Shocking News: ಆತ್ಮಹತ್ಯೆಗಾಗಿ ಯಂತ್ರ ಸಿದ್ದಪಡಿಸಿದ ಸ್ವಿಜರ್ಲ್ಯಾಂಡ್; ನೋವೇ ಆಗದಂತೆ ಒಂದು ನಿಮಿಷದಲ್ಲಿ ಸಾಯಬಹುದು

ಸ್ವಿಜರ್ಲ್ಯಾಂಡ್​ನಲ್ಲಿ ಆತ್ಮಹತ್ಯೆ ಪಾಡ್‌ಗಳು ಎಂದು ಕರೆಯಲ್ಪಡುವ ಸಾರ್ಕೊ ಹೆಸರಿನ ಯಂತ್ರವನ್ನು ಪರಿಚಯಿಸಲಾಗಿದೆ. ಶವಪೆಟ್ಟಿಗೆಯನ್ನು ಹೊಲುವ ಈ ಯಂತ್ರ ಯಾವುದೇ ತರಹದ ನೋವು ಉಂಟು ಮಾಡದೆ ಒಂದು ನಿಮಿಷದಲ್ಲಿ ಮರಣ ಹೊಂದುವಂತೆ ಮಾಡುತ್ತದೆ.

Shocking News: ಆತ್ಮಹತ್ಯೆಗಾಗಿ ಯಂತ್ರ ಸಿದ್ದಪಡಿಸಿದ ಸ್ವಿಜರ್ಲ್ಯಾಂಡ್; ನೋವೇ ಆಗದಂತೆ ಒಂದು ನಿಮಿಷದಲ್ಲಿ ಸಾಯಬಹುದು
ಸಾರ್ಕೊ ಯಂತ್ರ
Follow us
TV9 Web
| Updated By: preethi shettigar

Updated on:Dec 08, 2021 | 8:44 AM

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾನಸಿಕ ಒತ್ತಡ, ಜೀವನಶೈಲಿಯಲ್ಲಿನ ಬದಲಾವಣೆ, ಸಂಸಾರದಲ್ಲಿ ಉಂಟಾಗುವ ವೈಮನಸ್ಸು, ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲಿಲ್ಲ, ಪ್ರೀತಿಯಲ್ಲಿ ಮೋಸ ಹೀಗೆ ಆತ್ಮಹತ್ಯೆಗೆ ನಾನಾ ಕಾರಣಗಳು ಇವೆ. ಆದರೆ ಕೆಲವೊಮ್ಮೆ ಕಾರಣವೇ ಇಲ್ಲದೆ ಪ್ರಾಣ ಕಳೆದುಕೊಂಡ ಘಟನೆಗಳು ಅನೇಕವು ನಮ್ಮ ಮುಂದೆ ಇದೆ. ಅದರಲ್ಲೂ ಆತ್ಮಹತ್ಯೆ (Suicide) ಮಾಡಿಕೊಳ್ಳುವುದು ಅಪರಾಧ. ಹೀಗಿದ್ದರೂ ಇದು ಇನ್ನು ಚಾಲ್ತಿಯಲ್ಲಿದೆ. ಆದರೆ ಈಗ ಆತ್ಮಹತ್ಯೆಗಾಗಿಯೇ ವಿಶೇಷ ಯಂತ್ರವೊಂದನ್ನು ಸಿದ್ಧಪಡಿಸಲಾಗಿದೆ. ನಂಬಲು ಇದು ಕೊಂಚ ದೂರದ ಮಾತಾದರೂ ಇದೇ ಸತ್ಯ. ಸ್ವಿಜರ್ಲ್ಯಾಂಡ್​ನಲ್ಲಿ ಆತ್ಮಹತ್ಯೆಗಾಗಿಯೇ ಯಂತ್ರವೊಂದನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಕಾನೂನುಬದ್ಧಗೊಳಿಸಲಾಗಿದೆ.

ಸ್ವಿಜರ್ಲ್ಯಾಂಡ್​ನಲ್ಲಿ ಆತ್ಮಹತ್ಯೆ ಪಾಡ್‌ಗಳು ಎಂದು ಕರೆಯಲ್ಪಡುವ ಸಾರ್ಕೊ ಹೆಸರಿನ ಯಂತ್ರವನ್ನು ಪರಿಚಯಿಸಲಾಗಿದೆ. ಶವಪೆಟ್ಟಿಗೆಯನ್ನು ಹೊಲುವ ಈ ಯಂತ್ರ ಯಾವುದೇ ತರಹದ ನೋವು ಉಂಟು ಮಾಡದೆ ಒಂದು ನಿಮಿಷದಲ್ಲಿ ಮರಣ ಹೊಂದುವಂತೆ ಮಾಡುತ್ತದೆ. ಸಾರ್ಕೊ ಯಂತ್ರಗಳು 3ಡಿ ಮುದ್ರಿತ ಕ್ಯಾಪ್ಸುಲ್‌ಗಳಾಗಿವೆ. ಈ ಯಂತ್ರದಲ್ಲಿ ಆಮ್ಲಜನಕದ ಸವಕಳಿಯಿಂದಾಗಿ ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾದಿಂದ ಸಾವು ಸಂಭವಿಸುತ್ತದೆ.

ಒಂದು ವರದಿಯ ಪ್ರಕಾರ, ಶವಪೆಟ್ಟಿಗೆಯನ್ನು ಹೋಲುವ ಸಾರ್ಕೊ 2022 ರಲ್ಲಿ ಸ್ವಿಜರ್ಲ್ಯಾಂಡ್​ನಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಇದನ್ನು ಡಾ. ಫಿಲಿಪ್ ನಿಟ್ಷ್ಕೆ ನೆದರ್ಲ್ಯಾಂಡ್​ನ ಮೂಲಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಸಾರ್ಕೊ ಯಂತ್ರವು ನಿಯಂತ್ರಿತ ವಸ್ತುಗಳನ್ನು ಬಳಸದೆ ದಯಾಮರಣವನ್ನು ಒದಗಿಸುತ್ತವೆ. ಈಗಾಗಲೇ ಸ್ವಿಜರ್ಲ್ಯಾಂಡ್​ನಲ್ಲಿ ದಯಾಮರಣ ಕಾನೂನುಬದ್ಧವಾಗಿದ್ದು, ಕಳೆದ ವರ್ಷ ಸುಮಾರು 1,300 ಜನರು ದಯಾಮರಣ ಸ್ವೀಕರಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವ ವ್ಯಕ್ತಿ ಪೆಟ್ಟಿಯೊಳಗೆ ಮಲಗಬೇಕು. ಆಗ ಅನೇಕ ಪ್ರಶ್ನೆಗಳನ್ನು ಈ ಯಂತ್ರ ಕೇಳುತ್ತದೆ. ಎಲ್ಲದಕ್ಕೂ ಉತ್ತರ ನೀಡಿದ ನಂತರ ಅಂತಿಮವಾಗಿ ಈ ಯಂತ್ರದ ಒಳಗಿನ ಬಟನ್ ಒತ್ತಬೇಕು. ಕ್ಯಾಪ್ಸುಲ್ ಅದರ ಒಳಭಾಗವನ್ನು ಸಾರಜನಕದಿಂದ ತುಂಬಿಸುತ್ತದೆ ಮತ್ತು ಆಮ್ಲಜನಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಇದರಿಂದಾಗಿ ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ. ಅಂತಿಮವಾಗಿ ಉಸಿರುಗಟ್ಟುತ್ತದೆ. ಇಡೀ ಪ್ರಕ್ರಿಯೆಯು ಸುಮಾರು ಒಂದು ನಿಮಿಷ ತೆಗೆದುಕೊಳ್ಳುತ್ತದೆ.

ಈ ಯಂತ್ರವನ್ನು ಉಪಯೋಗಿಸಲು ಬಯಸುವವರಿಗೆ ಯಾವುದೇ ರೀತಿಯ ಒತ್ತಡ ಇರುವುದಿಲ್ಲ ಅಥವಾ ಯಾರ ಅಪ್ಪಣೆಯೂ ಬೇಕಿಲ್ಲ. ಇನ್ನು ಸೂಜಿ ಚುಚ್ಚಿಕೊಳ್ಳುವುದು ಅಥವಾ ಇನ್ನಿತರ ನೋವು ಕೂಡ ಇರುವುದಿಲ್ಲ. ಆತ್ಮಹತ್ಯೆಗೆ ಸಾರ್ಕೊ ಯಂತ್ರ ಬಳಕೆ ಸುಲಭ ಎಂದು ಡಾ. ಫಿಲಿಪ್ ನಿಟ್ಷ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಗಂಡ ಬ್ಲೌಸ್ ಹೊಲಿದಿದ್ದು ಸರಿಯಾಗಿಲ್ಲವೆಂದು ಹೆಂಡತಿ ಆತ್ಮಹತ್ಯೆ!

ಕಳೆದ ವರ್ಷ ಮಾದಕ ವ್ಯಸನ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ

Published On - 8:41 am, Wed, 8 December 21

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್