Bihar : ಸಾಮಾಜಿಕ ಜಾಲತಾಣಗಳಲ್ಲಿರುವ ಡಿಜಿಟಲ್ ಕ್ರಿಯೇಟರ್ಸ್ (Digital Creators) ಬಗ್ಗೆ ಪ್ರತೀ ದಿನ ಒಂದಿಲ್ಲಾ ಒಂದು ತಕರಾರು ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ದೆಹಲಿ ಮೆಟ್ರೋಗೆ ಸಂಬಂಧಿಸಿದ ಪ್ರಕರಣಗಳಿಗಂತೂ ಲೆಕ್ಕವೇ ಇಲ್ಲ. ರೈಲ್ವೆ ಒಳಗೆ ಮತ್ತು ಪ್ಲ್ಯಾಟ್ಫಾರ್ಮ್ ಮೇಲೆ ರೀಲ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಹೇಳಿಕೆ ಕೊಡುತ್ತಾರೆ ವಿನಾ ಫಲಿತಾಂಶ ಮಾತ್ರ ಶೂನ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬಿಹಾರದ ಮನ್ಪುರ್ (Manpur) ರೈಲು ನಿಲ್ದಾಣದಲ್ಲಿ ಸ್ಟಂಟ್ ಮಾಡಿದ ಯುವಕನ ವಿಡಿಯೋ ಅನ್ನು ರೈಲ್ವೇ ರಕ್ಷಣಾ ಪಡೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದೀಗ ಈ ಯುವಕ ಪೊಲೀಸರ ಬಂಧನದಲ್ಲಿದ್ದಾನೆ.
A young man who gained fame for his reckless stunts at Manpur Junction, was arrested by #RPF for creating nuisance and unauthorized entry.
ಇದನ್ನೂ ಓದಿWe hope this will serve as a lesson for others who put their lives at risk for likes and shares in social media. #SafetyFirst pic.twitter.com/qDCj9H9mFK
— RPF INDIA (@RPF_INDIA) July 10, 2023
ಸಾಮಾಜಿಕ ಮಾಧ್ಯಮಗಳಲ್ಲಿ ಖ್ಯಾತಿ ಹೊಂದಲು ಇಂಥ ಅಪಾಯಕರ ಪ್ರವೃತ್ತಿಗೆ ತೆರೆದುಕೊಳ್ಳುವವರಿಗೆ ಇದು ಒಂದು ಪಾಠ ಎಂದು ಭಾವಿಸುತ್ತೇವೆ ಎಂದಿದ್ದಾರೆ ರೈಲ್ವೇ ರಕ್ಷಣಾ ಪಡೆಯ ಪೊಲೀಸರು. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 1.8 ಲಕ್ಷ ಜನರು ನೋಡಿದ್ದಾರೆ. 1,500 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ, ಕೆಲ ಜನರು ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ಜು.10ರಂದು ಟ್ವೀಟ್ ಮಾಡಲಾಗಿದೆ. ಪೊಲೀಸರ ಈ ಕ್ರಮವನ್ನು ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳ ಮೂಲಕ ಬೆಂಬಲಿಸಿದ್ದಾರೆ.
ಇದನ್ನೂ ಓದಿ : Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್ ಪತ್ರ
ಪೊಲೀಸರು ಈ ಕ್ರಮ ಕೈಗೊಂಡಿದ್ದು ಒಳ್ಳೆಯದಾಯಿತು, ಇನ್ನಾದರೂ ಸಾಮಾಜಿಕ ಜಾಲತಾಣಗಳ ಪ್ರಭಾವಿ ವ್ಯಕ್ತಿಗಳು ಪಾಠ ಕಲಿಯಲಿ ಎಂದಿದ್ದಾರೆ ಕೆಲವರು. ಪ್ರತಿಭಾ ಪ್ರದರ್ಶನ ಇರಲಿ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಸಲ್ಲದು. ಇದರಿಂದ ತಮಗೂ ಉಳಿದವರಿಗೂ ತೊಂದರೆ ಅಥವಾ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ಕೆಲವರು ಹೇಳಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:04 pm, Wed, 12 July 23