
ಶಾಲೆಯಲ್ಲಿ ಮಕ್ಕಳು ತಮಾಷೆಯಾಗಿ ಕೆಲವೊಂದು ಚೇಷ್ಟೆಗಳನ್ನು ಮಾಡುವುದು ಸಹಜ. ಅದು ವಿದ್ಯಾರ್ಥಿ ಜೀವನದಲ್ಲಿ ಮಾಡಲೇಬೇಕು. ಶಿಕ್ಷಕರ ಕೂಡ ಮಕ್ಕಳ ತುಂಟಾಟಕ್ಕೆ ಮನಸೋತ ಅದೆಷ್ಟೋ ನಿದರ್ಶನಗಳು ಇವೆ. ಇದೀಗ ಎಕ್ಸ್ ಖಾತೆಯಲ್ಲಿ ಇಂಥಹದೇ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿ ಹಲವು ನೆಟ್ಟಿಗರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ತಮಾಷೆಯಾಗಿ ವೈರಲ್ ಆಗಿದೆ. ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಟಿಫಿನ್ ಬಾಕ್ಸ್ ಬದಲು ಐಫೋನ್ ಬಾಕ್ಸ್‌ನಲ್ಲಿ (iPhone lunchbox) ಪರಾಠಾ ತಂದಿದ್ದಾನೆ. ಈ ವಿಡಿಯೋವನ್ನು ನೋಡಿ ನೆಟ್ಟಿಗರು, ಈ ವಿದ್ಯಾರ್ಥಿ ತುಂಬಾ ಬುದ್ಧಿವಂತ ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಐಫೋನ್ ಬಾಕ್ಸ್ ಹಿಡಿದುಕೊಂಡಿರುವುದನ್ನು ಕಾಣಬಹುದು, ಬಾಲಕನ ಕೈಯಲ್ಲಿರುವ ಬಾಕ್ಸ್ನ್ನು ನೋಡಿ ಶಿಕ್ಷಕರು ಏನಿದು? ಎಂದು ಕೇಳುತ್ತಾರೆ. ವಿದ್ಯಾರ್ಥಿಯು ಅತ್ಯಂತ ಗಂಭೀರತೆಯಿಂದ ಮೇಡಂ, ಪರಾಠಾ ಎಂದು ಉತ್ತರಿಸುತ್ತಾನೆ. ಈ ಬಾಲಕನ ತಮಾಷೆಗೆ ಶಿಕ್ಷಕರು ಕೂಡ ಮುಗ್ದವಾಗಿ ನಗುತ್ತಾರೆ. ಆ ಬಾಕ್ಸ್ನ್ನು ಓಪನ್ ಮಾಡುವಂತೆ ಹೇಳುತ್ತಾರೆ. ವಿದ್ಯಾರ್ಥಿ ಬಾಕ್ಸ್ ತೆರೆದಾಗ ಶಿಕ್ಷಕರು ಅಚ್ಚರಿ ಪಡುತ್ತಾರೆ. ಈ ಐಫೋನ್ ಬಾಕ್ಸ್‌ನಲ್ಲಿ ಭಾರೀ ದುಬಾರಿಯ ಫೋನ್ ಇರಬೇಕಿತ್ತು. ಆದರೆ ಅದರಲ್ಲಿ ಪರಾಠಾವನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಶಿಕ್ಷಕರು ಇದನ್ನು ಯಾರು ಪ್ಯಾಕ್ ಮಾಡಿದ್ದು? ಇದು ಊಟದ ಬಾಕ್ಸ್ನಂತೆ ಕಾಣುತ್ತಿದೆಯೇ? ಎಂದು ಏರುಧ್ವನಿಯಲ್ಲಿ ಕೇಳಿದ್ದಾರೆ. ಆದರೆ ಹುಡುಗ ಶಾಂತವಾಗಿ “ಮೇಡಂ, ನಾನೇ ಅದನ್ನು ಪ್ಯಾಕ್ ಮಾಡಿದ್ದು” ಎಂದು ಉತ್ತರಿಸುತ್ತಾನೆ.
ಇದನ್ನೂ ಓದಿ: ನೀರಿನ ಪೈಪ್ ರಿಪೇರಿ ಮಾಡುತ್ತಿದ್ದ ವೇಳೆ ಹೆಬ್ಬಾವು ದಾಳಿ: 10 ನಿಮಿಷಗಳ ಕಾಲ ಒದ್ದಾಡಿದ ವ್ಯಕ್ತಿ
Achar Lana bhul gya Earbuds mai 😂😂😂😂 pic.twitter.com/LS6xEM3R0L
— Harry (@hariom5sharma) November 25, 2025
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇದೊಂದು ಬುದ್ಧಿವಂತ ವಿದ್ಯಾರ್ಥಿಯ ಲಕ್ಷಣ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ. ಒಬ್ಬ ನೆಟ್ಟಿಗ ಹೀಗೆ ಹೇಳುತ್ತಾರೆ. “ಆ ವಿದ್ಯಾರ್ಥಿಯ ಟಿಫಿನ್ ಬಾಕ್ಸ್ ಮುರಿದಿರಬೇಕು. ಆ ಕಾರಣಕ್ಕೆ ಪ್ಲಾನ್ ಬಿ ಮಾಡಿದ್ದಾನೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಇದು 1.5 ಲಕ್ಷ ರೂ. ಲಂಚ್ ಬಾಕ್ಸ್ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ