
ದಕ್ಷಿಣ ಆಫ್ರಿಕಾ, ಸೆಪ್ಟೆಂಬರ್ 02: ಸಾವು ಎಂದರೆ ಎಲ್ಲರಿಗೂ ಒಂದು ರೀತಿಯ ಭಯ. ತನ್ನ ಆತ್ಮೀಯ ವ್ಯಕ್ತಿಗಳನ್ನು ಕಳೆದುಕೊಂಡರೆ ಆ ನೋವಿನಿಂದ ಹೊರಬರಲು ವರ್ಷಗಳೇ ಬೇಕು. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ತಮ್ಮವರನ್ನು ಕಳೆದುಕೊಂಡಾಗ ಪ್ರಾಣಿಗಳು ರೋಧಿಸುವ ಹಾಗೂ ಸತ್ತ ಮರಿಯನ್ನು ಅಥವಾ ಸಂಗಾತಿಯನ್ನು ಎಬ್ಬಿಸಲು ಪ್ರಯತ್ನಿಸುವ ಪ್ರಾಣಿ ಪ್ರಪಂಚದ ಭಾವುಕ ಕ್ಷಣದ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಈ ವಿಡಿಯೋ ಇಂತಹದ್ದೇ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಆನೆಯೊಂದು (Elephant) ಮತ್ತೊಂದು ಆನೆಯ ತಲೆಬುರುಡೆ ಕಂಡೊಡನೆ ಆತಂಕಗೊಂಡಿದ್ದು, ದುಃಖವು ಮುಗಿಲು ಮುಟ್ಟಿದೆ. ಈ ವಿಡಿಯೋವು ದಕ್ಷಿಣ ಆಫ್ರಿಕಾದ ಗ್ರೇಟರ್ ಕ್ರುಗರ್‌ನ ರಾಷ್ಟ್ರೀಯ ಉದ್ಯಾನವನದ್ದು (Greater Kruger National Park of South Africa) ಎನ್ನಲಾಗಿದೆ. ಈ ಭಾವುಕ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
readysetsafari ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಆನೆಯೂ ಮತ್ತೊಂದು ತನ್ನ ಆನೆಯ ತಲೆ ಬುರುಡೆ ನೋಡುತ್ತಿದ್ದಂತೆ ಭಾವುಕಗೊಂಡಿರುವುದನ್ನು ನೀವಿಲ್ಲಿ ಕಾಣಬಹುದು. ಈ ವಿಡಿಯೋದ ಶೀರ್ಷಿಕೆಯಲ್ಲಿ ಮಿಸಾವಾ ಸಫಾರಿ ಕ್ಯಾಂಪ್‌ನಲ್ಲಿ ಈ ಅದ್ಭುತವಾದ ದೃಶ್ಯವೊಂದು ನಮಗೆ ಕಾಣಲು ಸಿಕ್ಕಿತು. ಹೆಣ್ಣು ಆನೆಯ ಪ್ರತಿಕ್ರಿಯೆಯು ಭಾವನಾತ್ಮಕ ಹಾಗೂ ಅನಿರೀಕ್ಷಿತವಾಗಿತ್ತು. ಈ ಕಾರಣಕ್ಕಾಗಿಯೇ ಈ ಆಫ್ರಿಕಾ ತುಂಬಾ ಅದ್ಭುತವಾಗಿದೆ ಎಂದೇಳಬಹುದು. ಮುಂದೆ ನೀವು ಏನು ನೋಡುತ್ತೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ಆದರೆ ಅದು ವಿಶೇಷವಾಗಿರುತ್ತದೆ ಎಂದು ನಿಮಗೆ ತಿಳಿದಿರುತ್ತದೆ. ಆನೆಗಳ ತಲೆಬುರುಡೆಗಳನ್ನು ನೋಡಿದರೆ ಭಾವನಾತ್ಮಕವಾಗಿ ಜೀವಂತ ಆನೆಗಳು ಪ್ರತಿಕ್ರಿಯಿಸುತ್ತವೆ ಎನ್ನುವ ಬಗ್ಗೆ ನಾವು ಕೇಳಿದ್ದೆವು. ಆದರೆ ಆ ದೃಶ್ಯವನ್ನು ಎಂದಿಗೂ ನಾವು ನೋಡಿರಲಿಲ್ಲ. ಮಿಸಾವಾ ಸಫಾರಿ ಶಿಬಿರದಲ್ಲಿ ವನ್ಯಜೀವಿ ಚಾಲನೆಯ ಸಮಯದಲ್ಲಿ ಈ ದೃಶ್ಯವನ್ನು ಕಣ್ಣಾರೆ ಕಂಡೆವು ಎಂದು ಬರೆಯಲಾಗಿದೆ.
ದಕ್ಷಿಣ ಆಫ್ರಿಕಾದ ಗ್ರೇಟರ್ ಕ್ರುಗರ್‌ನ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಯ ಭಾವುಕ ಕ್ಷಣವನ್ನು ಸಫಾರಿಗೆ ತೆರಳಿದವರು ಸೆರೆ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಹೆಣ್ಣು ಆನೆಯೊಂದು ತಲೆಬುರುಡೆ ಕಂಡೊಡನೆ ಪರೀಕ್ಷಿಸಿದೆ. ಈ ಅಸ್ಥಿ ಪಂಜರವು ಮತ್ತೊಂದು ಆನೆದ್ದು ಎಂದು ಗೊತ್ತಾಗಿದೆ. ಈ ಆನೆಯೂ ಸೊಂಡಿಲು ಹಾಗೂ ಬಾಲವನ್ನು ಜೊತೆಗೆ ಎತ್ತುತ್ತಾ ಜೋರಾಗಿ ಘೀಳಿಸಲು ಶುರು ಮಾಡಿದೆ. ನೆಲವನ್ನು ಕಾಲಿನಿಂದ ತುಳಿದು ಅಲ್ಲಿಂದ ದೂರ ಓಡಿದೆ. ಹೀಗೆ ಓಡಿದ ಆನೆಯೂ ಪೊದೆಯೊಳಗೆ ಹೋಗಿದ್ದು ಅಲ್ಲಿಂದ ಕಣ್ಮರೆಯಾಗಿದೆ.
ಇದನ್ನೂ ಓದಿ:Video: ಹುಟ್ಟಿದ ನಂತರ ಮೊದಲ ಬಾರಿಗೆ ನೀರಿನ ಸ್ಪರ್ಶ, ಆನೆ ಮರಿಯ ಸಂತಸ ನೋಡಿ
ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನರು ಸ್ಪಂದಿಸಿದ್ದು, ಬಳಕೆದಾರರರು ಆನೆಯೂ ಅಸ್ಥಿ ಪಂಜರ ನೋಡಿ ಪ್ರತಿಕ್ರಿಯಿಸಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಬಳಕೆದಾರರೊಬ್ಬರು, ಆನೆಗಳು ಇಷ್ಟು ಭಾವುಕ ಜೀವಿ ಎನ್ನುವುದನ್ನು ಈ ವಿಡಿಯೋದಲ್ಲೇ ನೋಡಿದ್ದು ಎಂದಿದ್ದಾರೆ. ಮತ್ತೊಬ್ಬರು, ಈ ದೃಶ್ಯವು ಕಣ್ಣಂಚಲಿ ನೀರು ತರಿಸಿತು. ಸಾವು ಎಲ್ಲರಿಗೂ ನೋವೇ, ಆ ನೋವನ್ನು ಅರಗಿಸಿಕೊಳ್ಳಲು ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಆನೆಯೂ ತುಂಬಾನೆ ಭಾವನಾತ್ಮಕ ಜೀವಿ. ನೈಜತೆ ಅರಗಿಸಿಕೊಳ್ಳಲು ಕಷ್ಟವಾಯಿತು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ