Murder: ಕುಡಿದ ಮತ್ತಿನಲ್ಲಿ ಬೈಕ್ ಓಡಿಸುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಕುಡಿದ ಮತ್ತಿನಲ್ಲಿ ಬೈಕ್ ಓಡಿಸುವ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಈ ವೇಳೆ ಗಣೇಶ್ನನ್ನು ಆತನ ಸ್ನೇಹಿತರು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬಿಸಾಕಿ ಹೋಗಿದ್ದಾರೆ.
ಬೆಂಗಳೂರು: ಕುಡಿದ ಮತ್ತಿನಲ್ಲಿ ಬೈಕ್ ಓಡಿಸುವ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ಲಗ್ಗೆರೆಯ ನಿವಾಸಿ ಗಣೇಶ್(22) ಹತ್ಯೆಯಾದ ಯುವಕ.
ಕುಡಿದ ಮತ್ತಿನಲ್ಲಿ ಬೈಕ್ ಓಡಿಸುವ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಈ ವೇಳೆ ಗಣೇಶ್ನನ್ನು ಆತನ ಸ್ನೇಹಿತರು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬಿಸಾಕಿ ಹೋಗಿದ್ದಾರೆ. ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಲು ಯತ್ನಿಸಿದ್ದು ಚೇಸ್ ಮಾಡಿ ತಾವರೆಕೆರೆ ಪೊಲೀಸರು ಆರೋಪಿಗಳನ್ನ ಹಿಡಿದಿದ್ದಾರೆ. ಬೆಂಗಳೂರಿನ ಲಗ್ಗೇರಿ ನಿವಾಸಿಗಳಾದ ಸುನೀಲ್ ಕುಮಾರ್, ಗಿರೀಶ್ ಬಂಧಿತ ಆರೋಪಿಗಳು.
ಕೋರ್ಟ್ ಬಳಿಯೇ ಅಕ್ಕನ ಗಂಡನಿಗೆ ಅಳಿಯನಿಂದ ಇರಿತ ದಾವಣಗೆರೆ ಜಿಲ್ಲೆ ಜಗಳೂರು ಕೋರ್ಟ್ ಆವರಣದಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಕೌಟುಂಬಿಕ ಕಲಹ ಹಿನ್ನೆಲೆ ಕೋರ್ಟ್ ಆವರಣದಲ್ಲಿಯೇ ಅಕ್ಕನ ಗಂಡನಿಗೆ ಅಳಿಯ ಚಾಕು ಇರಿದ ಘಟನೆ ನಡೆದಿದೆ. ಮಾವ ಮಂಜುನಾಥನಿಗೆ (35) ತೀವ್ರ ಗಾಯವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಜಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಾಕುವಿನಿಂದ ಇರಿದು ಅಳಿಯ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ. ಅಕ್ಕನ ಜೊತೆ ಸಂಸಾರ ಮಾಡದೇ ಇನ್ನೊಬ್ಬಳ ಜೊತೆ ಮದ್ವೆಯಾಗಲು ಮಂಜುನಾಥ ಮುಂದಾಗಿದ್ದ. ತನ್ನ ಅಕ್ಕನಿಗೆ ವಿಚ್ಛೇದನ ನೀಡಲು ಮುಂದಾದ ಮಾವನಿಗೆ ಚಾಕು ಹಾಕಿ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮುಂದಿನ ಕೊರೊನಾ ರೂಪಾಂತರಿ ವೈರಸ್ ಹೆಚ್ಚು ಮಾರಕ, ಸಾಂಕ್ರಾಮಿಕವಾಗಿರಲಿದೆ; ಆಕ್ಸ್ಫರ್ಡ್ ವಿಜ್ಞಾನಿ ಎಚ್ಚರಿಕೆ