂದು ಬಂದಿದ್ದು, ಅದನ್ನು ಕಂಡು ಮಹಿಳೆಯೊಬ್ಬರು ಭಯದಿಂದ ಚಪ್ಪಲಿಯನ್ನು ಹಾವಿನ ಮೇಲೆ ಎಸೆಯುತ್ತಾರೆ. ನನ್ ಮೇಲೆ ಚಪ್ಪಲಿ ಎಸೆಯೋಕೆ ನಿಮಗೆಷ್ಟು ಧೈರ್ಯ ಎನ್ನುತ್ತಾ, ಆ ಹಾವು ತನ್ನ ಮೇಲೆ ಎಸೆದಂತಹ ಚಪ್ಪಲಿಯನ್ನೇ ಕಚ್ಚಿಕೋಡು ಓಡಿ ಹೋಗಿದೆ. ಈ ಹಾಸ್ಯಮಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ವಿಡಿಯೋವನ್ನು @ghantaa ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಹಾವೊಂದು ತನ್ನ ಮೇಲೆ ಎಸೆದಂತಹ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುವಂತಹ ತಮಾಷೆಯ ದೃಶ್ಯವಾವಳಿಯನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ, ಮನೆಯ ಅಂಗಳಕ್ಕೆ ಹಾವೊಂದು ಸರಸರನೇ ತೆವಳಿಕೊಂಡು ಬರುತ್ತೆ, ಹೀಗೆ ಬಂದಂತಹ ಹಾವನ್ನು ಕಂಡು ಭಯಪಟ್ಟ ಮಹಿಳೆಯೊಬ್ಬರು, ಹಾವನ್ನು ಓಡಿಸಲು ಚಪ್ಪಲಿಯನ್ನು ಹಾವಿನ ಮೇಲೆ ಎಸೆದುಬಿಡುತ್ತಾರೆ. ನನ್ ಮೇಲೇನೇ ಚಪ್ಲಿ ಎಸೆತೀರಾ, ಇರೀ ನಿಮ್ಗೆ ಸರಿಯಾಗಿ ಬುದ್ಧಿ ಕಳಿಸ್ತೀನಿ ಎನ್ನುತ್ತಾ ಆ ಹಾವು ತನ್ನ ಮೇಲೆ ಎಸೆದ ಚಪ್ಪಲಿಯನ್ನೇ ಬಾಯಲ್ಲಿ ಕಚ್ಚಿಕೊಂಡು ಹೋಗುವ ತಮಾಷೆಯ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ: ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ಮಹಿಳೆ; ಇದಕ್ಕೆ ಪ್ರತಿಯಾಗಿ ಹಣ ಕೇಳಲಿಲ್ಲವೆಂದು ಮಹಿಳೆಗೆ ತ್ರಿವಳಿ ತಲಾಕ್ ನೀಡಿದ ಪತಿ
ನವೆಂಬರ್ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 278 ಸಾವರಿ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಇದೆಂತಹ ತಮಾಷೆ, ಪಾಪ ಆ ಹಾವಿನ ಕೋರೆ ಹಲ್ಲಿಗೆ ಚಪ್ಪಲಿ ಸಿಕ್ಕಿಹಾಕಿಕೊಂಡಿದೆ, ಅದ್ರಿಂದ ಹಾವು ತುಂಬಾ ಕಷ್ಟ ಪಡ್ತಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಮೊದಲ ಬಾರಿಗೆ ಕಾಲಿಲ್ಲದ ಜೀವಿ, ಚಪ್ಪಲಿ ಕದಿಯುವುದನ್ನು ನೋಡಿದ್ದುʼ ಎಂದು ತಮಾಷೆ ಮಾಡಿದ್ದಾರೆ. ಇನ್ನು ಅನೇಕರು ಇದ್ಯಾರು ಮುದ್ದಾದ ಚಪ್ಪಲಿ ಕಳ್ಳ ಎಂದು ತಮಾಷೆಯ ಕಮೆಂಟ್ಗಳನ್ನು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: