Video: ಇದು ನಿನ್ನ ಮುದ್ದಿನ ಮಗನ ಸರ್ಪ್ರೈಸ್ ಗಿಫ್ಟ್; ತಾಯಿಯ ಹುಟ್ಟುಹಬ್ಬಕ್ಕೆ ಚಿನ್ನದ ಕಿವಿಯೋಲೆ ನೀಡಿದ ಮಗ

ಆತ್ಮೀಯರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುವುದು ಸಹಜ. ಆದರೆ ಇದೀಗ ಮಗನೊಬ್ಬ ತನ್ನ ತಾಯಿಯ ಹುಟ್ಟುಹಬ್ಬದ ದಿನ ಆಕೆಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಇದು ನಿನ್ನ ಮುದ್ದಿನ ಮಗನ ಸರ್ಪ್ರೈಸ್ ಗಿಫ್ಟ್; ತಾಯಿಯ ಹುಟ್ಟುಹಬ್ಬಕ್ಕೆ ಚಿನ್ನದ ಕಿವಿಯೋಲೆ ನೀಡಿದ ಮಗ
ವೈರಲ್‌ ವಿಡಿಯೋ
Image Credit source: Instagram

Updated on: Aug 25, 2026 | 4:53 PM

ಹುಟ್ಟುಹಬ್ಬ ಎಂದ್ರೆ ಎಲ್ಲರಿಗೂ ಕೂಡ ಸ್ಪೆಷಲ್. ಕೆಲವರು ತಮ್ಮ ಆತ್ಮೀಯರು ಕೊಡುವ ಉಡುಗೊರೆಗಾಗಿ ಕಾಯುತ್ತಿರುತ್ತಾರೆ. ಇನ್ನು ತಂದೆ ತಾಯಿಯ ಹುಟ್ಟುಹಬ್ಬಕ್ಕೆ ಮಕ್ಕಳು ದುಬಾರಿ ಉಡುಗೊರೆ ನೀಡಿದ್ರೆ ಆ ಖುಷಿಯನ್ನು ವಿವರಿಸಲು ಪದಗಳೇ ಇಲ್ಲ. ಇದೀಗ ಮಗನೊಬ್ಬ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಚಿನ್ನದ ಕಿವಿಯೋಲೆಯನ್ನು ಗಿಫ್ಟ್ ಆಗಿ ನೀಡಿದ್ದಾನೆ. ಮಗನ ಸರ್ಪ್ರೈಸ್ ಗಿಫ್ಟ್ (surprise gift) ನೋಡಿ ತಾಯಿ  ಫುಲ್‌ ಶಾಕ್‌ ಆಗಿದ್ದು, ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ಎಂ ಕಿರಣ್ ಹುಲಿಕೊಂಬು (M Kiran Hulikombu) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಕ್ಲಿಪಿಂಗ್‌ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತನ್ನ ತಾಯಿಯ ಹುಟ್ಟುಹಬ್ಬದ ದಿನ ಮನೆಮಂದಿಯನ್ನೆಲ್ಲಾ ಊಟಕ್ಕೆ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಅಮ್ಮನ ಮುಂದೆ ಇರುವ ಪ್ಲೇಟ್ ನಲ್ಲಿ ಕಿವಿಯೋಲೆಯ ಬಾಕ್ಸ್ ಇಟ್ಟು ಸರ್ಪ್ರೈಸ್ ನೀಡಿದ್ದಾನೆ. ಮೊದಲಿಗೆ ನಿನ್ನ ಫೇವರಿಟ್ ಫುಡ್ ಇದು ನೋಡು ಎನ್ನುತ್ತಿದ್ದಂತೆ ತಾಯಿ ತನ್ನ ಇಷ್ಟದ ಆಹಾರದ ಹೆಸರು ಹೇಳಿದ್ದಾಳೆ. ಕೊನೆಗೆ ಪ್ಲೇಟ್ ಮೇಲಿಟ್ಟ ಮುಚ್ಚಳವನ್ನು ಮೆಲ್ಲನೆ ತೆಗೆದಿದ್ದಾಳೆ. ಆ ಬಳಿಕ ಬಾಕ್ಸ್ ತೆರೆಯುತ್ತಿದ್ದಂತೆ ಚಿನ್ನದ ಕಿವಿಯೋಲೆ ಕಂಡು ಆಕೆ ಶಾಕ್ ಆಗಿರುವುದನ್ನು ಕಾಣಬಹುದು.

 ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಂದೆಯ ಬರ್ತ್ಡೇಗೆ ಬಾಲ್ಯದ ಸ್ನೇಹಿತರನ್ನೇ ಮನೆಗೆ ಆಹ್ವಾನಿಸಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ಮಗಳು

ಈ ವಿಡಿಯೋ ಇಪ್ಪತ್ತ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಿನ ಮಗ ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೆಲೆಕಟ್ಟಲಾಗದ ಕ್ಷಣ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅತ್ಯದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us