AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ

ಬೆಂಗಳೂರಿನಲ್ಲಿ ಡಿಸೆಂಬರ್ 1, 2021ರಿಂದ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಟೋ ಮೀಟರ್​ಗೆ ಮಾಡಬೇಕಾದ ಮಾರ್ಪಾಡುಗಳಿಗೆ 90 ದಿನದ ಗಡುವು ನೀಡಿದ್ದು, ಪರಿಷ್ಕೃತ ದರ ಪಟ್ಟಿ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ
ಆದೇಶದ ವಿವರ
TV9 Web
| Updated By: Srinivas Mata|

Updated on:Dec 07, 2021 | 2:32 PM

Share

ಬೆಂಗಳೂರು: ಬೆಂಗಳೂರು ನಗರದ ಆಟೋ ಚಾಲಕರು ಹಾಗೂ ಪ್ರಯಾಣಿಕರು ಇಬ್ಬರಿಗೂ ಅತಿ ಮುಖ್ಯವಾದ ಸುದ್ದಿ ಇದು. ಈಗಾಗಲೇ ಆಟೋ ಪ್ರಯಾಣ ದರಗಳನ್ನು ಡಿಸೆಂಬರ್ 1, 2021ರಿಂದ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ದರಪಟ್ಟಿಯನ್ನು ಸಹ ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಕಳುಹಿಸಿಕೊಟ್ಟಿದೆ. ಇದಕ್ಕೆ ತಕ್ಕಂತೆ ಡಿಸೆಂಬರ್ 1ರಿಂದ ಆರಂಭಗೊಂಡು 90 ದಿನಗಳ ಒಳಗಾಗಿ ಆಟೋ ಮೀಟರ್​ಗಳನ್ನು ಹೊಸ ದರಕ್ಕೆ ತಕ್ಕಂತೆ ಮಾರ್ಪಾಟುಗಳನ್ನು ಪರಿಶೀಲಿಸಿ ಹಾಗೂ ಮರು ಮುದ್ರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾನೂನು ಮಾಪನ ನಿರೀಕ್ಷಕರಿಗೆ (ತನಿಖಾ ದಳವನ್ನು ಹೊರತುಪಡಿಸಿ) ಆದೇಶ ಮಾಡಲಾಗಿದೆ.

Revised Rate

ಹಳೆ ಹಾಗೂ ಹೊಸ ಪ್ರಯಾಣ ದರ ಪಟ್ಟಿ

ಹೊಸದಾದ ಪರಿಷ್ಕರಣೆ ಆದ ಮೇಲೆ ಈವರೆಗೆ 1.90 ಕಿ.ಮೀ. ದೂರಕ್ಕೆ ಇದ್ದ ಪ್ರಯಾಣ ದರವು 25 ರೂಪಾಯಿಂದ ಮೂವತ್ತು ರೂಪಾಯಿಗೆ ಹೆಚ್ಚಳವಾಗುತ್ತದೆ. ಆ ನಂತರ ಮೂರು ಕಿಲೋಮೀಟರ್​ಗಾದರೆ 6 ರೂಪಾಯಿ, 4 ಕಿ.ಮೀ.ಗಾದರೆ 8 ರೂಪಾಯಿ, 5 ಕಿ.ಮೀ.ಗೆ 10 ರೂಪಾಯಿ, 6 ಕಿ.ಮೀ.ಗೆ 12 ರೂಪಾಯಿ ಹೀಗೆ ಹೆಚ್ಚಳವಾಗುತ್ತದೆ. ಉದಾಹರಣೆಗೆ ಈ ಹಿಂದೆ 2 ಕಿ.ಮೀ. ಪ್ರಯಾಣದರ 30 ರೂಪಾಯಿ ಇದ್ದದ್ದು 35 ರೂ. ಆಗುತ್ತದೆ. ಅದೇ ರೀತಿ 3 ಕಿ.ಮೀ.ಗೆ 39 ರೂಪಾಯಿ ಇದ್ದದ್ದು 45 ರೂ. ಆಗುತ್ತದೆ. ಇನ್ನು 4 ಕಿಲೋಮೀಟರ್​ಗೆ 52 ರೂಪಾಯಿಯಿಂದ 60 ರೂಪಾಯಿಗೆ ಮುಟ್ಟುತ್ತದೆ.

Revised Rate

ಹಳೇ ಹಾಗೂ ಹೊಸ ದರದ ಪಟ್ಟಿ

ಇದೇ ರೀತಿಯಾಗಿ ಗರಿಷ್ಠ 25 ಕಿ.ಮೀ. ದೂರಕ್ಕೆ ಆಟೋದಲ್ಲಿ ಪ್ರಯಾಣಿಸಿದರೆ 325 ರೂಪಾಯಿ ಆಗುತ್ತಿದ್ದದ್ದು ದರ ಹೆಚ್ಚಳ ಮಾಡಿದ ನಂತರದಲ್ಲಿ 375 ರೂಪಾಯಿ ಆಗುತ್ತದೆ. ಆ ಮೂಲಕ 50 ರೂಪಾಯಿ ಜಾಸ್ತಿ ಆಗುತ್ತದೆ. ತೈಲ ದರಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಆಟೋ ಚಾಲಕರ ಒತ್ತಾಯವಾಗಿತ್ತು. ಇದೀಗ ಹೆಚ್ಚಳ ಮಾಡಲಾಗಿದೆ. ಹಿಂದಿನ ಮತ್ತು ಈಗಿನ ದರಗಳ ಪಟ್ಟಿ ವಿವರ ಇಲ್ಲಿ ಲಭ್ಯವಿದೆ.

ಇದನ್ನೂ ಓದಿ: ಆಟೋ ಪ್ರಯಾಣಿಕರೇ ಗಮನಿಸಿ; ಬೆಂಗಳೂರಿನಲ್ಲಿ ಇವತ್ತಿನಿಂದ ಆಟೋ ಪ್ರಯಾಣ ದರ ಏರಿಕೆ

Published On - 2:31 pm, Tue, 7 December 21

ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ