ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್​ಬುಕ್​ನಿಂದ ವಿಶೇಷ ಸ್ಟಿಕರ್ಸ್​ ಕೊಡುಗೆ

|

Updated on: Mar 28, 2021 | 1:44 PM

ಹೋಳಿ ಆಚರಣೆಗೆಂದು ಫೇಸ್​ಬುಕ್​ ವಿಶೇಷ ಸ್ಟಿಕರ್ಸ್​​ಗಳನ್ನು ತನ್ನ ಬಳಕೆದಾರರಿಗಾಗಿ ನೀಡಿದೆ. ಹಾಗಾದರೆ ಸ್ಟಿಕರ್ಸ್​​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್​ಬುಕ್​ನಿಂದ ವಿಶೇಷ ಸ್ಟಿಕರ್ಸ್​ ಕೊಡುಗೆ
ಸಾಂದರ್ಭಿಕ ಚಿತ್ರ (ಕೃಪೆ: ​ ಫೇಸ್​ಬುಕ್)
Follow us on

ಬೆಂಗಳೂರು: ಇಂದು ಮಾರ್ಚ್ 28 ಹೋಳಿ ಹಬ್ಬ. ಎಲ್ಲೆಡೆ ರಂಗುರಂಗಿನ ಬಣ್ಣದ ಮೆರುಗು. ಮನೆಯಂಗಳವೆಲ್ಲ ಕಲರ್​ಫುಲ್​ ಬಣ್ಣಗಳಿಂದ ಕಂಗೊಳಿಸುತ್ತಿರುತ್ತದೆ. ಮಕ್ಕಳೆಲ್ಲ ಮೋಜು ಮಸ್ತಿಯಿಂದ ವಿವಿಧ ಬಣ್ಣಗಳನ್ನು ಎರಚಿಕೊಳ್ಳುತ್ತಾ ಖುಷಿ ಪಡುವ ದಿನವಿದು. ಜೊತೆ ಜೊತೆಯೇ ಸೋಷಿಯಲ್​ ಮೀಡಿಯಾ ಕೂಡಾ ಬಣ್ಣದಿಂದ ಕಂಗೊಳಿಸುತ್ತಿದೆ. ಫೇಸ್​ಬುಕ್​ ತನ್ನ ಬಳಕೆದಾರರಿಗಾಗಿ ಹೋಳಿ ಆಚರಣೆಗೆಂದು ವಿಶೇಷ ಸ್ಟಿಕರ್ಸ್​​ಗಳನ್ನು ಬಿಡುಗಡೆ ಮಾಡಿದೆ. ಫೇಸ್​ಬುಕ್​ನಲ್ಲಿ ಹಬ್ಬದ ಮೆರುಗು ಹೆಚ್ಚಿಸಲು ಬಳಕೆದಾರರಿಗೆ ಅನೇಕ ಸ್ಟಿಕರ್ಸ್​​ಗಳು ಲಭ್ಯವಿದೆ.

ಹೋಳಿ ಕುರಿತಾಗಿ ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ 6.6 ಮಿಲಿಯನ್ ಪೋಸ್ಟ್​  ಹಾಗೂ  ಕಮೆಂಟ್​ಗಳನ್ನು ಮಾಡಲಾಗಿದೆ.  ಹೋಳಿ ವಿಶೇಷವಾಗಿ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಶುಭಾಶಯಗಳನ್ನು ವರ್ಣರಂಜಿತವಾಗಿ ಹಾಗೂ ಆಕರ್ಷಕವಾಗಿ ತಿಳಿಸಲು ಫೇಸ್​ಬುಕ್​ ವಿವಿಧ ತೆರನಾದ ಸ್ಟಿಕರ್ಸ್​​ಗಳನ್ನು ಬಳಕೆದಾರರಿಗಾಗಿ ಒದಗಿಸಿದೆ. ಫೇಸ್​ಬುಕ್​ನಲ್ಲಿ ವಿಶೇಷ ಸ್ಟಿಕರ್ಸ್​​ಗಳನ್ನು ಕಳುಹಿಸುವ ಮೂಲಕ  ಹೋಳಿ ಆಚರಣೆ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ರಂಗಾಗಿದೆ.

ಈಗಾಗಲೇ ಫೇಸ್​ಬುಕ್​ ಅಪ್ಲಿಕೇಶನ್​ನಲ್ಲಿ ಕಮೆಂಟ್​ ಬರೆಯುವ ಜಾಗದಲ್ಲಿ, ವಿವಿಧ ಸ್ಟಿಕರ್ಸ್​​ ಆಯ್ಕೆ ಮಾಡುವಾಗಲೇ  ಹೋಳಿ ಆಚರಣೆಯ ವಿಶೇಷ ಸ್ಟಿಕರ್ಸ್​​ಗಳು ಬಳಕೆದಾರರಿಗೆ ಸಿಗುತ್ತಿದೆ. ಸ್ಟಿಕರ್ಸ್​​ಗಳು ಸಿಗುತ್ತಿಲ್ಲ ಎಂದಾದರೆ ಮತ್ತೊಮ್ಮೆ ಫೇಸ್​ಬುಕ್​ನ ಆ್ಯಪ್​ನ ನೂತನ ಆವೃತ್ತಿಯನ್ನು ಡೌನ್​ಲೋಡ್ ಮಾಡಿಕೊಳ್ಳಿ.

ಫೇಸ್​ಬುಕ್ ಖಾತೆಯಲ್ಲಿ ವಿಶೇಷ ಹೋಳಿ ಆಚರಣೆಯ ಸ್ಟಿಕರ್ಸ್​​ಗಳು ಎಲ್ಲಿ ಸಿಗುತ್ತವೆ?
* ಮೊದಲಿಗೆ ಫೇಸ್​ಬುಕ್​ ಲಾಗಿನ್​ ಆಗಿ
* ಕಮೆಂಟ್​ ಮಾಡುವ ಟ್ಯಾಬ್​ ಒತ್ತಿರಿ
* ನಗುವಿನ ಇಮೋಜಿಯನ್ನು ಕಾಣಬಹುದು
* ನಗುವಿನ ಚಿತ್ರದ ವಿವಿಧ ಇಮೋಜಿಗಳನ್ನು ಡೌನ್​ಲೋಡ್​ ಮಾಡುವ ಆಯ್ಕೆಗಳು ಕಾಣಸಿಗುತ್ತದೆ
* ಅಲ್ಲಿ ವಿಶೇಷ ಸ್ಟಿಕರ್ಸ್​​ಗಳನ್ನು ಡೌನ್​ಲೋಡ್​ ಮಾಡಬಹುದು
* ಇದೀಗ ಹೋಳಿ ಆಚರಣೆಗೆ ವಿಶೇಷ ಸ್ಟಿಕರ್ಸ್​​ಗಳು ನಿಮ್ಮದಾಗಿವೆ
* ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಕಲರ್​ಫುಲ್​ ಸ್ಟಿಕರ್ಸ್​​ಗಳನ್ನು ಕಳುಹಿಸುವ ಮೂಲಕ ಹೋಳಿಯ ವಿಶೇಷ ಸಂಭ್ರಮಾಚರಣೆ ನಿಮ್ಮದಾಗಿರಲಿ

ಇದನ್ನೂ ಓದಿ: ರಂಗಿನಾಟ ಹೋಳಿ ಹುಣ್ಣಿಮೆಯ ಮಹತ್ವ ವೇನು? ಕಾಮದೇವನನ್ನು ದಹಿಸೋದೇಕೆ?

ಹೋಳಿ ಸಂಭ್ರಮಕ್ಕೆ ಕೊರೊನಾ ಅಡ್ಡಿ.. ಮನೆ ಮನೆಗಳಿಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶನ

Published On - 12:25 pm, Sun, 28 March 21