AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bodi Tribe: ದೊಡ್ಡ ಹೊಟ್ಟೆ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಲು ಇಲ್ಲಿ ಯುವತಿಯರು ಮುಗಿಬೀಳುತ್ತಾರೆ

ಇಲ್ಲೊಂದು ಬುಡಕಟ್ಟು ಜನಾಂಗದಲ್ಲಿ ದೊಡ್ಡ ಹೊಟ್ಟೆ ಹೊಂದಿರುವ ಪುರುಷರನ್ನು ಮದುವೆಯಾಗಲು ಯುವತಿಯರು ಮುಗಿಬೀಳುತ್ತಾರೆ. ಅತೀ ದೊಡ್ಡ ಹೊಟ್ಟೆ ಹೊಂದಿರುವ ವ್ಯಕ್ತಿ ಯಾರು ಎಂದು ತಿಳಿಯಲು ಇಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಗೆಲ್ಲುವವರನ್ನು ಹಳ್ಳಿಯ ಅತ್ಯಂತ ಸುಂದರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.

Bodi Tribe: ದೊಡ್ಡ ಹೊಟ್ಟೆ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಲು ಇಲ್ಲಿ ಯುವತಿಯರು ಮುಗಿಬೀಳುತ್ತಾರೆ
ಬೋಡಿ ಬುಡಕಟ್ಟು
ಅಕ್ಷತಾ ವರ್ಕಾಡಿ
|

Updated on: May 14, 2024 | 11:49 AM

Share

ಪ್ರತೀ ಯುವತಿಗೂ ತಾನು ಮದುವೆಯಾಗುವ ಹುಡುಗ ಸುಂದರವಾಗಿರಬೇಕು, ಒಳ್ಳೆ ಹೈಟು, ಸಿಕ್ಸ್​​ ಪ್ಯಾಕ್​​ ಹೀಗೆ ಹತ್ತು ಹಲವು ಕನಸುಗಳಿರುತ್ತದೆ. ಆದರೆ ಇಲ್ಲೊಂದು ಬುಡಕಟ್ಟು ಜನಾಂಗದಲ್ಲಿ ದೊಡ್ಡ ಹೊಟ್ಟೆ ಹೊಂದಿರುವ ಹುಡುಗರನ್ನೇ ಮದುವೆಯಾಗಲು ಯುವತಿಯರು ಮುಗಿಬೀಳುತ್ತಾರೆ. ಹೊಟ್ಟೆ ದೊಡ್ಡದಿದ್ದಷ್ಟು ಇಲ್ಲಿನ ಯುವಕರ ಸೌಂದರ್ಯ ಹೆಚ್ಚುತ್ತದೆ ಎಂಬದು ಇಲ್ಲಿನ ಜನರ ನಂಬುತ್ತಾರೆ. ಇದಲ್ಲದೇ ವರ್ಷಕೊಮ್ಮೆ ಇಲ್ಲಿ ಹೊಟ್ಟೆ ದೊಡ್ಡದಿರುವ ಯುವಕನನ್ನು ವರಿಸುವ ಯುವತಿಯರಿಗಾಗಿ ಸ್ವಯಂವರ ನಡೆಯುತ್ತದೆ.

ದಕ್ಷಿಣ ಇಥಿಯೋಪಿಯಾದ ದೂರದ ಪ್ರದೇಶವಾದ ಓಮೋ ಕಣಿವೆಯಲ್ಲಿ ವಾಸಿಸುವ ಬೋಡಿ ಬುಡಕಟ್ಟು ಜನಾಂಗದವರ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರತಿ ವರ್ಷ ಈ ಬುಡಕಟ್ಟಿನಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಅತ್ಯಂತ ದಪ್ಪ ಹೊಟ್ಟೆ ಹೊಂದಿರುವ ವ್ಯಕ್ತಿ ಎಂಬ ಸ್ಪರ್ಧೆ. ಇದರಲ್ಲಿ ಗೆಲ್ಲುವವರನ್ನು ಹಳ್ಳಿಯ ಅತ್ಯಂತ ಸುಂದರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Viral News: 5 ರೂ. ಕುರ್ಕುರೆ ತಂದಿಲ್ಲ ಎಂದು ಗಂಡನಿಗೆ ಡಿವೋರ್ಸ್​​​ ನೀಡಿದ ಪತ್ನಿ

ಬೋಡಿ ಬುಡಕಟ್ಟಿನ ಮಹಿಳೆಯರು ದಪ್ಪಗಿರುವ ಪುರುಷರಿಂದ ಆಕರ್ಷಿತರಾಗುತ್ತಾರೆ. ಈ ಪುರುಷರನ್ನು ಮದುವೆಯಾಗಲು ಯುವತಿಯರು ಮುಗಿಬೀಳುತ್ತಾರೆ. ಈ ಸ್ಪರ್ಧೆಯನ್ನು ಗೆಲ್ಲಲು, ಬುಡಕಟ್ಟಿನ ಪುರುಷರು 6 ತಿಂಗಳ ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಬೊಜ್ಜು ಹೆಚ್ಚಿಸಲು ಅವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. 6 ತಿಂಗಳುಗಳ ವರೆಗೆ ಇದರಲ್ಲಿ ಹಸುವಿನ ರಕ್ತ ಮತ್ತು ಹಾಲು ಕುಡಿಯುವುದು ಅತ್ಯುತ್ತಮವೆಂದು ಈ ಜನಾಂಗದಲ್ಲಿ ಪರಿಗಣಿಸಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ