ಬೆಂಗಳೂರು : ಮನೆಯಲ್ಲಿ ಪ್ರಾಣಿಗಳನ್ನು ಮುದ್ದಿನಿಂದ ಸಾಕಿಕೊಂಡು ಅವುಗಳನ್ನು ಮನೆಯ ಜನರಂತೆ ಕಾಣುತ್ತೇವೆ. ಅವುಗಳ ಜನ್ಮದಿನವನ್ನೂ ಆಚರಣೆ ಮಾಡಿ ಖುಷಿಪಡುತ್ತೇವೆ. ಅಂತಹ ಸಾಕು ಪ್ರಾಣಿಗಳಲ್ಲಿ ಮುಂಚೂಣಿಯಲ್ಲಿ ಕಂಡುಬರುವವು ಶ್ವಾನಗಳು. ತನ್ನ ಒಡೆಯನಿಗೆ, ತನ್ನನ್ನು ಮುದ್ದಿಸುವವರಿಗೆ ನಿಯತ್ತಿನಿಂದ ಇರುವ ಜೀವಿ. ಮನೆಯ ಕಾವಲಾಗಿ, ಮನೆ ಜನರ ನೆಚ್ಚಿನ ಸ್ನೇಹಿತನಾಗಿ ಶ್ವಾನಗಳು ಇರುತ್ತವೆ. ಅವುಗಳ ತುಂಟಾಟ, ಅವುಗಳ ಜೀವನ ಪ್ರೀತಿ ನಿಜಕ್ಕೂ ಮಾನವನ ಜೀವನಕ್ಕೆ ಮಾದರಿ. ಇಂತಹ ಶ್ವಾನಗಳ ವಿವಿಧ ರೀತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದಕ್ಕೆ ನೆಟ್ಟಿಗರು ಮನಸೋತು ವಿವಿಧ ರೀತಿಯ ಕಾಮೆಂಟ್ಗಳನ್ನು ಹಂಚಿಕೊಳ್ಳುತ್ತಾರೆ. ಅಂತಹದ್ದೇ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ಫೋಸಿಸ್ ಪೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮನೆಯಲ್ಲಿ ಸಾಕಿದ ಮುದ್ದಿನ ನಾಯಿ ಗೋಪಿಯ ಜನ್ಮದಿನದಂದು ಹಾಡು ಹೇಳಿಕೊಂಡು ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ನವೆಂಬರ್ 27ರಂದು ನಡೆದಿದ್ದು, ಆದರೆ ಈಗ ವೈರಲ್ ಆಗಿದೆ. ಸುಧಾಮೂರ್ತಿ ಅವರು ತಮ್ಮ ಮುದ್ದಿನ ಶ್ವಾನಕ್ಕೆ ಹಾಡು ಹೇಳಿ ಆರತಿ ಬೆಳಗಿ ಜನ್ಮದಿನ ಆಚರಿಸಿದ ವಿಡಿಯೋವನ್ನು ಪತ್ರಕರ್ತ ಆರ್ ಶ್ರೀಕಾಂತ್ ಅವರು ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಧಾ ಮೂರ್ತಿ ಯುವಜನತೆಗೆ ಸದಾ ಸ್ಪೂರ್ತಿಯಾದವರು. ತಮ್ಮ ನಡೆ, ನುಡಿ, ಸಮಾಜ ಸೇವಗಳಲ್ಲಿ ಸದಾ ತೊಡಗಿಸಿಕೊಂಡು ಜನತೆಗೆ ಹತ್ತಿರವಾದವರು. ಪ್ರಾಣಿಗಳ ವಿಷಯದಲ್ಲಿಯೂ ಅಷ್ಟೇ ಭಾವುಕ ಮನಸ್ಥಿಯುಳ್ಳವರು ಸುಧಾ ಮೂರ್ತಿಯವರು ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ವೀಡಿಯೋ ಇಲ್ಲಿದೆ
ಇದನ್ನೂ ಓದಿ:
ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ
GGVV: ‘ಗರುಡ ಗಮನ..’ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಕೋರ್ಟ್ಗೆ ಅರ್ಜಿ; ಮಾದೇವ ಹಾಡಿನ ಬಗ್ಗೆ ಆಕ್ಷೇಪ