ಪ್ರತಿಯೊಬ್ಬ ಪೋಷಕರೂ ತನ್ನ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಡುತ್ತಾರೆ. ಇದಕ್ಕಾಗಿ ಅವರು ಎಂತಹ ತ್ಯಾಗವೂ ಮಾಡುತ್ತಾರೆ. ಅವರ ತ್ಯಾಗದ ಮುಂದೆ ನಾವು ಅವರಿಗೆ ಮಾಡುವ ಯಾವುದೇ ಉಪಕಾರವೂ ಕಡಿಮೆಯೇ. ಓರ್ವ ವಿಶೇಷಚೇತನ ವ್ಯಕ್ತಿ (specially-abled man) ತನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ನೆಟ್ಟಿಗರ ಕಣ್ಣು ಒದ್ದೆ ಮಾಡುವಂತಿದೆ.
ಇದನ್ನೂ ಓದಿ: Viral Photo: ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್ ಫೋಟೋಗಳು ವೈರಲ್
ವ್ಯಕ್ತಿಯೊಬ್ಬ ತನ್ನ ಮಗಳನ್ನು ಶಾಲೆಗೆ ಬಿಡಲು ತನ್ನ ಅಂಬಾರಿಯಂತಿರುವ ತ್ರಿಚಕ್ರ ವಾಹನದಲ್ಲಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇರುವಂತೆ, ವ್ಯಕ್ತಿ ವಿಶೇಷಚೇತನರಾಗಿದ್ದು, ಇವರ ಮಗಳು ಶಾಲಾ ಸಮವಸ್ತ್ರ ಧರಿಸಿದ್ದಾಳೆ. ಅಲ್ಲದೆ ಆ ವ್ಯಕ್ತಿ ತನ್ನ ತ್ರಿಚಕ್ರ ಸೈಕಲ್ನ ಹಿಂಬದಿ ಸೀಟಿನಲ್ಲಿ ಮಗಳನ್ನು ಕೂರಿಸಿಕೊಂಡು ಮತ್ತು ಮಗನನ್ನು ಮುಂದೆ ಕೂರಿಸಿಕೊಂಡು ಹೋಗುತ್ತಿದ್ದಾರೆ. ಇದನ್ನು ಹಿಂಬದಿ ವಾಹನ ಸವಾರರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ‘ತಂದೆ’ ಎಂದು ಶೀರ್ಷಿಕೆ ನೀಡಿದ್ದಾರೆ.
पिता ?? ? pic.twitter.com/w3buFI6BpR
— Sonal Goel IAS (@sonalgoelias) May 23, 2022
ಇದನ್ನೂ ಓದಿ: Viral Video: ನವಜಾತ ಮಗನನ್ನು ಭೇಟಿಯಾದ ಗಂಡು ಜಿರಾಫೆ, ಮತ್ತೆ ನೆಟ್ಟಿಜನ್ಗಳ ಹೃದಯ ಕದ್ದ ವಿಡಿಯೋ
Thousand Word Picture…:-)) https://t.co/UPDWAE66BL
— Vinay Kumar Tiwari (@Vinay_Journalis) May 24, 2022
ಅಂಗವೈಕಲ್ಯ ಹೊಂದಿದ್ದರೂ ಅದನ್ನು ಲೆಕ್ಕಿಸದೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಇಂಥ ತ್ಯಾಗ ಮಾಡುತ್ತಿದ್ದಾರೆ. ವಿಡಿಯೋ ನೋಡಿದಾಗ ಎಂಥ ಕಲ್ಲು ಮನಸ್ಸಿನವರ ಹೃದಯ ಕೂಡ ಕರಗಬಹುದು. ಮಗಳ ಭವಿಷ್ಯದ ಕಾಳಜಿ ಹೊಂದಿರುವ ತಂದೆಯ ಬಗ್ಗೆ ನೆಟ್ಟಿಜನ್ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಂದೆ ಮಕ್ಕಳ ಪ್ರೀತಿಯನ್ನು ಹೊಗಳುತ್ತಿದ್ದಾರೆ. ಓರ್ವ ನೆಟ್ಟಿಗ, ”ನಿಜವಾಗಿಯೂ ನನ್ನ ಹೃದಯವನ್ನು ಮುಟ್ಟಿದೆ. ಇದು ತಂದೆಯ ಬೆಲೆ ಕಟ್ಟಲಾಗದ ಪ್ರೀತಿ” ಎಂದು ಬರೆದುಕೊಂಡಿದ್ದಾನೆ.
a father always fight for his children, he always sacrifice his dreams for his children but only some of children's respect their parents when they became old and some put their parents to old age home's, that moment is much painful for every parent ❣️? https://t.co/LU0jbXni3E
— Swaroopsinh Purohit (@SwaroopsinhP) May 25, 2022
“ತಂದೆ ಯಾವಾಗಲೂ ತನ್ನ ಮಕ್ಕಳಿಗಾಗಿ ಹೋರಾಡುತ್ತಾನೆ, ಅವನು ಯಾವಾಗಲೂ ತನ್ನ ಕನಸುಗಳನ್ನು ತನ್ನ ಮಕ್ಕಳಿಗಾಗಿ ತ್ಯಾಗ ಮಾಡುತ್ತಾನೆ. ಆದರೆ ಕೆಲವು ಮಕ್ಕಳು ಮಾತ್ರ ತಮ್ಮ ಹೆತ್ತವರನ್ನು ಗೌರವಿಸುತ್ತಾರೆ, ಅವರು ವಯಸ್ಸಾದಾಗ ಮತ್ತು ಕೆಲವರು ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ, ಆ ಕ್ಷಣವು ಪ್ರತಿಯೊಬ್ಬರಿಗೂ ತುಂಬಾ ನೋವಿನಿಂದ ಕೂಡಿದೆ” ಎಂದು ಮತ್ತೋರ್ವ ನೆಟ್ಟಿಗ ಹೇಳಿಕೊಂಡಿದ್ದಾನೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ