Viral : ಈ ಬಾರ್ನಲ್ಲಿ ಸಂಗೀತ ಕಛೇರಿ ನಡೆಯುತ್ತಿದೆ. ಬೀದಿಯಲ್ಲಿರುವ ಈ ನಾಯಿಗೂ ಗಿಟಾರಿನ ನಾದ ಕಿವಿಗೆ ಬಿದ್ದಿದ್ದೇ ಒಳಬರಬೇಕು ಅನ್ನಿಸಿದೆ. ಬಂದು ಇಲ್ಲಿ ಏನು ನಡೆಯುತ್ತಿದೆ ಎಂದು ನೋಡಿಕೊಂಡು ವಾಪಾಸು ಹೋಗಿಬಿಡಬಹುದಿತ್ತು. ಆದರೆ ನಾಯಿಗೆ ತಿಂಡಿಗೂ ಮಿಗಿಲಾಗಿ ತೀರ್ಥಕ್ಕೂ ಮಿಗಿಲಾಗಿ ಸಂಗೀತ ಇಷ್ಟವಾಗಿದೆ. ಅದಕ್ಕೇ ಕಲಾವಿದರೆದುರು ಕುಳಿತು ಆಲಿಸಲಾರಂಭಿಸಿದೆ. ಸ್ವಲ್ಪ ಹೊತ್ತಿನ ನಂತರ ಕಲಾವಿದರ ಹತ್ತಿರ ಬಂದು ನಿಲ್ಲುತ್ತದೆ. ಅಂದರೆ ಗಿಟಾರ್ ಬಗ್ಗೆ ಅದಕ್ಕೆ ಕುತೂಹಲ ಹುಟ್ಟಿದೆ ಎಂದರ್ಥ. ಈ ನಾದ ಹೇಗೆ ಬರುತ್ತದೆ ಎಲ್ಲಿಂದ ಬರುತ್ತದೆ ಎಂದು…
Stray dog walks into a bar and sits down to enjoy the live music. Dog clearly wanted to be part of the show so it walked up to musician and played the guitar with him. Head scratches & pats on the head are in order ??❤️???
ಇದನ್ನೂ ಓದಿ— GoodNewsCorrespondent (@GoodNewsCorres1) August 11, 2022
ಕಲಾವಿದರು ಅದರ ಕೈಹಿಡಿದು ತಂತಿಗಳ ಮೇಲೆ ಆಡಿಸಿದ್ದಾರೆ. ಹೇಳಿಕೇಳಿ ಚುರುಕು ಪ್ರಾಣಿ. ತಂತಿಗಳ ಮೇಲೆ ಕೈಯ್ಯಾಡಿಸಿದಾಗ ಪುಳಕಗೊಂಡಿದೆ. ತಾನೂ ಮತ್ತೆ ತಂತಿ ನುಡಿಸಲು ಪ್ರಯತ್ನಿಸಿದೆ. ಈ ಬೀದಿನಾಯಿಯೊಳಗೂ ನಾದ ತೀವ್ರವಾಗಿ ಇಳಿದಿದೆ ಎಂಬುದನ್ನು ನೀವು ಹೇಗೆ ಮನಗಾಣುತ್ತೀರಿ? ತಾಳಕ್ಕೆ ತಕ್ಕಂತೆ ಅಲ್ಲಾಡುತ್ತಿರುವ ಅದರ ಬಾಲವನ್ನು ನೋಡಿದರೆ ಗೊತ್ತಾಗುವುದಿಲ್ಲವೆ? ಕಲಿಕೆಯ ಸೌಲಭ್ಯ, ಶಿಸ್ತು ಮತ್ತು ಪ್ರೀತಿ ಲಭ್ಯವಾದಲ್ಲಿ ಪ್ರಾಣಿಗಳು ಕೂಡ ಕಲಿಕೆಯಲ್ಲಿ ಆಸಕ್ತಿ ತೋರದೆ ಇರುತ್ತಾವೆಯೇ?
ಇನ್ನಷ್ಟು ವೈರಲ್ ನ್ಯೂಸ್ ಗಾಗಿ ಕ್ಲಿಕ್ ಮಾಡಿ
Published On - 12:32 pm, Fri, 12 August 22