Viral Video: ‘ಇದರಲ್ಲಿ ಪಾನೀ ಮತ್ತು ಪುರಿ ಎಲ್ಲಿ?’ ನೆಟ್ಟಿಗರು ರಾವುಗಾಜು ಹಿಡಿದು ಹುಡುಕುತ್ತಿದ್ದಾರೆ

Street Chats : ಬೀದಿಬದಿಯ ವ್ಯಾಪಾರಿಗಳೇ, ಯಾಕೆ ನೀವು ಹೀಗೆ ನಮ್ಮ ಪಾನೀಪುರಿಯ ಹಿಂದೆ ಬಿದ್ದಿದ್ದೀರಿ? ಈ ನಿಮ್ಮ ಹಠಪ್ರಯೋಗ ಯಾವಾಗ ಮುಗಿಯುತ್ತದೆ? ಎಂದು ಜನರು ಕೋಪ, ಬೇಜಾರಿನಿಂದ ಕೇಳುತ್ತಿದ್ದಾರೆ.

Viral Video: ಇದರಲ್ಲಿ ಪಾನೀ ಮತ್ತು ಪುರಿ ಎಲ್ಲಿ? ನೆಟ್ಟಿಗರು ರಾವುಗಾಜು ಹಿಡಿದು ಹುಡುಕುತ್ತಿದ್ದಾರೆ
ಎಗ್ ಪಾನೀಪುರಿ

Updated on: Jul 06, 2023 | 10:07 AM

Panipuri : ಪಾನೀಪುರಿ, ಪುಚ್ಕಾ, ಗೋಲ್ಗಪ್ಪಾ (Golgappa) ಎಂದರೆ ತಿಂಡಿಪ್ರಿಯರಿಗೆ ಪಂಚಪ್ರಾಣ. ಸಾಂಪ್ರದಾಯಿಕ ಶೈಲಿಯಲ್ಲಿ ಅವುಗಳನ್ನು ತಯಾರಿಸಿದರೆ ಮಾತ್ರ ಸ್ವಾದ. ಇಲ್ಲವಾದರೆ ಅಧ್ವಾನ. ಬೀದಿಬದಿ ತಿಂಡಿ ತಯಾರಕರು ಹಠಕ್ಕೆ ಬಿದ್ದಂತೆ ದಿನವೂ ಪಾನೀಪುರಿಯ ಹೆಸರಿನಲ್ಲಿ ಪ್ರಯೋಗ ಮಾಡುತ್ತಿರುತ್ತಾರೆ. ಆದರೆ ಈತನಕ ಯಾವ ಪ್ರಯೋಗಗಳೂ ಯಶಸ್ಸು ಸಾಧಿಸಿಲ್ಲ. ಈಗ ನೋಡಿ ಈ ವಿಡಿಯೋ ವೈರಲ್ ಆಗುತ್ತಿದೆ. ಇದು ಎಗ್ ಪಾನೀಪುರಿಯಂತೆ. ನೆಟ್ಟಿಗರೆಲ್ಲ ಇದರಲ್ಲಿ ಪಾನೀ ಎಲ್ಲಿ ಮತ್ತು ಪುರಿ ಎಲ್ಲಿ ಎಂದು ಮುಗಿಬಿದ್ದು ಕೇಳುತ್ತಿದ್ದಾರೆ.

ಸೂರತ್​ನ ಫುಡ್​ ಬ್ಲಾಗರ್ ಜನಕ್ ಬಾರ್ಡೋಲಿಯಾ ಎಂಬುವವರು ಈ ವಿಡಿಯೋ ಅನ್ನು ಮೇ 26ರಂದು ಹಂಚಿಕೊಂಡಿದ್ದಾರೆ. ಈತನಕ 2.3 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ನೆಟ್ಟಿಗರೆಲ್ಲ ಸಿಡಿಮಿಡಿಗೊಳ್ಳುತ್ತ  ಈ ಪೋಸ್ಟ್​ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇಲ್ಲದ್ದನ್ನು ಇದೇ ಎಂದು ಬಿಂಬಿಸುತ್ತಿರುವುದೇಕೆ, ಪಾನೀಪುರಿಯ ಒಂದಂಶವಾದರೂ ಇದರಲ್ಲಿ ಏನಾದರೂ ಇದೆಯಾ? ಎಂದು ಕೇಳುತ್ತಿದ್ದಾರೆ.

ಇದನ್ನೂ ಓದಿ : Viral: ಪಿವಿಆರ್ ಪಾಪ್​ಕಾರ್ನ್ ಬೆಲೆಯೂ ಅಮೇಝಾನ್ ತ್ರೈಮಾಸಿಕ​ ಚಂದಾ ಬೆಲೆಯೂ ಒಂದೇ

ನನಗಂತೂ ಇದನ್ನು ನೋಡಿ ವಾಂತಿ ಬರುತ್ತಿದೆ, ಖಂಡಿತ ಇಂಥ ಪ್ರಯೋಗಗಳನ್ನು ನಾನಂತೂ ಖಂಡಿಸುತ್ತೇನೆ ಎಂದಿದ್ದಾರೆ ಕೆಲವರು. ಎಲ್ಲಾ ಬಿಟ್ಟು ನಮ್ಮ ದೇವರಾದ ಪಾನೀಪುರಿಯನ್ನು ಹೀಗೆ ಅವಮಾನಿಸುವುದೆ? ಎಂದಿದ್ದಾರೆ ಒಬ್ಬರು. ಇದರೊಂದಿಗೆ ಬಂಗಾರವನ್ನು ಉಚಿತವಾಗಿ ಕೊಡುತ್ತೇವೆಂದರೂ ನಾನಂತೂ ತಿನ್ನಲಾರೆ, ವಾಕರಿಕೆ ಬರುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಜಿಯಾ ಜಲೇ ಜಾನ್​ ಜಲೇ; ಹಾರ್ಮೋನಿಯಂನಲ್ಲಿ ದಿಲ್​ಸೇ ಹಾಡು

ಎಗ್​ ಚಾಟ್​ ಅಂತ ಹೆಸರಿಟ್ಟಿದ್ದರೂ ಸರಿ ಹೋಗುತ್ತಿತ್ತು ಎನ್ನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಲು ಇವರುಗಳೆಲ್ಲ  ಬೇಕೆಂದೇ ಹೀಗೆ ಮಾಡುತ್ತಿದ್ದಾರೆ ಎನ್ನುವುದಂತೂ ಜನಕ್ಕೆ ಈಗಾಗಲೇ ತಿಳಿದಿದೆ. ಪಾನೀಪುರಿ ತಿನ್ನಲು ಹೋದಾಗ ನಿಮ್ಮ ಕಣ್ಣಮುಂದೆ ಈ ಎಗ್ ಪಾನೀಪುರಿ ಕಣ್ಮುಂದೆ ಬರದಿದ್ದರೆ ಅಷ್ಟೇ ಸಾಕು! ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ