ದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಫಲಿತಾಂಶಗಳನ್ನು 2024 ಮೇ 13 ರಂದು ಅಂದರೆ ನಿನ್ನೆ ಘೋಷಿಸಲಾಗಿತ್ತು. ಇದೀಗ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೋಮವಾರ ಪೂರ್ವ ದೆಹಲಿಯ ಲಕ್ಷ್ಮೀ ನಗರ ಪ್ರದೇಶದಲ್ಲಿ ಪೊಲೀಸರು ತಿಳಿಸಿದ್ದಾರೆ.
ಪಿಟಿಐ ಪ್ರಕಾರ, ವಿದ್ಯಾರ್ಥಿಯ ದೇಹವು ಪೇಯಿಂಗ್-ಗೆಸ್ಟ್(PG) ವಸತಿಗೃಹದಲ್ಲಿ ಕೋಣೆಯೊಂದರಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉತ್ತರ ಪ್ರದೇಶದ ಇಟಾವಾದಿಂದ ಬಂದ ಮೃತ ಬಾಲಕ ಅರ್ಜುನ್ ಸಕ್ಸೇನಾ 12 ನೇ ತರಗತಿ ಪರೀಕ್ಷೆಯೊಂದಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಪಿಯು ಪರೀಕ್ಷೆಗಳಲ್ಲಿ ಅವರು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದು, ಖಿನ್ನತೆಗೆ ಒಳಗಾಗಿದ್ದ ಎಂದು ವಸತಿಗೃಹದಲ್ಲಿ ಉಳಿದುಕೊಂಡಿರುವ ಇತರರ ಹೇಳಿಕೆಗಳನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Viral News: 5 ರೂ. ಕುರ್ಕುರೆ ತಂದಿಲ್ಲ ಎಂದು ಗಂಡನಿಗೆ ಡಿವೋರ್ಸ್ ನೀಡಿದ ಪತ್ನಿ
ಘಟನೆಯ ಬಗ್ಗೆ ಸಕ್ಸೇನಾ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ