
ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ, ಕುಳಿತಲ್ಲಿಂದಲೇ ಏನು ಬೇಕಾದರೂ ಬುಕ್ ಮಾಡುವ ಕಾಲ ಘಟ್ಟದಲ್ಲಿ ನಾವೆಲ್ಲರೂ ಇದ್ದೇವೆ. ಹೀಗಾಗಿ ಆನ್‌ಲೈನ್‌ನಲ್ಲಿ (Online) ಫುಡ್ ಸೇರಿದಂತೆ ಪ್ರಾಡಕ್ಟ್‌ಗಳನ್ನು ಆರ್ಡರ್ ಮಾಡಿದರೆ ಕ್ಷಣಾರ್ಧದಲ್ಲಿಯೇ ಮನೆ ಬಾಗಿಲಿಗೆ ಬರುತ್ತದೆ. ನಿಮ್ಮ ಕೈಗೆ ಪ್ಯಾಕ್ ಮಾಡಿದ ಬಾಕ್ಸ್ ತಲುಪುತ್ತದೆ. ನಿಮ್ಮ ಆರ್ಡರ್ ಮಾಡಿದ ಪ್ರಾಡಕ್ಟ್ ನೋಡಬೇಕೆಂದರೆ ಅಥವಾ ಫುಡ್ ಸವಿಯಬೇಕಾದರೆ ಮೊದಲು ಮಾಡಬೇಕಿರುವ ಕೆಲಸ ಬಾಕ್ಸ್ ಓಪನ್ ಮಾಡೋದು. ಈ ಬಗ್ಗೆ ನಿಮಗೆ ಹೇಳಿಕೊಡಬೇಕಾಗಿಲ್ಲ. ಆದರೆ ಇದೀಗ ಈ ಪಿಜ್ಜಾ ಬಾಕ್ಸ್ (Pizza Box) ಬಹಳ ಮುಖ್ಯವಾದ ಸೂಚನೆಯನ್ನು ಬರೆಯಲಾಗಿದೆ. ಈ ಫೋಟೋವೊಂದು ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಇದು ನಿಜಕ್ಕೂ ತಮಾಷೆಯಾಗಿದೆ ಎಂದಿದ್ದಾರೆ.
@itsmemaeez ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಫೋಟೋಗೆ ಈ ಸೂಚನೆಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ವ್ಯಕ್ತಿಯೊಬ್ಬರು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಫುಡ್ ಮನೆಗೆ ಬಂದು ತಲುಪಿದೆ. ಆದರೆ ಆ ವ್ಯಕ್ತಿಯೂ ನಿಜಕ್ಕೂ ಈ ರೀತಿಯ ಸೂಚನೆಯನ್ನು ನಿರೀಕ್ಷೆಯೂ ಮಾಡಿರಲಿಕ್ಕಿಲ್ಲ. ಆದರೆ ಈ ಪಿಜ್ಜಾ ಬಾಕ್ಸ್‌ನಲ್ಲಿ ಪಿಜ್ಜಾ ತಿನ್ನುವುದಕ್ಕಿಂತ ಮೊದಲು ಬಾಕ್ಸ್ ತೆರೆಯಿರಿ ಎಂದು ಬರೆದಿರುವುನ್ನು ಕಾಣಬಹುದು.
Forever grateful for this instruction😭🤣 pic.twitter.com/dY2dplJ6NL
— Mae (@itsmemaeez) October 24, 2025
ಇದನ್ನೂ ಓದಿ:Video: ಬೈಕ್ ಅಲ್ಲ, ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್
ಅಕ್ಟೋಬರ್ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಇಪ್ಪತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಸೂಚನೆಯಿಂದಾಗಿ ನಾನು ಪಿಜ್ಜಾವನ್ನು ಇಷ್ಟಪಡಲು ಪ್ರಾರಂಭಿಸಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಇಲ್ಲ, ನಾನು ಮೊದಲು ಬಾಕ್ಸ್ ಅನ್ನೇ ತಿನ್ನುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಒಳ್ಳೆಯ ಸಲಹೆ, ಈ ರೀತಿ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Fri, 24 October 25