AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನವಜಾತ ಮಗನನ್ನು ಭೇಟಿಯಾದ ಗಂಡು ಜಿರಾಫೆ, ಮತ್ತೆ ನೆಟ್ಟಿಜನ್​ಗಳ ಹೃದಯ ಕದ್ದ ವಿಡಿಯೋ

ಗುಂಡು ಜಿರಾಫೆಯೊಂದು ತನ್ನ ನವಜಾತ ಕರುವನ್ನು ಭೇಟಿಯಾಗಲು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗಲು ಆರಂಭವಾಗಿದೆ. ಜಿರಾಫೆಗಳ ಭೇಟಿಯ ಮಧುರ ಕ್ಷಣಗಳನ್ನು ನೋಡಿ ನೆಟ್ಟಿಜನ್​ಗಳು ಮನಸೋತಿದ್ದಾರೆ.

Viral Video: ನವಜಾತ ಮಗನನ್ನು ಭೇಟಿಯಾದ ಗಂಡು ಜಿರಾಫೆ, ಮತ್ತೆ ನೆಟ್ಟಿಜನ್​ಗಳ ಹೃದಯ ಕದ್ದ ವಿಡಿಯೋ
ಮಗನನ್ನು ಭೇಟಿಯಾದ ಗಂಡು ಜಿರಾಫೆImage Credit source: Twitter
TV9 Web
| Edited By: |

Updated on:May 28, 2022 | 1:33 PM

Share

ಗಂಡು ಜಿರಾಫೆ (Giraffe)ಯೊಂದು ತನ್ನ ನವಜಾತ ಕರುವನ್ನು ಮೊದಲ ಬಾರಿಗೆ ಭೇಟಿಯಾದ ವಿಡಿಯೋ (Video)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ಜಿರಾಫೆಯ ಸಂಸಾರದ ಭೇಟಿಯ ಕ್ಷಣವನ್ನು ನೋಡಿ ನೆಟ್ಟಿಗರ ಮನಸೋತಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮುದ್ದಾದ ಮರಿ ಗಂಡು ಜಿರಾಫೆ ತನ್ನ ತಾಯಿಯೊಂದಿಗೆ ಹಟ್ಟಿಯಲ್ಲಿ ಇರುತ್ತದೆ. ಈ ವೇಳೆ ತನ್ನ ಮಗನನ್ನು ನೋಡಲು ಮತ್ತೊಂದು ಮರಿಯೊಂದಿಗೆ ಆವರಣದ ಒಳಗೆ ಬಂದ ಗಂಡು ಜಿರಾಫೆ, ತನ್ನ ವಂಶದ ಕುಡಿಯನ್ನು ಭೇಟಿಯಾಗಿದೆ. ಅಲ್ಲದೆ, ಗಂಡು ಕರುವನ್ನು ಹತ್ತಿರದಿಂದ ವೀಕ್ಷಣೆ ಮಾಡಿದೆ. ಈ ಮರಿ ಜಿರಾಫೆಗೆ ಟ್ವಿಗಾ ಎಂದು ಹೆಸರಿಡಲಾಗಿದೆ. ಇದರ ತಂದೆ (ಗಂಡು ಜಿರಾಫೆ)ಯ ಹೆಸರು ಮೈಕೆಲ್.

ಇದನ್ನೂ ಓದಿ: Viral Photo: ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್ ಫೋಟೋಗಳು ವೈರಲ್

ಇದರ ವಿಡಿಯೋವನ್ನು Tansu YEGEN ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಿರಾಫೆಯ ಭೇಟಿಯ ವಿಡಿಯೋ 1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 49k ಮೆಚ್ಚುಗೆ ವ್ಯಕ್ತವಾಗಿದೆ. ತಂದೆ-ಮಗನ  ಮೊದಲ ಭೇಟಿ ಚೆನ್ನಾಗಿತ್ತು ಎಂದು ನೆಟಿಜನ್‌ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಂದೆ ಜಿರಾಫೆಯು ತನ್ನ ಮುಖದ ಮೂಲಕ ತಾಯಿ ಜಿರಾಫೆಯ ಮೇಲೆ ಎಷ್ಟು ಪ್ರೀತಿಯಿಂದ ಉಜ್ಜಿದೆ ಎಂದೂ ಹೇಳುತ್ತಿದ್ದಾರೆ.

ಅಷ್ಟಕ್ಕೂ ವೈರಲ್ ಆಗುತ್ತಿರುವ ಈ ವಿಡಿಯೋ ಹೊಸತ್ತಲ್ಲ. ಇದು 2020ರಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಈ ವಿಡಿಯೋ ನೆಟ್ಟಿಗರ ಕಣ್ಣಿಗೆ ಮತ್ತೊಮ್ಮೆ ಬಿದ್ದು ಮತ್ತೆ ವೈರಲ್ ಆಗುಲು ಪ್ರಾರಂಭವಾಗಿದೆ. ಅಲ್ಲದೆ ವಿಡಿಯೋ ಮತ್ತೆ ನೆಟ್ಟಿಜನ್​ಗಳ ಹೃದಯ ಗೆದ್ದಿದೆ. ಇದನ್ನೂ ಓದಿ: Viral Video: ಅಮ್ಮಾ ಅಂತ ತನ್ನದೇ ಸಂಭಾಷಣೆಯಲ್ಲಿ ಕೂಗುವ ಗಿಳಿಯ ವಿಡಿಯೋ ವೈರಲ್

ಇದನ್ನೂ ಓದಿ: Monkeypox ಮಂಕಿಪಾಕ್ಸ್ ವೈರಲ್ ಸೋಂಕಿನ ಬಗ್ಗೆ ಕೇಳಿಬರುತ್ತಿರುವ ಮಿಥ್ಯೆಗಳು ಮತ್ತು ಸತ್ಯಗಳು

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Sat, 28 May 22

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು