ಮೀರತ್, ಏಪ್ರಿಲ್ 25: ವಿದ್ಯಾರ್ಥಿಯೊಬ್ಬ 10ನೇ ತರಗತಿಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಬಾಲಕನಿಗೆ ಪರೀಕ್ಷೆಯಲ್ಲಿ ಶೇ.93.5 ಅಂಕ ಬಂದಿದ್ದು, ಇದರಿಂದಾಗಿ ಖುಷಿ ತಾಳಲಾರದೇ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಕುಟುಂಬ ಸದಸ್ಯರ ಪ್ರಕಾರ, ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ (UPMSP) UP ಬೋರ್ಡ್ 10 ನೇ ತರಗತಿ ಫಲಿತಾಂಶಗಳನ್ನು ಏಪ್ರಿಲ್ 20 ರಂದು ಬಿಡುಗಡೆ ಮಾಡಲಾಗಿದೆ. ಸುನೀಲ್ ಕುಮಾರ್ ಅವರ ಪುತ್ರ ಅಂಶುಲ್ ಕುಮಾರ್ (16) ಮಹರ್ಷಿ ದಯಾನಂದ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಕಾತರದಿಂದ ಕಾಯುತ್ತಿದ್ದರು. ಈ ಕ್ರಮದಲ್ಲಿ ಶನಿವಾರ ಪ್ರಕಟವಾದ ಬೋರ್ಡ್ ಫಲಿತಾಂಶದಲ್ಲಿ ಬಾಲಕ ಫಲಿತಾಂಶಗಳನ್ನು ಪರಿಶೀಲಿಸಿದ್ದಾನೆ.
ಇದನ್ನೂ ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
ಫಲಿತಾಂಶದಲ್ಲಿ ಬಾಲಕ 93.5 ಶೇಕಡಾ ಅಂಕಗಳನ್ನು ಪಡೆದಿದ್ದು, ಅಂಶುಲ್ ಜೊತೆಗೆ ಕುಟುಂಬಸ್ಥರೂ ಸಂಭ್ರಮಿಸಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಆತನ ಕುಟುಂಬಸ್ಥರು ಆತನ್ನನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ. ಸದ್ಯ ಅನ್ಶುಲ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಐಸಿಯುಗೆ ದಾಖಲಾದ ಬಳಿಕ ವಿದ್ಯಾರ್ಥಿ ಅಂಶುಲ್ ಆರೋಗ್ಯ ಸ್ಥಿರವಾಗಿದೆ ಎಂದು ಅಂಶುಲ್ ಸಂಬಂಧಿ ಪುಷ್ಪೇಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ