Mumbai: ಮುಂಬೈ ವಾಸ್ತವ್ಯವೆಂದ ಕೂಡಲೇ ನಿಮ್ಮ ಹಣದ ಥೈಲಿ ತುಸು ದೊಡ್ಡದಾಗಿಯೇ ಇರಬೇಕು, ಅಂದಾಗ ಮಾತ್ರ ಬಾಡಿಗೆಗೆ ಅಥವಾ ಖರೀದಿಗೆ ಮನೆಗಳು ಸಿಗಬಹುದು. ಆದರೆ ನಿಮಗೆ ಬೇಕಾದಂಥ ಮತ್ತು ನೀವಂದುಕೊಂಡಂಥ ಜಾಗದಲ್ಲಿ ಸಿಗಬೇಕು ಎಂದರೆ ಹಣದ ಥೈಲಿ ಇನ್ನೂ ದೊಡ್ಡದಾಗಿಯೇ ಇರಬೇಕು. ಹಾಗೆಂದು ಸಿಕ್ಕ ಮನೆಯ ಬಗ್ಗೆ ಸಮಾಧಾನವಿರುತ್ತದೆಯೇ ಗೊತ್ತಿಲ್ಲ. ಆದರೆ ಸಿಕ್ಕಮನೆಯೇ ಅರಮನೆ ಎಂಬಂತೆ ಸಮಾಧಾನಿಸಿಕೊಳ್ಳದಿದ್ದರೆ ಬದುಕು ಸಾಗದು! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಯುವಕ ಮುಂಬೈನ ಸಿಂಗಲ್ ಬೆಡ್ರೂಮ್ ಫ್ಲ್ಯಾಟ್ ಟೂರ್ (Single Bedroom Flat Tour) ವಿಡಿಯೋ ಹಂಚಿಕೊಂಡಿದ್ದಾನೆ. ಈ ವಿಡಿಯೋ ನೋಡಿದ ಕೆಲವರು ಕಳವಳಕ್ಕೆ ಈಡಾದರೆ ಇನ್ನೂ ಕೆಲವರು ಹಾಸ್ಯ ಮಾಡಿ ನಕ್ಕಿದ್ದಾರೆ.
ಇದನ್ನೂ ಓದಿ : Viral Video: ಬಿಲ್ಲಿ ಬೆಲ್ಲೀ ಡ್ಯಾನ್ಸ್; ಸಾಕುಪ್ರಾಣಿಗಳೆಂದರೆ ಮಕ್ಕಳಿದ್ದಂತೆ ಎಂದು ಬುದ್ಧಿ ಹೇಳುತ್ತಿರುವ ನೆಟ್ಟಿಗರು
ಮುಂಬೈನ ದಕ್ಷಿಣ ಭಾಗದಲ್ಲಿರುವ ರಿಯಲ್ ಎಸ್ಟೇಟ್ ಏಜೆಂಟರುಗಳು ಗ್ರಾಹಕರಿಗೆ ಹೇಗೆ ಮನೆಯನ್ನು ಪರಿಚಯಿಸುತ್ತಾರೆ ಎನ್ನುವುದರ ಮೋಜಿನ ಝಲಕ್ ಇಲ್ಲಿದೆ. ಸುಮಿತ್ ಪಾಲ್ವೆ ಎನ್ನುವ ಯುವಕ ತನ್ನ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮುಂಬೈನ ದಕ್ಷಿಣ ಭಾಗದಲ್ಲಿ ಇರುವುದರಿಂದ ಈ ಸಿಂಗಲ್ ಬೆಡ್ರೈಮ್ ಫ್ಲ್ಯಾಟ್ನ ಬೆಲೆ ರೂ. 2.5 ಕೋಟಿ. ಕಾಂಪ್ರೋಮೈಸ್ ಮಾಡಿಕೊಳ್ಳಲೇಬೇಕು ಎಂದು ವಿಡಿಯೋದುದ್ದಕ್ಕೂ ಹೇಳುತ್ತ ಹೋಗುತ್ತಾನೆ.
ಜುಲೈ 8ರಂದು ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 1 ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅವನು ಟೆರೇಸ್ಗೆ ಹೋಗುವತನಕವೂ ನನ್ನ ಉಸಿರುಗಟ್ಟಿತ್ತು ಎಂದಿದ್ದಾರೆ ಒಬ್ಬರು. ನಿಜಕ್ಕೂ ಇಂಥ ಮನೆಗಳಲ್ಲಿ ವಾಸಿಸುವ ಜೀವನ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ ಇನ್ನೊಬ್ಬರು. ಅಡುಗೆಮನೆಯ ಪಕ್ಕದಲ್ಲಿಯೇ ವಾಷ್ರೂಮ್! ಇದು ಅತ್ಯಂತ ಕೆಟ್ಟದ್ದುಎಂದಿದ್ದಾರೆ ಮತ್ತೊಬ್ಬರು. ಈ ಮನೆ ನೋಡಿದ ಮೇಲೆ ನಾನು ಉತ್ತಮ ಸೌಲಭ್ಯಗಳನ್ನು ಹೊಂದಿದ್ದೇನೆ ಎನ್ನುವುದು ಅರಿವಾಯಿತು ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಬೆಯಾನ್ಸ್ ಸಂಗೀತ ಕಛೇರಿಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆನೋವು; ಹೆಣ್ಣುಮಗು ಜನನ
ಈ ಮನೆ ನೋಡಿದಮೇಲೆ ದೆಹಲಿಯ ಮನೆಗಳು ಸ್ವರ್ಗಸಮಾನ ಎಂದಿದ್ದಾರೆ ಒಬ್ಬರು. ನಾವು ಈಗಲೂ ಇಂಥ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:19 pm, Fri, 8 September 23