
Men and Women: ಈ ಯುವಕ ಮತ್ತು ಯುವತಿ ಒಂದೇ ಹಾಸಿಗೆಯಲ್ಲಿ ಮಲಗಿದ್ದಾರೆ. ಇಬ್ಬರೂ ತಮ್ಮ ತಮ್ಮ ಮೊಬೈಲಿನಲ್ಲಿ ಮುಳುಗಿದ್ದಾರೆ. ಹೀಗೆಂದು ನೀವು ಭಾವಿಸಿದರೆ ಅದು ಖಂಡಿತ ತಪ್ಪು. ಈ ಯುವತಿಗೆ ಆ ಯುವಕ ಮೊಬೈಲ್ನಲ್ಲಿ ಏನನ್ನು ನೋಡುತ್ತಿದ್ದಾನೆ ಎನ್ನುವ ಕುತೂಹಲ. ಆಗ ಆಕೆ ಹೂಡಿದ ತಂತ್ರ ಏನಿರಬಹುದು? ಅವನನ್ನು ಪ್ರಶ್ನಿಸದೇ ಮತ್ತು ಅವನ ಸ್ಕ್ರೀನಿನಲ್ಲಿ (Screen) ತಲೆಯನ್ನೂ ಹಾಕದೆ, ಮೌನದಲ್ಲಿಯೇ ಅವ ಏನನ್ನು ನೋಡುತ್ತಿದ್ದಾನೆ ಎನ್ನುವುದನ್ನು ಈಕೆ ಪತ್ತೆ ಹಚ್ಚಿದ್ದಾಳೆ. ಅರೆ, ಅದು ಹೇಗೆ? ಈಕೆಯೇನು ಅಂತರ್ಜ್ಞಾನಿಯೇ? ಖಂಡಿತ ಇಲ್ಲ. ಇದು ತಂತ್ರ ಮತ್ತು ಜ್ಞಾನದ ಫಲ!
ಇದನ್ನೂ ಓದಿ : Viral: ಕೇಲ್ ಸಲಾಡ್ ತಿಂದು ಮುಗಿಸುವ ಹೊತ್ತಿಗೆ ಈ ಜಿರಳೆ ಕಂಡಿತ್ತು
ಅ.10ರಂದು X ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 10 ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 1,000 ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರು ಜೀವನದಲ್ಲಿ ವಿವಿಧ ವಿಷಯಗಳಲ್ಲಿ ಬುದ್ಧಿವಂತಿಕೆ ಮತ್ತು ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಅನೇಕರು ಹೇಳಿದ್ದಾರೆ.
ಮಹಿಳೆಯರು ನಂಬಲಾಗದಂಥ ಬೌದ್ಧಿಕ ಸಾಮರ್ಥ್ಯ, ಸೃಜನಶೀಲತೆ ಮತ್ತು ಅಂತಃಪ್ರಜ್ಞೆಯನ್ನು ಹೊಂದಿದ್ದಾರೆ ಎಂದಿದ್ದಾರೆ ಒಬ್ಬರು. ಎಲ್ಲ ಹೆಣ್ಣುಮಕ್ಕಳು ಒಂದಿಲ್ಲಾ ಒಂದು ಮಾರ್ಗ ಕಂಡುಕೊಂಡಿರುತ್ತಾರೆ ಎಂದಿದ್ದಾರೆ ಇನ್ನೊಬ್ಬರು. ಬಹುಶಃ ಈಕೆ ಬೇಹುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರಬೇಕು ಎಂದಿದ್ದಾರೆ ಮತ್ತೊಬ್ಬರು. ಆದರೆ ಇಂಥ ತಂತ್ರಗಳನ್ನು ಪ್ರಯೋಗಿಸಿ ತನ್ನನ್ನು ತಾನೇ ನೋಯಿಸಿಕೊಳ್ಳುತ್ತಾರೆ ಎಂದಿದ್ದಾರೆ ಮಗದೊಬ್ಬರು. ಆದರೆ ಮಹಿಳೆಯರಷ್ಟೇ ಏಕೆ. ತಂತ್ರಜ್ಞಾನ ಮತ್ತು ಬುದ್ಧಿವಂತಿಕೆಗೆ ಲಿಂಗಬೇಧವಿದೆಯೇ? ಎಂದು ಇದೇ ಥ್ರೆಡ್ಗೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ಇನ್ನೊಬ್ಬರು.
ಸ್ವಾತಂತ್ರ್ಯವೆನ್ನುವುದು ತಂತ್ರಜ್ಞಾನದ ಸಹವಾಸದಿಂದಾಗಿ ಹೀಗೆಲ್ಲ ಹುಸಿಬೀಳುತ್ತಿದೆ. ಅವಳೇ ಆಗಲಿ ಅವನೇ ಆಗಲಿ ಪರಸ್ಪರರನ್ನು ಇಣುಕಿ ಹಾಕಬಾರದು. ಇದರಿಂದ ಹಾಳಾಗುವುದು ಅವರವರ ನೆಮ್ಮದಿಯೇ ಎನ್ನುತ್ತಿದೆ ಕೆಲಮಂದಿ.
ಈ ವಿಡಿಯೋಗಳನ್ನು ನೋಡಿದ ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:12 pm, Thu, 12 October 23