ಮರಳು ಕಲಾಕೃತಿಯಲ್ಲಿ ಕಂಚಿನ ಪದಕ ವಿಜೇತೆ ಪಿವಿ ಸಿಂಧು ಮಿಂಚುತ್ತಿದ್ದಾರೆ. ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್ನಲ್ಲಿ ಮರಳು ಕಲಾಕೃತಿಯನ್ನು ರಚಿಸುವ ಮೂಲಕ ಆಟಗಾರ್ತಿ ಪಿವಿ ಸಿಂಧುಗೆ ಶುಭ ಹಾರೈಸಿದ್ದಾರೆ. ಪಿವಿ ಸಿಂಧು ಬ್ಯಾಡ್ಮಿಂಟನ್ ಆಟದ ಬ್ಯಾಟ್ ಹಿಡಿದು ನಿಂತಿರುವ ಚಿತ್ರ ಅದ್ಭುತವಾಗಿದೆ.
ಸುದರ್ಶನ್ ಪಟ್ನಾಯಕ್ ರಚಿಸಿದ ಮರಳು ಕಲಾಕೃತಿಯನ್ನು ಗಮನಿಸಿದ ಪಿವಿ ಸಿಂಧು ಪ್ರತಿಕ್ರಿಯೆ ನೀಡಿದ್ದು ಧನ್ಯವಾದ ತಿಳಿಸಿದ್ದಾರೆ. ಜತೆಗೆ ಮರಳು ಕಲೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪಟ್ನಾಯಕ್ ಅವರ ಮರಳು ಕಲೆ ಯಾವಾಗಲೂ ಭಾರತೀಯರನ್ನು ಆಕರ್ಷಿಸುತ್ತದೆ. ಸಾಮಾಜಿಕ ಸಮಸ್ಯೆಗಳು ಮತ್ತು ದೇಶಕ್ಕೆ ಹೆಮ್ಮೆ ತರುವ ವಿಷಯಗಳ ಕುರಿತಾಗಿ ಅವರು ಮರಳು ಕಲೆಯನ್ನು ರಚಿಸುತ್ತಾರೆ. ಮರಳು ಕಲೆ ಮೂಲಕ ಜನರಿಗೆ ಜಾಗೃತಿ ಮೂಡಿವ ಕಾರ್ಯದಲ್ಲಿಯೂ ಪಟ್ನಾಯಕ್ ಅವರು ತೊಡಗಿಕೊಂಡಿದ್ದಾರೆ.
ಪಟ್ನಾಯಕ್ ಅವರು 60ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮರಳು ಕಲೆ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿದ್ದಾರೆ. ದೇಶಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಅವರಿಗೆ ಇಟಾಲಿಯನ್ ಗೋಲ್ಡನ್ ಸ್ಯಾಂಡ್ ಆರ್ಟ್ ಪ್ರಶಸ್ತಿ ನೀಡಲಾಯಿತು. 2014ರಲ್ಲಿ ಭಾರತ ಸರ್ಕಾರ ಪಟ್ನಾಯಕ್ ಅವರಿಗೆ ಪ್ರದ್ಮಶ್ರಿ ನೀಡಿ ಗೌರವಿಸಿದೆ.
Wow love this piece of work! Thank you so much @sudarsansand ??? https://t.co/7uqmHrCZlY
— Pvsindhu (@Pvsindhu1) August 2, 2021
#Amul Topical: First Indian woman to win two Olympic medals! pic.twitter.com/ZNVYyYI7XN
— Amul.coop (@Amul_Coop) August 2, 2021
ಇದನ್ನೂ ಓದಿ:
PV Sindhu: ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದ ಪಿವಿ ಸಿಂಧು ಗುರು ಯಾರು?